Child Rescue: ಅಚಾನಕ್‌ಆಗಿ ರೂಂ ನಲ್ಲಿ 3 ವರ್ಷದ ಮಗು ಲಾಕ್‌; ಮಗುವಿನ ರಕ್ಷಣೆ ಕಾರ್ಯ ಮಾಡಿದ ಅಗ್ನಿಶಾಮಕ ಸಿಬ್ಬಂದಿ!!

Mangaluru Child Rescue: ಮಕ್ಕಳ ತುಂಟಾಟವು ಒಮ್ಮೊಮ್ಮೆ ಪೋಷಕರಿಗೆ ಸಂಕಷ್ಟ ನೀಡುವ ಮಟ್ಟದವರೆಗೆ ಹೋಗುತ್ತದೆ. ಮಕ್ಕಳ ಮೇಲೆ ಎಷ್ಟೇ ನಿಗಾ ವಹಿಸಿದರೂ ಕ್ಷಣ ಮಾತ್ರದಲ್ಲಿ ಏನಾದರೂ ಅನಾಹುತ ಸಂಭವಿಸುತ್ತದೆ. ಅಂತಹುದೇ ಒಂದು ಘಟನೆಯೊಂದು ಅಪಾರ್ಟ್‌ಮೆಂಟ್‌ವೊಂದರಲ್ಲಿ ನಡೆದಿದೆ. ಮಂಗಳೂರಿನ ಅಪಾರ್ಟ್‌ಮೆಂಟ್‌ವೊಂದರ ರೂಂ ನಲ್ಲಿ ಸಿಲುಕಿದ್ದ ಮಗುವನ್ನು ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ರಕ್ಷಣೆ ಮಾಡಿದ್ದಾರೆ.

ಕೊಡಿಯಾಲ್‌ ಗುತ್ತಿನ ಅಪಾರ್ಟ್‌ಮೆಂಟ್‌ನಲ್ಲಿ ಮಗುವೊಂದು ಆಟವಾಡುತ್ತಾ ಮನೆಯೊಳಗಿದ್ದ ರೂಮಿಗೆ ಹೋಗಿದ್ದು, ಕೂಡಲೇ ರೂಮಿನ ಡೋರ್‌ ಅಚಾನಕ್‌ ಆಗಿ ಲಾಕ್‌ ಆಗಿದೆ. ವಾಪಸ್‌ ಡೋರ್‌ ಅನ್‌ಲಾಕ್‌ ಮಾಡಲು ಆಗದೆ ಮಗು ಅಳಲು ಶುರು ಮಾಡಿತ್ತು. ಮಗುವಿನ ಅಳುವಿನ ಶಬ್ದ ಕೇಳಿ ಪೋಷಕರು ರೂಮಿನ ಬಾಗಿಲು ತೆರೆಯಲು ಮುಂದಾಗಿದ್ದಾರೆ. ಆದರೆ ಆಗಲಿಲ್ಲ. ಕೊನೆಗೆ ಗಾಬರಿಗೊಂಡ ಮನೆ ಮಂದಿ ಅಗ್ನಿಶಾಮಕ ಸಿಬ್ಬಂದಿಗೆ ಕರೆ ಮಾಡಿದ್ದಾರೆ. ಕೂಡಲೇ ಪಾಂಡೇಶ್ವರ ಅಗ್ನಿಶಾಮಕ ತಂಡದವರು ಬಂದು ಹಗ್ಗದ ಸಹಾಯದಿಂದ ನಾಲ್ಕನೇ ಮಹಡಿಗೆ ಇಳಿದು ಕೋಣೆಯೊಳಗೆ ಸಿಲುಕಿದ್ದ ಪುಟ್ಟ ಕಂದನ ರಕ್ಷಣೆ ಮಾಡಿದ್ದಾರೆ.

ಇದನ್ನು ಓದಿ: Spirit Airlines Flight: ಅಜ್ಜಿಯ ನೋಡೋ ಆಸೆಯಿಂದ ಒಬ್ಬನೇ ವಿಮಾನ ಏರಿದ 6ರ ಬಾಲಕ – ಆದ್ರೆ ಹತ್ತಿದ್ದು ಮಾತ್ರ ಬೇರೆ ವಿಮಾನ, ನಂತರ ಏನಾಯ್ತು?!

Leave A Reply

Your email address will not be published.