Meena about her Second Marriage: ನನಗೆ ಸುಖಕ್ಕಿಂತ ಅದೇ ಮುಖ್ಯ’ ಎರಡನೇ ಮದುವೆ ಬಗ್ಗೆ ಅಚ್ಚರಿ ಹೇಳಿಕೆ ನೀಡಿದ ನಟಿ ಮೀನಾ

Share the Article

Meena about her Second Marriage: ಬಾಲ ನಟಿಯಾಗಿ ಬಣ್ಣದ ಲೋಕಕ್ಕೆ ಕಾಲಿಟ್ಟ ಮೀನಾ (Meena)ನಾಯಕಿಯಾಗಿ ನಟಿಸಿ ಎಲ್ಲ ಭಾಷೆಗಳಲ್ಲೂ ಸೈ ಎನಿಸಿಕೊಂಡಿದ್ದಾರೆ. ಕಳೆದ ವರ್ಷ ಮೀನಾ ಪತಿ ವಿದ್ಯಾ ಸಾಗರ್‌ ನಿಧನರಾಗಿದ್ದು, ಇವರು ನಿಧನರಾದ ಎರಡು ತಿಂಗಳ ಬಳಿಕ ಮೀನಾ ಎರಡನೇ ಮದುವೆ ಆಗಲಿದ್ದಾರೆ(Meena about her Second Marriage) ಎಂಬೆಲ್ಲ ಸುದ್ದಿ ಜೋರಾಗಿ ಹರಿದಾಡಿತ್ತು.

ನಟಿ ಮೀನಾ ಪತಿ ವಿದ್ಯಾಸಾಗರ ಕಳೆದುಕೊಂಡ ನೋವಿನಲ್ಲಿ ಮಗಳ ಜೊತೆಗೆ ಸಿಂಗಲ್‌ ಪೇರೆಂಟ್‌ ಆಗಿ ಜೀವನ ನಡೆಸುತ್ತಿರುವುದು ಗೊತ್ತಿರುವ ಸಂಗತಿ. ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿರುವ ಮಾತುಗಳಿಗೆ ಬೇಸರ ವ್ಯಕ್ತಪಡಿಸಿದ್ದಾರೆ. ಧನುಷ್‌ ಮಾತ್ರವಲ್ಲದೆ, ಖ್ಯಾತ ಉದ್ಯಮಿ, ಹಿರಿಯ ಸ್ಟಾರ್‌ ನಟನೊಬ್ಬರ ಜತೆಗೆ ಮೀನಾ ಮದುವೆಯಾಗಲಿದ್ದಾರೆ ಎಂದೆಲ್ಲ ಸುದ್ದಿಗಳು ಹರಿದಾಡಿ ಇದೀಗ ಯೂಟ್ಯೂಬ್‌ಗೆ ನೀಡಿದ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

ಇದನ್ನು ಓದಿ: Driving Licence: ಡ್ರೈವಿಂಗ್ ಲೈಸೆನ್ಸ್ ಮಾಡಿಸಲು ದೇಶಾದ್ಯಂತ ಬಂತು ಹೊಸ ರೂಲ್ಸ್ – ಇನ್ಮುಂದೆ ಡ್ರೈವಿಂಗ್ ಟೆಸ್ಟ್ ಅಗತ್ಯವೇ ಇಲ್ಲ !!

“ನಾಳೆ ಏನಾಗುತ್ತದೋ ಎಂಬುದು ನನಗೆ ತಿಳಿದಿಲ್ಲ. ಮುಂದಿನ ಎರಡು ವರ್ಷದಲ್ಲಿ ಏನೆಲ್ಲ ಆಗಬಹುದು ಎಂಬ ಊಹೆ ಕೂಡ ನನಗಿಲ್ಲ. ಹಾಗಾಗಿ ಸದ್ಯಕ್ಕೆ ಮಗಳೇ ನನಗೆ ಎಲ್ಲ” ಎಂದು ನಟಿ ಮೀನಾ ಹೇಳಿಕೊಂಡಿದ್ದಾರೆ. ಮತ್ತೊಂದೆಡೆ, ಮದುವೆ ಎಂಬುದು ಸಣ್ಣ ವಿಚಾರವಲ್ಲ. ಇದು ಬಹು ಮುಖ್ಯ ನಿರ್ಧಾರ ಹೀಗಾಗಿ, ನನ್ನ ಜೊತೆಗಿರುವ ಮಗಳ ಬಗ್ಗೆ ಕೂಡ ಆಲೋಚನೆ ಮಾಡಬೇಕಾಗುತ್ತದೆ. ಎಂದಿಗೂ ನನ್ನ ಮೊದಲ ಆದ್ಯತೆ ನನ್ನ ಮಗಳು. ಈ ನಿಟ್ಟಿನಲ್ಲಿ ನನ್ನ ಕಂಫರ್ಟ್‌ಗಾಗಿ, ನನ್ನ‌ ಸುಖಕ್ಕಾಗಿ ನಾನು ಯಾವುದೇ ನಿರ್ಧಾರ ಕೈಗೊಳ್ಳುವುದಿಲ್ಲ. ಮುಂದೆ ಹೇಗೆ ಬರುತ್ತದೋ ಹಾಗೇ ಸಾಗಬೇಕು. ಏಕೆಂದರೆ ಕಾಲ ನಮ್ಮ ಕೈಯಲ್ಲಿಲ್ಲ ಎನ್ನುವ ಮೂಲಕ ಹರಿದಾಡುತ್ತಿರುವ ಗಾಳಿ ಸುದ್ದಿಗಳಿಗೆ ನಟಿ ಮೀನಾ ತೆರೆ ಎಳೆದಿದ್ದಾರೆ.

Leave A Reply