D.K : ವೈದ್ಯರು ರಜೆಯಲ್ಲಿದ್ದಾರೆ; ಮಂಗಳವಾರ ಬನ್ನಿ!!!

Share the Article

Uppinangady: ವೈದ್ಯೋ ನಾರಾಯಣ ಹರಿ ಎಂಬ ಮಾತೊಂದಿದೆ. ಆದರೆ ಇಲ್ಲಿ ದೇವರ ರೂಪದಲ್ಲಿರುವ ವೈದ್ಯರು ರಜೆಯಲ್ಲಿ ಹೋಗಿದ್ದಾರೆ. ರವಿವಾರ, ಸೋಮವಾರದ ರಜೆಯನ್ನು ಕಳೆದು ಮಂಗಳವಾರದಂದು ಬನ್ನಿ ಎಂದು ರೋಗಿಗಳನ್ನು ಹಿಂದಕ್ಕೆ ಕಳುಹಿಸಿದ ಘಟನೆ ಉಪ್ಪಿನಂಗಡಿಯ (Uppinangady) ಸಮುದಾಯ ಆರೋಗ್ಯ ಕೇಂದ್ರದಲ್ಲಿ ನಡೆದಿದೆ.

ಉತ್ತರ ಭಾರತೀಯ ಕಾರ್ಮಿಕರಾದ ಶಮೀಂ ಹಾಗೂ ರಹೀಂ ಜ್ವರದಿಂದ ಬಳಲುತ್ತಿದ್ದು, ಶುಕ್ರವಾರ ರಾತ್ರಿ ಆರೋಗ್ಯ ಕೇಂದ್ರಕ್ಕೆ ಕರೆದು ಚಿಕಿತ್ಸೆ ನೀಡಲಾಗಿತ್ತು. ಜ್ವರ ಕಡಿಮೆಯಾಗೋ ಲಕ್ಷಣ ಕಂಡು ಬರದಿದ್ದರೆ ಶನಿವಾರ ರಕ್ತಪರೀಕ್ಷೆ ಮಾಡಿಸಲು ಹೇಳಲಾಗಿತ್ತು. ಆದರೆ ಮುಂದೆ ಆದದ್ದೇನು?

ಶನಿವಾರ ಬಂದ ರೋಗಿಗೆ ಮೇಲೆ ಹೇಳಿದ್ದೀವಲ್ಲ ಆ ತರಹ ಉತ್ತರ ನೀಡಿ ಕಳುಹಿಸಲಾಗಿದೆ ಎಂದು ವರದಿಯಾಗಿದೆ.

Leave A Reply