Congress : ಡಿಕೆಶಿ, ಸಿದ್ದರಾಮಯ್ಯಗೆ ಬಿಗ್ ಶಾಕ್ ಕೊಟ್ಟ ಕಾಂಗ್ರೆಸ್ ಹೈಕಮಾಂಡ್!!
Congress: ದೆಹಲಿ ಪ್ರವಾಸದಲ್ಲಿರುವ ಸಿಎಂ ಸಿದ್ದರಾಮಯ್ಯ ಹಾಗೂ ಡಿಕೆಶಿ ಅವರಿಗೆ ಕಾಂಗ್ರೆಸ್(Congress)ಹೈಕಮಾಂಡ್ ಬಿಗ್ ಶಾಕ್ ಒಂದನ್ನು ನೀಡಿದ್ದು, ದೆಹಲಿಗೆ ಹೋದ ನಾಯಕರಿಗೆ ಬಿಗ್ ಶಾಕ್ ಎದುರಾಗಿದೆ.
ಹೌದು, ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ(CM Siddaramaiah)ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್(D K Shivkumar)ಅವರು ನಿಗಮ ಮಂಡಳಿಯ ಅಧ್ಯಕ್ಷರ ನೇಮಕಾತಿಯ ವಿಚಾರವಾಗಿ ಒಂದು ಪಟ್ಟಿಯನ್ನು ಸಿದ್ಧಪಡಿಸಿಕೊಂಡು ಹೈಕಮಾಂಡ್ ಭೇಟಿಗಾಗಿ ದೆಹಲಿಗೆ ತೆರಳಿದ್ದರು. ಆದರೆ ಈ ವಿಚಾರದಲ್ಲಿ ಹೈಕಮಾಂಡ್ ಡಿಕೆಶಿ ಮತ್ತು ಸಿದ್ದುಗೆ ನಿರಾಸೆ ಉಂಟುಮಾಡಿದ್ದು, ಅವರ ಪಟ್ಟಿಗೆ ಬ್ರೇಕ್ ಹಾಕಿದೆ.
ಅಂದಹಾಗೆ ಸಿದ್ದು ಮತ್ತು ಡಿಕೆಶಿ ಒಮ್ಮತದಿಂದ 35 ಶಾಸಕರ ಹೆಸರಿನ ಪಟ್ಟಿಯನ್ನು ಹಿಡಿದು, ದೆಹಲಿಗೆ (Delhi) ತೆರಳಿ ಹೈಕಮಾಂಡ್ ನಾಯಕರಿಗೆ (High Command) ಪಟ್ಟಿ ತೋರಿಸಿದ್ದಾರೆ. ಈ ವೇಳೆ ಕಾರ್ಯಕರ್ತರಿಗೂ (ಪಕ್ಷದ ಮುಖಂಡರಿಗೆ) ಅವಕಾಶ ಮಾಡಿಕೊಡಬೇಕು ಎಂದು ಸ್ವತ: ರಾಹುಲ್ ಗಾಂಧಿ (Rahul Gandhi) ಪಟ್ಟು ಹಿಡಿದಿದ್ದು, ಇವರು ಕೊಂಡೋದ ಲಿಸ್ಟ್ ಗೆ ಬ್ರೇಕ್ ಬಿದ್ದಿದೆ ಎಂಬ ವಿಚಾರ ಮೂಲಗಳಿಂದ ತಿಳಿದುಬಂದಿದೆ.
ಇದನ್ನು ಓದಿ: ಇಂದಿರಾ ಕ್ಯಾಂಟೀನ್ ಹೊಸ ಮೆನು ಬಿಡುಗಡೆ – ಹೊಸ ತಿಂಡಿಗಳ ಲಿಸ್ಟ್ ಬಾಯಲ್ಲಿ ನೀರು ಬರೋದು ಪಕ್ಕಾ !!
ದೆಹಲಿಯಲ್ಲಿ ಶಾಸಕರ ಹೆಸರಿನ ಪಟ್ಟಿ ನೀಡಿದ ನಂತರ ರಾಹುಲ್ ಗಾಂಧಿ ಅವುರು ಚುನಾವಣೆಯಲ್ಲಿ ದುಡಿದಿರುವ ನಾಯಕರಿಗೆ ಅವಕಾಶ ನೀಡಬೇಕು. ಇಲ್ಲದಿದ್ದರೆ ಲೋಕಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಹಿನ್ನಡೆಯಾಗಬಹುದು. ಹೀಗಾಗಿ ಕಾರ್ಯಕರ್ತರು, ಮುಖಂಡರ ಹೆಸರು ಇರುವ ಅಂತಿಮ ಪಟ್ಟಿ ಸಿದ್ದಪಡಿಸಿ ಎಂದು ಹೊಸ ಷರತ್ತು ವಿಧಿಸಿದ್ದಾರೆ. ಇದರಿಂದ ನಿಗಮ ಮಂಡಳಿ ಮತ್ತಷ್ಟು ತಡವಾಗುವ ಸಾಧ್ಯತೆಯಿದೆ.