Bigg boss Telugu: ಬಿಗ್ ಬಾಸ್ ಗೆದ್ದು ಹೊರಬರುತ್ತಿದ್ದಂತೆ ಅರೆಸ್ಟ್ ಆದ ಆಟಗಾರ !!
Bigg boss Telugu: ಬಿಗ್ ಬಾಸ್ ತೆಲುಗು ಸೀಸನ್-7 ವಿನ್ನರ್ ಪಲ್ಲವಿ ಪ್ರಶಾಂತ್ ಅವರನ್ನು ಸೋಮವಾರ ರಾತ್ರಿ ಅನ್ನಪೂರ್ಣ ಸ್ಟುಡಿಯೋಸ್ ಬಳಿ ಶಾಂತಿ ಕದಡಿದ ಆರೋಪದ ಮೇಲೆ ತೆಲಂಗಾಣದ ಹೈದರಾಬಾದ್ ಪೊಲೀಸರು ಬಂಧಿಸಿದ್ದಾರೆ.
ಹೌದು, ಬಿಗ್ ಬಾಸ್ ತೆಲುಗು-7ರ(Bigg boss telugu) ವಿನ್ನರ್ ಆಗಿ ರೈತನ ಮಗ ಪಲ್ಲವಿ ಪ್ರಶಾಂತ್ ಹೊರಬರುತ್ತಿದ್ದಂತೆ ಬಿಗ್ ಶಾಕ್ ಎದುರಾಗಿತ್ತು. ವಿಧ್ವಂಸಕ ಕೃತ್ಯ ಹಾಗೂ ಅಶಾಂತಿಗೆ ಕಾರಣ ಆಗಿದ್ದಾರೆ ಎನ್ನುವ ಕಾರಣಕ್ಕಾಗಿ ಅವರನ್ನು ಹೈದರಾಬಾದ್ ನ ಜುಬಿಲಿ ಹಿಲ್ಸ್ ಪೊಲೀಸರು ಬಂಧಿಸಿದ್ದಾರೆ (Arrest). ಪಲ್ಲವಿ ಪ್ರಶಾಂತ್ ಅವರ ಜೊತೆಗೆ ಸಹೋದರ ಮನೋಹರ್ ಅವರನ್ನು ಕೂಡ ಬಂಧಿಸಲಾಗಿದ್ದು, ನ್ಯಾಯಾಲಯವು ಇಬ್ಬರಿಗೂ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.
ಅಂದಹಾಗೆ ಈ ಬಾರಿಯ ಬಿಗ್ಬಾಸ್ ತೆಲುಗು ಸೀಸನ್ 7ನಲ್ಲಿ ವಿಜೇತನಾಗಿ ಪಲ್ಲವಿ ಪ್ರಶಾಂತ್(Pallavi prashanth) ಹೊರಹೊಮ್ಮಿದ್ದರು. ಈ ಕುರಿತು ಘೋಷಣೆಯಾಗುತ್ತಿದ್ದಂತೆ ಹೈದರಾಬಾದ್ನ ಅನ್ನಪೂರ್ಣ ಸ್ಟುಡಿಯೋ (ಬಿಗ್ಬಾಸ್ ನಡೆಯುತ್ತಿರುವ ಸ್ಥಳ) ಹೊರಗಡೆ ಜಗಳ, ಪುಂಡಾಟ ನಡೆದಿತ್ತು. ಈ ಸಂದರ್ಭದಲ್ಲಿ ಪಲ್ಲವಿ ಪ್ರಶಾಂತ್ ಹಿಂಬಾಲಕರು ಹಲವು ಆರ್ಟಿಸಿ ಬಸ್ಗಳು, ಖಾಸಗಿ ವಾಹನಗಳಿಗೆ ಹಾನಿ ಮಾಡಿದ್ದರು. ಅಲ್ಲದೇ, ಮತ್ತೊಬ್ಬ ಸ್ಪರ್ಧಿ ಅಶ್ವಿನಿ ಕಾರಿನ ಗಾಜುಗಳಿಗೂ ಹಾನಿಯಾಗಿತ್ತು. ಪಂಜಗುಟ್ಟಾ ಎಸಿಪಿ ಕಾರು, ಪೊಲೀಸ್ ಬಸ್ ಹಾಗೂ ಐದಕ್ಕೂ ಹೆಚ್ಚು ಸಾರಿಗೆ ಬಸ್ಗಳ ಗಾಜುಗಳನ್ನೂ ಒಡೆಯಲಾಗಿತ್ತು. ಮೆರವಣಿಗೆ ನಡೆಸುತ್ತಿದ್ದಂತೆ ಪೊಲೀಸರು ಪಲ್ಲವಿ ಪ್ರಶಾಂತ್ ಬೆಂಬಲಿಗರಿಗೆ ಎಚ್ಚರಿಕೆ ನೀಡಿದ್ದರು. ಈ ಎಚ್ಚರಿಕೆ ಲೆಕ್ಕಿಸದೆ ಮೆರವಣಿಗೆ ಮಾಡಲಾಗಿತ್ತು. ಹೀಗಾಗಿ ಪೋಲೀಸರು ಬಂದಿಸಿದ್ದಾರೆ ಎನ್ನಲಾಗಿದೆ.
ಇನ್ನು ಪಲ್ಲವಿ ಪ್ರಶಾಂತ್ ಪರ ವಕೀಲರು ನಿರೀಕ್ಷಣಾ ಜಾಮೀನಿಗಾಗಿ ಅರ್ಜಿ ಸಲ್ಲಿಸಲು ಮುಂದಾಗಿದ್ದಾರೆ. ಈ ನಿಟ್ಟಿನಲ್ಲಿ ಎಫ್ಐಆರ್ ಪ್ರತಿ ಪಡೆಯಲು ಠಾಣೆಗೆ ವಕೀಲರು ತೆರಳಿದ್ದರು. ಆದರೆ, ಎಫ್ಐಆರ್ ಪ್ರತಿ ನೀಡಲು ಪೊಲೀಸರು ನಿರಾಕರಿಸಿದ್ದಾರೆ ಎಂದು ವಕೀಲ ರಾಜ್ಕುಮಾರ್ ಆರೋಪಿಸಿದ್ದಾರೆ.