Home Food Food Tips: ಈ ಒಂದು ನ್ಯಾಕ್ ನಿಮ್ಮಲ್ಲಿದ್ದರೆ ಸಾಕು, ಉತ್ತಮವಾದ ಚಿಕನ್- ಮಟನ್ ಖರೀದಿಸಬಹುದು !!

Food Tips: ಈ ಒಂದು ನ್ಯಾಕ್ ನಿಮ್ಮಲ್ಲಿದ್ದರೆ ಸಾಕು, ಉತ್ತಮವಾದ ಚಿಕನ್- ಮಟನ್ ಖರೀದಿಸಬಹುದು !!

Food Tips

Hindu neighbor gifts plot of land

Hindu neighbour gifts land to Muslim journalist

Food Tips: ನಾನ್ವೆಜ್ ಪ್ರಿಯರಿಗೆ ಚಿಕನ್ ಆಗಿರಲಿ, ಮಟನ್ ಆಗಿರಲಿ ಎಲ್ಲವೂ ಇಷ್ಟವಾಗುತ್ತದೆ.ಮನೆಯಲ್ಲಿ ನೀವು ಮಾಡುವ ಮಾಂಸದ ಅಡುಗೆ ರುಚಿಕರವಾಗಿರಲು ಅಂಗಡಿಯಲ್ಲಿ ನೀವು ಖರೀದಿಸುವ ಮಾಂಸ(Meat)ಉತ್ತಮವಾಗಿರಬೇಕು. ಮಾಂಸ ಖರೀದಿಸುವಾಗ ಕೆಲ ವಿಚಾರಗಳನ್ನು ಗಮನದಲ್ಲಿರಿಸಿಕೊಂಡಿರಬೇಕು. ನೀವೇನಾದರೂ ಮಾಂಸ ಖರೀದಿ ಮಾಡುವಾಗ ಹೇಗೆ ಖರೀದಿ ಮಾಡಬೇಕು? ಅದರ ಗುಣಮಟ್ಟ ಪತ್ತೆ ಹಚ್ಚುವುದು ಹೇಗೆ(Food Tips)ಎಂದು ಯೋಚಿಸುತ್ತಿದ್ದರೆ, ನಿಮಗೆ ಬೆಸ್ಟ್ ಟಿಪ್ಸ್ ಇಲ್ಲಿದೆ ನೋಡಿ!!

ಸ್ಪರ್ಶ:
ಮಾಂಸವನ್ನು ಖರೀದಿ ಮಾಡುವಾಗ ಅದನ್ನು ಮುಟ್ಟಿ ಮತ್ತು ಅದರ ರಚನೆಯನ್ನು ನೋಡುವ ಮೂಲಕ ಅದನ್ನು ಖರೀದಿ ಮಾಡಬಹುದು. ನಿಮ್ಮ ಬೆರಳುಗಳನ್ನು ಮಾಂಸದ ಮೇಲಿಟ್ಟು ಒತ್ತಿ ತೆಗೆದಾಗ ಬಲೂನ್ ಅದರ ಮೂಲ ಆಕಾರಕ್ಕೆ ಹಿಂತಿರುಗಿದರೆ, ನೀವು ಅದನ್ನು ಆರಾಮವಾಗಿ ಖರೀದಿ ಮಾಡಬಹುದು.

ಮಾಂಸದ ಬಣ್ಣ:
ಮಾಂಸವನ್ನು ಖರೀದಿ ಮಾಡುವಾಗ ಅದರ ಬಣ್ಣದ ಮೂಲಕ ನೀವು ಮಾಂಸದ ಗುಣಮಟ್ಟವನ್ನು ಪತ್ತೆಹಚ್ಚಬಹುದು. ಯಾವಾಗಲೂ ಮಟನ್, ಚಿಕನ್ ಖರೀದಿಸುವಾಗ ಕೆಂಪಗಿರುವ ಮಾಂಸವನ್ನು ಖರೀದಿಸುವುದು ಉತ್ತಮ. ಅಂದರೆ ತಿಳಿ ಗುಲಾಬಿ ಅಥವಾ ಬಿಳಿ ಮಾಂಸವು ಆರೋಗ್ಯಕರವಾಗಿರುತ್ತದೆ. ಆದರೆ ಮಾಂಸವು ತುಂಬಾ ಗಾಢ ಬಣ್ಣದಲ್ಲಿದ್ದರೆ ಅದು ಹಳೆಯ ಮಾಂಸವಾಗಿರಬಹುದು.
ಭುಜದ ಭಾಗ:
ಸಾಮಾನ್ಯವಾಗಿ ಮಾಂಸದ ಭುಜದ ಭಾಗದಲ್ಲಿರುವ ಮಾಂಸ ಹೆಚ್ಚಿನ ಕ್ಯಾಲೋರಿಗಳನ್ನು ಒಳಗೊಂಡಿರುವುದು ಮಾತ್ರವಲ್ಲದೇ ಹೃದಯದ ತೊಂದರೆಗಳನ್ನು ಒಳಗೊಂಡಿರುತ್ತದೆ. ಹೀಗಾಗಿ, ಚರ್ಮವನ್ನು ತೆಗೆದು ಮಾಂಸವನ್ನು ಖರೀದಿಸಿ ಬೇಯಿಸುವುದು ದೇಹಕ್ಕೆ ಆರೋಗ್ಯವನ್ನು ಒದಗಿಸುತ್ತದೆ.

ಇದನ್ನು ಓದಿ: Intresting news: 1947 ರಂದು ಭಾರತಕ್ಕೆ ಬ್ರಿಟಿಷರಿಂದ ಸ್ವಾತಂತ್ರ್ಯ ದೊರಕಿದರೂ, ಈ ರಾಜ್ಯಗಳಿಗೆ ಮಾತ್ರ ಸ್ವಾತಂತ್ರ್ಯ ಸಿಕ್ಕಿರಲಿಲ್ಲ!!! ಅವು ಯಾವುದು ಗೊತ್ತೇ?

ಮಾಂಸದ ವಾಸನೆ:
ಮಾಂಸವನ್ನು ಖರೀದಿ ಮಾಡುವಾಗ ಅದರ ವಾಸನೆಯು ಉತ್ತಮವಾಗಿದ್ದರೆ ಖರೀದಿ ಮಾಡಬಹುದು. ಒಂದು ವೇಳೆ ಅದರಿಂದ ಕೆಟ್ಟ ವಾಸನೆ ಬರುತ್ತಿದ್ದರೆ ಮಾಂಸ ಖರೀದಿ ಮಾಡದಿರುವುದು ಒಳ್ಳೆಯದು.

ಗುಣಮಟ್ಟದ ಮಾಂಸ:
ಮಾಂಸವನ್ನು ವಿಶೇಷವಾಗಿ ಸ್ವಂತ ಸಾಕಣೆ ಹೊಂದಿರುವ ಮತ್ತು ಜಾನುವಾರುಗಳನ್ನು ಸಾಕುವವರಿಂದ ಮಾಂಸವನ್ನು ಖರೀದಿ ಮಾಡಬಹುದು. ಆನ್ಲೈನ್ನಲ್ಲಿ ನಿರ್ದಿಷ್ಟ ಮಾಂಸದ ಅಂಗಡಿಯ ಗುಣಮಟ್ಟ ಹಾಗೂ ವಿಮರ್ಶೆಗಳನ್ನು ಕೂಡ ಪರಿಶೀಲಿಸಬಹುದು.

ಮಾಂಸದಲ್ಲಿ ಕೊಬ್ಬು:
ಮಾರ್ಬ್ಲಿಂಗ್ ಎನ್ನುವುದು ಕೆಂಪು ಮಾಂಸದ ಮೇಲ್ಭಾಗದಲ್ಲಿ ಕೊಬ್ಬು-ಸಮೃದ್ಧ ಬಿಳಿಯ ತೆಳುವಾದ ಗೆರೆಗಳ ರಚನೆ ಹೊಂದಿದೆ. ಮಾಂಸವು ಬಿಳಿ ಬಣ್ಣದಿಂದ ಕೂಡಿದ್ದರೆ, ಅದು ಹೆಚ್ಚು ರುಚಿ ಹೊಂದಿರುತ್ತದೆ.ಮಾಂಸವನ್ನು ಆರಿಸಿ, ಖರೀದಿ ಮಾಡಬಹುದು.

ಸರಿಯಾಗಿ ಪ್ಯಾಕ್:
ಮಾಂಸದ ಗುಣಮಟ್ಟವು ಸರಿಯಾಗಿ ಪ್ಯಾಕ್ ಮಾಡಿದರೆ ಮಾತ್ರ ಉತ್ತಮವಾಗಿರುತ್ತದೆ. ಮಾಂಸವು ಬ್ಯಾಕ್ಟೀರಿಯಾದ ರೀತಿಯಲ್ಲಿ ಸೂಕ್ಷ್ಮಾಣು ಜೀವಿಗಳ ಬೆಳವಣಿಗೆಯಿಲ್ಲದೇ ತಾಜಾವಾಗಿರುತ್ತದೆ. ಒಂದು ವೇಳೆ ಪ್ಯಾಕಿಂಗ್ನಲ್ಲಿ ಯಾವುದೇ ಸಣ್ಣ ರಂಧ್ರಗಳಿದ್ದರೆ, ಗಾಳಿಯು ಪ್ರವೇಶಿಸಿ ಮಾಂಸದ ಗುಣಮಟ್ಟವನ್ನು ಹಾಳಾಗುವ ಸಾಧ್ಯತೆಯಿದೆ.

ಆಹಾರ ಸುರಕ್ಷತೆ:
ಮಾಂಸ ಮಾತ್ರವಲ್ಲದೇ ಎಲ್ಲಾ ಆಹಾರ ಉತ್ಪನ್ನಗಳು ಗುಣಮಟ್ಟ ನಿಯಂತ್ರಣವಾಗಿದೆಯೇ ಎಂದು ಪರಿಶೀಲಿಸಬೇಕು. ಭಾರತದಲ್ಲಿ ಪ್ಯಾಕ್ ಮಾಡಲಾದ ಮಾಂಸವನ್ನು ಖರೀದಿ ಮಾಡುವಾಗ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಅನುಮೋದನೆ ಹೊಂದಿದೆಯೇ ಎಂಬುದನ್ನು ಗಮನಿಸಬೇಕು.