Free bus Rules: ಫ್ರೀ ಬಸ್ಸಲ್ಲಿ ಓಡಾಡೋ ಮಹಿಳೆಯರಿಗೆ ಬಂತು ಹೊಸ ಟಫ್ ರೂಲ್ಸ್ – ಪಾಲಿಸದಿದ್ರೆ 500ರೂ ದಂಡ ಫಿಕ್ಸ್ !!

Free bus Rules: ಕರ್ನಾಟಕದ ವಿಧಾನಸಭೆ ಚುನಾವಣೆಯ ವೇಳೆ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಪಂಚ ಗ್ಯಾರಂಟಿಗಳನ್ನು ಘೋಷಿಸಿ, ಅಧಿಕಾರಕ್ಕೆ ಬಂದರೆ ಅವುಗಳನ್ನು ಜಾರಿಗೊಳಿಸುವುದಾಗಿ ಭರವಸೆ ನೀಡಿತ್ತು. ಗ್ಯಾರಂಟಿಗಳನ್ನು ನೋಡಿದ ಜನ ಕೊನೆಗೂ ಕೈ ಹಿಡಿದು ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತಂದೇಬಿಟ್ಟರು. ಕಾಂಗ್ರೆಸ್ ಕೂಡ ಹೇಳಿದಂತೆ ನಡೆದುಕೊಂಡು ಫ್ರೀ ಬಸ್, ಫ್ರೀ ಕರೆಂಟ್, ಗೃಹಲಕ್ಷ್ಮೀ ದುಡ್ಡು, ಫ್ರಿ ಅಕ್ಕಿ ಹೀಗೆ ಎಲ್ಲವನ್ನೂ ಜಾರಿಗೊಳಿಸಿತು. ಒಟ್ಟಿನಲ್ಲಿ ಕಾಂಗ್ರೆಸ್ ಗೂ ಕೂಡ ತನ್ನ ಗ್ಯಾರಂಟಿ ಸ್ಕೀಮ್ಗಳು ವರ್ಕ್ ಆಯ್ತು ಎಂದು ಮನವರಿಕೆ ಆಯಿತು. ಇದೇ ಪ್ರಯೋಗವನ್ನು ತೆಲಂಗಾಣದಲ್ಲಿ ಮಾಡಿ, ಅಲ್ಲಿಯೂ ಗೆದ್ದುಬೀಗಿತು.

 

ಹೌದು, ಕಾಂಗ್ರೆಸ್ ಕರ್ನಾಟಕದಂತೆ ತೆಲಂಗಾಣ(Telangana) ವಿಧಾನಸಭೆಯ ಚುನಾವಣೆಯಲ್ಲೂ ಗ್ಯಾರಂಟಿ ಯೋಜನೆಗಳನ್ನು ಘೋಷಿಸಿ ಅಧಿಕಾರ ಹಿಡಿಯಿತು. ಪಕ್ಷ ಭರ್ಜರಿ ಗೆಲುವು ಸಾಧಿಸಿ ಅಧಿಕಾರಕ್ಕೆ ಬಂದ ಬಳಿಕ, ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ರೇವಂತ್ ರೆಡ್ಡಿ(Revanth Reddy)ಯವರು ಪ್ರಮಾಣ ವಚನ ಸ್ವೀಕರಿಸಿದ ಕೂಡಲೇ ಮೊದಲನೇ ಗ್ಯಾರಂಟಿಯಾದ ಮಹಿಳೆಯರ ಫ್ರೀ ಬಸ್ ಸ್ಕೀಮ್ ಆದ ‘ಮಹಾಲಕ್ಷ್ಮೀ'(Mahalakshmi Scheme)ಯೋಜನೆಗೆ ಸಹಿ ಹಾಕಿಯೇ ಬಿಟ್ಟರು. ಈ ಮೂಲಕ ಇದೀಗ ತೆಲಂಗಾಣದ ಮಹಿಳೆಯರು ಉಚಿತ ಬಸ್ಸಿನಲ್ಲಿ ಆರಾಮಾಗಿ ಪ್ರಯಾಣ ಮಾಡುತ್ತೆದ್ದಾರೆ. ಆದರೆ ಇದರ ನಡುವೆಯೇ ಫ್ರೀ ಬಸ್ಸಲ್ಲಿ ಓಡಾಡೋ ಎಲ್ಲಾ ಮಹಿಳೆಯರಿಗೂ ತೆಲಂಗಾಣ ಸರ್ಕಾರ ಇದೀಗ ಹೊಸ ರೂಲ್ಸ್ ಜಾರಿಗೊಳಿಸಿದೆ. ಅಷ್ಟೇ ಅಲ್ಲ ಯಾರು ಇದನ್ನು ಮಿಸ್ ಮಾಡುತ್ತಾರೋ ಅವರಿಗೆ 500ರೂ ದಂಡವನ್ನೂ ಫಿಕ್ಸ್ ಮಾಡಿದೆ.

 

ಏನದು ಹೊಸ ರೂಲ್ಸ್?!

ಕರ್ನಾಟಕದಲ್ಲಿ ಶಕ್ತಿ ಯೋಜನೆ(Shakthi yojane)ಯಡಿ ಮಹಿಳೆಯರು ಬಸ್ಸಲ್ಲಿ ಪ್ರಯಾಣಿಸುವಾಗ ಆಧಾರ್ ಕಾರ್ಡ್, ರೇಷನ್ ಕಾರ್ಡ್, ವೋಟರ್ ಐಡಿ ಅಥವಾ ಇನ್ನಾವುದೇ ಗುರುತಿನ ದಾಖಲೆ ತೋರಿಸಿ ಉಚಿತ ಟಿಕೆಟ್ ಪಡೆದು ಓಡಾಡಬಹುದು. ಇದರಂತೆಯೇ ತೆಲಂಗಾಣದಲ್ಲೂ ಯೋಜನೆಯನ್ನು ಜಾರಿಗೆತರಲಾಗಿದೆ. ಆದರೆ ಇದೀಗ ಸರ್ಕಾರವು ಮಹಿಳೆಯರು ಉಚಿತ ಪ್ರಯಾಣ ಎಂದು ಟಿಕೆಟ್ ಪಡೆಯದೇ ಪ್ರಯಾಣ ಬೆಳೆಸುವಂತಿಲ್ಲ, ಎಲ್ಲರೂ ಉಚಿತ ಎಂದು ಬರೆದ ಟಿಕೆಟ್ ಪಡೆದೇ ಬಸ್ಸಲ್ಲಿ ಪ್ರಾಣಿಸಬೇಕು. ಒಂದು ವೇಳೆ ಯಾರು ಟಿಕೆಟ್ ಪಡೆಯುವುದಿಲ್ಲವೋ ಅಂತವರಿಗೆ 500ರೂ ದಂಡ ವಿಧಿಸುವುದಾಗಿ ಕಟ್ಟುನಿಟ್ಟಾಗಿ ಹೇಳಿದೆ. ಹೀಗಾಗಿ ತೆಲಂಗಾಣದ ಮಹಿಳೆಯರು ಸರ್ಕಾರಿ ಬಸ್ಸಿನಲ್ಲಿ ಹೋಗುವಾಗ ಉಚಿತ ಬಸ್ ಪ್ರಯಾಣ ಎಂದು ತಪ್ಪದೇ ಟಿಕೆಟ್ ಪಡೆಯಬೇಕು.

Leave A Reply

Your email address will not be published.