Home Karnataka State Politics Updates Pakistan Election‌: ಪಾಕಿಸ್ತಾನ ಚುನಾವಣೆ – ಮೊದಲ ಬಾರಿಗೆ ಹಿಂದೂ ಯುವತಿ ಸ್ಪರ್ಧೆ !!

Pakistan Election‌: ಪಾಕಿಸ್ತಾನ ಚುನಾವಣೆ – ಮೊದಲ ಬಾರಿಗೆ ಹಿಂದೂ ಯುವತಿ ಸ್ಪರ್ಧೆ !!

Pakistan Election‌
Image source: ABP live.com

Hindu neighbor gifts plot of land

Hindu neighbour gifts land to Muslim journalist

Pakistan Election‌: ಪಾಕಿಸ್ತಾನದ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಹಿಂದೂ ಮಹಿಳೆಯೊಬ್ಬರು (hindu woman) ಸಾರ್ವತ್ರಿಕ ಚುನಾವಣೆಯ(Pakistan Election) ಅಖಾಡಕ್ಕೆ ಇಳಿಯಲು ಮುಂದಾಗಿದ್ದಾರೆ.

ಪಾಕಿಸ್ತಾನದ 16ನೇ ರಾಷ್ಟ್ರೀಯ ಅಸೆಂಬ್ಲಿಯ ಸದಸ್ಯರನ್ನು ಆಯ್ಕೆ ಮಾಡಲು 2024ರ ಫೆಬ್ರವರಿ 8ರಂದು ಸಾರ್ವತ್ರಿಕ ಚುನಾವಣೆಗಳು ನಡೆಯಲಿವೆ. ಪಾಕಿಸ್ತಾನದ ಚುನಾವಣಾ ಆಯೋಗದ (ECP) ಇತ್ತೀಚಿನ ತಿದ್ದುಪಡಿಯ ಅನುಸಾರ ಸಾಮಾನ್ಯ ಸ್ಥಾನಗಳಲ್ಲಿ ಮಹಿಳಾ ಅಭ್ಯರ್ಥಿಗಳಿಗೆ ಶೇಕಡಾ ಐದರಷ್ಟು ಮೀಸಲು ಕಡ್ಡಾಯ ಮಾಡಿದೆ. ಇದರ ಬೆನ್ನಲ್ಲೇ ಹಿಂದೂ ಧರ್ಮೀಯರಾದ ಸವೀರಾ ಪ್ರಕಾಶ್, ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ (PPP)ಟಿಕೆಟ್‌ನಲ್ಲಿ ಚುನಾವಣೆಗೆ ಸ್ಪರ್ಧಿಸುವ ಅಭಿಲಾಷೆ ವ್ಯಕ್ತಪಡಿಸಿದ್ದಾರೆ. ಸವೀರಾ ಪ್ರಕಾಶ್ ಅವರು ಖೈಬರ್ ಪಖ್ತುಂಖ್ವಾದ ಬುನೆರ್ ಜಿಲ್ಲೆಯಲ್ಲಿ ಸಾಮಾನ್ಯ ಸ್ಥಾನಕ್ಕೆ ಸ್ಪರ್ಧೆಗೆ ನಾಮಪತ್ರ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ.

2022ರಲ್ಲಿ ಅಬೋಟಾಬಾದ್ ಇಂಟರ್ನ್ಯಾಷನಲ್ ಮೆಡಿಕಲ್ ಕಾಲೇಜಿನ ಪದವೀಧರರಾಗಿರುವ ಸಮೀರಾ ಪ್ರಕಾಶ್ ಅವರು ಬುನೆರ್‌ನಲ್ಲಿ PPP ಮಹಿಳಾ ವಿಭಾಗದ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬುನೆರ್ ಪಾಕಿಸ್ತಾನದ ಜೊತೆಗೆ ವಿಲೀನಗೊಂಡ 55 ವರ್ಷಗಳ ಬಳಿಕ ಈ ಪ್ರದೇಶದಲ್ಲಿ ಚುನಾವಣೆಗೆ ಸ್ಪರ್ಧಿಸಲು ವಿಶೇಷವಾಗಿ ಹಿಂದೂ ಮಹಿಳೆಯೊಬ್ಬರು ಮುಂದಾಗಿದ್ದಾರೆ.

ಇದನ್ನು ಓದಿ: Pratap Simha Brother: ಪ್ರತಾಪ್‌ ಸಿಂಹ ತಮ್ಮ ವಿಕ್ರಂ ಸಿಂಹರಿಂದ ಬಿಗ್‌ ಅಪ್ಡೇಟ್‌; ಕಾಂಗ್ರೆಸ್‌ ಆರೋಪಕ್ಕೆ ಮುಟ್ಟಿ ನೋಡೋ ಹಾಗೆ ಉತ್ತರ ನೀಡಿದ ವಿಕ್ರಂ ಸಿಂಹ!!