Dharmasthala: ಮಿನಿ ವಿಮಾನ ನಿಲ್ದಾಣಕ್ಕೆ ಸ್ಥಳ ಗುರುತಿಸುವ ಕೆಲಸ ಶುರು! ಅಧಿಕಾರಿಗಳಿಂದ ಪರಿಶೀಲನೆ!!

Share the Article

Dharmasthala: ಧರ್ಮಸ್ಥಳ ಕನ್ಯಾಡಿ ಹಾಗೂ ಕಲ್ಮಂಜ ಗ್ರಾಮಗಳಿಗೆ ಮಿನಿ ವಿಮಾನ ನಿಲ್ದಾಣಕ್ಕೆ ಜಾಗ ಗುರುತಿಸುವ ಕೆಲಸಕ್ಕೆ ಸರ್ವೆ ಇಲಾಖೆ ಹಾಗೂ ಇತರೆ ಅಧಿಕಾರಿಗಳು ಡಿ.21 ರಂದು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕಲ್ಮಂಜ ಗ್ರಾಮದ 153/1 ಸರ್ವೆ ನಂಬರ್‌ನಲ್ಲಿ ಹಾಗೂ ಧರ್ಮಸ್ಥಳ ಗ್ರಾಮದ 57 ಸರ್ವೆ ನಂಬರಿನಲ್ಲಿ ಒಟ್ಟು 157.93 ಎಕ್ರೆ ಜಮೀನಿನಲ್ಲಿ ವಿಮಾನ ನಿಲ್ದಾಣ ನಿರ್ಮಾಣದ ಕೆಲಸಕ್ಕೆ ಜಾಗ ಗುರುತಿಸಲಾಗಿದೆ. ಹಾಗಾಗಿ ಈ ಕುರಿತು ಪರಿಶೀಲನೆ ನಡೆಸಲು ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ಪ್ರಾಥಮಿಕ ತನಿಖೆಯ ಮೂಲಕ ಜಾಗ ಏರು ತಗ್ಗುಗಳಿಂದ ಕೂಡಿರುವುದಾಗಿ ತಿಳಿದು ಬಂದಿದೆ. ಇದು ಬಹತೇಕ ಅರಣ್ಯ ಇಲಾಖೆಯ ವಶದಲ್ಲಿರುವ ಅಕೇಶಿಯಾ ಹಾಗೂ ನೆಡುತೋಪುಗಳಾಗಿವೆ.
ಹಾಗೂ ಮಿನಿವಿಮಾನ ನಿಲ್ದಾಣ ಸ್ಥಳವನ್ನು ಅಂತಿಮಗೊಳಿಸುವ ಕುರಿತು ಮುಂದಿನ ಸಭೆಯಲ್ಲಿ ನಿರ್ಧಾರ ಮಾಡಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.

ಇದನ್ನು ಓದಿ: Heart Attack: ಜನರೇ ನಿರ್ಲಕ್ಷ್ಯ ಮಾಡದಿರಿ, ಉಸಿರಾಡುವಾಗಲೇ ನಿಮಗೆ ತಿಳಿಯುತ್ತೆ ಹೃದಯಾಘಾತದ ಮುನ್ನೆಚ್ಚರಿಕೆ!!!

Leave A Reply