Sukanya Samriddhi yojana: ಸುಕನ್ಯಾ ಸಮೃದ್ಧಿ ಬಡ್ಡಿ ದರದಲ್ಲಿ ಏರಿಕೆ – ಕೇಂದ್ರದಿಂದ ಹೊಸ ವರ್ಷಕ್ಕೆ ಮತ್ತೊಂದು ಗಿಫ್ಟ್
Interest rates: 2023-24ನೇ ಆರ್ಥಿಕ ವರ್ಷದ ಕೊನೆಯ ತ್ತೈಮಾಸಿಕದ ಅವಧಿಗೆ ಕೇಂದ್ರ ಸರಕಾರ ಸುಕನ್ಯಾ ಸಮೃದ್ಧಿ(Sukanya Samriddhi Account) ಒಳಗೊಂಡಂತೆ 2 ಪ್ರಮುಖ ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿದರವನ್ನು ಪರಿಷ್ಕರಿಸಿ ಬಡ್ಡಿದರವನ್ನು(Interest rates) ಹೆಚ್ಚಳ ಮಾಡಿದೆ.
ಅಂಚೆ ಕಚೇರಿಯ 3 ವರ್ಷ ಅವಧಿ ಠೇವಣಿ ಮೇಲಿನ ಬಡ್ಡಿದರವನ್ನು ಶೇ.7 ರಿಂದ ಶೇ.7.1ಕ್ಕೆ ಹೆಚ್ಚಳ ಮಾಡಿದೆ. ಇದರ ಜೊತೆಗೆ ಸುಕನ್ಯಾ ಸಮೃದ್ಧಿ ಯೋಜನೆಯ ಠೇವಣಿ ಮೇಲಿನ ಬಡ್ಡಿದರವನ್ನು ಶೇ.8ರಿಂದ ಶೇ.8.2ಕ್ಕೆ ಏರಿಕೆ ಮಾಡಲಾಗಿದೆ.
* ಸುಕನ್ಯಾ ಸಮೃದ್ಧಿ ತ್ತೈಮಾಸಿಕ ಬಡ್ಡಿದರ ಅಕ್ಟೋಬರ್ ನಿಂದ ಡಿಸೆಂಬರ್- ಶೇ.8 ಬಡ್ಡಿದರವಿದೆ. ಜನವರಿಯಿಂದ ಮಾರ್ಚ್‌ವರೆಗೆ – ಶೇ .8.2 ಬಡ್ಡಿದರವಿದೆ.
* ಅಂಚೆ ಕಚೇರಿ 3 ವರ್ಷ ಠೇವಣಿ ತ್ತೈಮಾಸಿಕ ಬಡ್ಡಿದರ
ಅಕ್ಟೋಬರ್ ನಿಂದ ಡಿಸೆಂಬರ್ ವರೆಗೆ ಶೇ.7 ಬಡ್ಡಿದರ
ಜನವರಿಯಿಂದ ಮಾರ್ಚ್‌ವರೆಗೆ ಶೇ.7.1 ಬಡ್ಡಿ ದರ
ಕೇಂದ್ರ ಹಣಕಾಸು ಸಚಿವಾಲಯ ಈ ಕುರಿತು ಮಾಹಿತಿ ನೀಡಿದ್ದು, 2022-23ರ ಜನವರಿ 1 ರಿಂದ ಮಾರ್ಚ್ 31ರ ವರೆಗಿನ ತ್ತೈಮಾಸಿಕದ ಅವಧಿಗೆ ವಿವಿಧ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರ ಪರಿಷ್ಕರಿಸಲಾಗಿದೆ. ಇದನ್ನು ಹೊರತುಪಡಿಸಿ ಎಲ್ಲ ಉಳಿತಾಯ ಯೋಜನೆಗಳ (ಪಬ್ಲಿಕ್ ಪ್ರಾವಿಡೆಂಟ್ ಫಂಡ್- ಪಿಪಿಎಫ್, ಕಿಸಾನ್ ವಿಕಾಸ್ ಪತ್ನ, ಸೀನಿಯರ್ ಸಿಟಿಜನ್ ಸೇವಿಂಗ್ಸ್ ಸೇರಿದಂತೆ) ಬಡ್ಡಿ ದರ ಅದೇ ಸ್ಥಿತಿಯಲ್ಲಿದೆ.