Hariyana : ಹೃದಯಾಘಾತಕ್ಕೆ 10ರ ಬಾಲಕಿ ಬಲಿ – ಹೃದಯಾಘಾತವಾಗಲು ಭಯಾನಕ ಕಾರಣವೂ ಉಂಟು !!
Hariyan: ಇಂದು ಪುಟ್ಟ ಮಕ್ಕಳ ಹೃದಯವು ನಿಲ್ಲುತ್ತಿದೆ. ಬಾಳಿ ಬದುಕಬೇಕಿದ್ದ ಕಂದಮ್ಮಗಳು ಎಳವೆಯಲ್ಲಿಯೇ ಕಮರಿ ಹೋಗುತ್ತಿವೆ. ಅಂತೆಯೇ ಹರಿಯಾಣದ(Hariyana) ರಾಜಧಾನಿ ಚಂಡೀಗಢದ ಮಣಿ ಮಜ್ರಾ ಎಂಬ ಪ್ರದೇಶದಲ್ಲಿ ಹೃದಯ ವಿದ್ರಾವಕ ಘಟನೆಯೊಂದು ನಡೆದಿದ್ದು ಆಟವಾಡುತ್ತಿದ್ದ 10 ರ ಬಾಲಕಿ ಹೃದಯಾಘಾತಕ್ಕೆ ಬಲಿಯಾಗಿದ್ದಾಳೆ.
ಈ ಪುಟ್ಟ ಕಂದಮ್ಮಳಿಗೆ ಹೃದಯಾಘಾತವಾಗಲು ಒಂದು ಕಾರಣವೂ ಉಂಟು. ಹೌದು, ಜಸ್ಮೀತ್ (10) ಎಂ ಈ ಬಾಲಕಿ ಶಾಲೆಯಿಂದು ಬಂದು ಸ್ನೇಹಿತರೊಂದಿಗೆ ಆಟವಾಡಲೆಂದು ಪಾರ್ಕಿಗೆ ತೆರಳಿದ್ದಳು. ಆಟವಾಡುತ್ತಿದ್ದ ವೇಳೆ ಆಕೆಯ ಮೇಲೆ ಬೀದಿನಾಯಿಗಳು ದಾಳಿ ಮಾಡಿವೆ. ಇದರಿಂದ ಭಯಗೊಂಡ ಆಕೆ ಓಡಲು ಶುರು ಮಾಡಿದ್ದು, ಹೃದಯಾಘಾತವಾಗಿ ರಸ್ತೆಯಲ್ಲಿ ಕುಸಿದು ಬಿದ್ದಿದ್ದಾಳೆ. ಆಸ್ಪತ್ರೆಗೆ ಕರೆದೊಯ್ದರೂ ಏನೂ ಪ್ರಯೋಜನ ಆಗಿಲ್ಲ.
ಈ ಬಗ್ಗೆ ಜಸ್ಮೀತ್ ಅವರ ತಂದೆ ನೋವು ತೋಡಿಕೊಳ್ಳುವುದಲ್ಲದೆ ಕಳವಳ ವ್ಯಕ್ತಪಡಿಸಿದ್ದಾರೆ. ಕಳೆದ ಹಲವು ದಿನಗಳಿಂದ ಇಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಾಗಿದ್ದು, ಮಕ್ಕಳ ಸ್ಥಿತಿ ಏನು ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ ನನ್ನ ಮಗಳಿಗಾದ ಪರಿಸ್ಥಿತಿ ಬೇರೆ ಯಾರಿಗೂ ಆಗುವುದು ಬೇಡ ಎಂದು ಮನವಿ ಮಾಡಿದ್ದಾರೆ.