Home News Hassan: ದೇವೇಗೌಡರ ಸೊಸೆ-ಮೊಮ್ಮಗನ ಮತ್ತೊಂದು ಸ್ಪೋಟಕ ಕೃತ್ಯ ಬಯಲಿಗೆ – ಗರ್ಭಿಣಿಯ ಹೊಟ್ಟೆಗೆ ಒದ್ದು ಗರ್ಭಪಾತ...

Hassan: ದೇವೇಗೌಡರ ಸೊಸೆ-ಮೊಮ್ಮಗನ ಮತ್ತೊಂದು ಸ್ಪೋಟಕ ಕೃತ್ಯ ಬಯಲಿಗೆ – ಗರ್ಭಿಣಿಯ ಹೊಟ್ಟೆಗೆ ಒದ್ದು ಗರ್ಭಪಾತ ಮಾಡಿದ ಭವಾನಿ ರೇವಣ್ಣ !!

Hindu neighbor gifts plot of land

Hindu neighbour gifts land to Muslim journalist

Hassan: ಹಾಸನ ಜಿಲ್ಲೆಯ ಪ್ರಭಾವಿ ರಾಜಕೀಯ ನಾಯಕ, ದೇಶದ ಮಾಜಿ ಪ್ರಧಾನಿ ದೇವೇಗೌಡರ ಸೊಸೆ ಭವಾನಿ ರೇವಣ್ಣ ಅವರು ಕೆಲವು ಸಮಯದಿಂದ ಸುದ್ದಿಯಲ್ಲಿದ್ದಾರೆ. ಇದುವರೆಗೂ ಒಂದೂವರೆ ಕೋಟಿ ಕಾರಿನ ಮೂಲಕ ಸುದ್ದಿಯಾಗಿದ್ದ ಈ ಗೌಡರ ಈ ಸೊಸೆ ಇದೀಗ ಮತ್ತೊಂದು ವಿಚಾರದಲ್ಲಿ ಸಾಕಷ್ಟು ವಿವಾದಕ್ಕೀಡಾಗಿದ್ದಾರೆ. ವಿಚಿತ್ರ ಅಂದ್ರೆ ಮಗ ಪ್ರಜ್ವಲ್ ರೇವಣ್ಣ ಕೂಡ ತಾಯಿಯ ಸೆರಗು ಹಿಡಿದು ನಡೆಯುತ್ತಿದ್ದಾರೆ.

ಜೆಡಿಎಸ್ ಶಾಸಕ ಎಚ್ ಡಿ ರೇವಣ್ಣ(HD Revanna) ಅವರ ಪತ್ನಿ ಭವಾನಿ(Bhavani) ಹಾಗೂ ಮಗ ಪ್ರಜ್ವಲ್ ರೇವಣ್ಣ(Prajwal revanna) ಅವರು ತಮ್ಮ ಮನೆಯ ಕಾರ್ ಡ್ರೈವರ್ ಕಾರ್ತಿಕನನ್ನು ಹೆದರಿಸಿ ಕಿಡ್ನಾಪ್ ಮಾಡಿ ಹಿಂಸೆ ಕೊಟ್ಟು ಅವನ ಹೆಸರಲ್ಲಿ ಇದ್ದ ಸುಮಾರು 13.5 ಎಕರೆ ಜಮೀನನ್ನು ತಮ್ಮ ಹೆಸರಿಗೆ ಬರೆಸಿಕೊಂಡಿದ್ದಾರೆ ಎಂದು, ಕಳೆದ ವಿಧಾನಸಭಾ ಚುನಾವಣೆಗೂ ಮುನ್ನವೇ ಅವರು ಈ ನೀಚ ಕಾರ್ಯ ಮಾಡಿದ್ದರೆಂದು ಸಾಕಷ್ಟು ಸುದ್ದಿಯಾಗಿತ್ತು. ಆದರೀಗ ಅಮ್ಮ-ಮಗನ ಮತ್ತೊಂದು ಕರ್ಮಕಾಂಡ ಬಯಲಾಗಿದೆ.

ಹೌದು, ಹಾಸನ ಪ್ರಭಾವಿ ರಾಜಕಾರಣಿಗಳ ಮತ್ತೊಟದು ಸ್ಪೋಟಕ ಸುದ್ದಿ ಹೊರಬಿದ್ದಿದೆ. ಕಾರ್ ಡ್ರೈವರ್ ಕಾರ್ತಿಕ್ ಅವರ ಪತ್ನಿ ಶಿಲ್ಪಾ(Shilpa) ಸ್ಪೋಟಕ ಹೇಳಿಕೆ ನೀಡಿದ್ದು ಭವಾನಿ ರೇವಣ್ಣ ಅವರಿಂದಲೇ ತನಗೆ ಅಭಾರ್ಷನ್ ಆಗಿದೆ ಎಂದು ಆರೋಪಿಸಿದ್ದಾರೆ. ಆಸ್ತಿ ವಿಚಾರಕ್ಕೆ ಭವಾನಿ ರೇವಣ್ಣ ನನ್ನ ಹೊಟ್ಟೆಗೆ ಒದ್ದರು. ಇದರಿಂದ ಮೂರು ತಿಂಗಳ ಗರ್ಭಿಣಿಯಾದ ನನಗೆ ಗರ್ಭಪಾತವಾಗಿದೆ ಎಂದು ಶಿಲ್ಪಾ ಆರೋಪಿಸಿದ್ದಾರೆ. ಇದರಿಂದ ಗೌಡರ ಕುಟುಂಬದ ದರ್ಪದ ಸೊಸೆಯ ರೋಚಕ ಕೃತ್ಯವೊಂದು ಬಯಲಾಗಿದೆ.

ಏನಿದು ಪ್ರಕರಣ?
ಹೊಳೆನರಸೀಪುರ(Holenarasipura) ತಾಲ್ಲೂಕಿನ ಕಡವಿನಕೋಟೆ ಗ್ರಾಮದ ನಿವಾಸಿ ಈ ಕಾರ್ತಿಕ್ ಕಳೆದ 14 ವರ್ಷಗಳಿಂದ ಸಂಸದ ಪ್ರಜ್ವಲ್ ರೇವಣ್ಣರ ಕಾರಿನ ಚಾಲಕನಾಗಿ ಕೆಲ್ಸ ಮಾಡ್ತಿದ್ದರು. ಕಾರ್ತಿಕ್‌ ಅವರು ಫೌಲ್ಟ್ರಿ ಫಾರಂ, ಕೃಷಿ ಜಮೀನು ಸೇರಿದಂತೆ ಒಳ್ಳೆಯ ಆದಾಯ ಹೊಂದಿದ್ದಾರೆ. ಕಾರ್ತಿಕ್‌ ಅವರು ಕಳೆದ ವರ್ಷ 13 ಎಕರೆ ಕೃಷಿ ಭೂಮಿ ಖರೀದಿಸಿದ್ದರು. ಜಮೀನು ಖರೀದಿ ಮಾಡಿದ್ದರ ಬಗ್ಗೆ ಅಸೂಯೆಪಟ್ಟಿದ್ದ ಗೌಡರ ಸೊಸೆ ಭವಾನಿ ಅವರಿಗೆ ಕಿರುಕುಳ ನೀಡಿ ಜಮೀನು ಲಪಟಾಯಿಸಿದ್ದಾರೆ.

ಬಳಿಕ ಭೂಮಿಯನ್ನು ತಮ್ಮ ಹೆಸರಿಗೆ ಬರೆದುಕೊಡುವಂತೆ ಒತ್ತಾಯಿಸಿ ಹಿಂಸೆ ನೀಡುತ್ತಿರುವ ಬಗ್ಗೆ ಪೊಲೀಸ್‌ ಠಾಣೆಗೆ ದೂರು ನೀಡಿದರೆ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣ ತಮ್ಮ ಪ್ರಭಾವ ಬಳಸಿಕೊಂಡು ಎಲ್ಲಿಯೂ ದೂರು ದಾಖಲಿಸಿದಂತೆ ನೋಡಿಕೊಂಡಿದ್ದಾರೆ. ಒಮ್ಮೆ ಪ್ರಜ್ವಲ್‌ ರೇವಣ್ಣ ಅವರು ಕಾರ್ತಿಕ್‌ನನ್ನು ಕರೆ ಮಾಡಿ ಕರೆಸಿಕೊಂಡಿದ್ದರು. ಅಲ್ಲಿಂದಲೇ ಕಾರ್ತಿಕ್‌ನನ್ನು ಕಿಡ್ನಾಪ್ ಮಾಡಿಸಿ, ಐಬಿಯಲ್ಲಿ ಕೂಡಿ ಹಾಕಿ ಬೆದರಿಕೆ ಹಾಕಿ ಆಸ್ತಿಯನ್ನು ಬೆಂಗಳೂರಿನ ಬಿಬಿಎಂಪಿ ಗುತ್ತಿಗೆದಾರ ಕಿರಣ್ ರೆಡ್ಡಿ ಎಂಬುವರ ಹೆಸರಿಗೆ ಮಾಡಿಸಿಕೊಂಡಿದ್ದಾರೆ. ಕಾರ್ತಿಕ್‌ ಆಸ್ತಿ ಮಾರಿದ್ದಕ್ಕೆ ಪ್ರತಿಯಾಗಿ ಕಿರಣ್‌ ರೆಡ್ಡಿ ಚೆಕ್‌ ನೀಡಿದ್ದಾರೆ. ಆದರೆ, ರೇವಣ್ಣ ಕುಟುಂಬಿಕರು ಈ ಚೆಕ್‌ ಅನ್ನು ಬಲವಂತವಾಗಿ ಪಡೆದು ಡ್ರಾ ಮಾಡಿಸಿದ್ದಾರೆ! ಪ್ರಜ್ವಲ್ ರೇವಣ್ಣ ತನ್ನದೇ ಕಾರಿನ ಚಾಲಕನ ಕಿಡ್ನಾಪ್ ಮಾಡಿ ಹಲ್ಲೆ ಮಾಡಿಸಿ, ಆಸ್ತಿ ಬರೆಸಿಕೊಂಡರೆ ಅತ್ತ ತಾಯಿ ಭವಾನಿ ರೇವಣ್ಣ ಕಾರ್ತಿಕ್ ಪತ್ನಿ ಗರ್ಭಿಣಿ ಅನ್ನುವುದನ್ನು ನೋಡದೆ ಕಾಲಿನಿಂದ ಒದ್ದು ಆಕೆಯ ಗರ್ಭಪಾತವಾಗುವಂತೆ ಹಲ್ಲೆ ಮಾಡಿದ್ದಾರಂತೆ. ಇಷ್ಟೇ ಅಲ್ಲದೆ ಈ ಸಂಬಂಧ ದೂರು ನೀಡಲು ಹೋದರೆ ಪೊಲೀಸರು ದೂರು ದಾಖಲಿಸಿಕೊಳ್ಳಲು ಹಿಂದೇಟು ಹಾಕಿದ್ದು, ಹಿರಿಯ ಅಧಿಕಾರಿಗಳಿಗೂ ತಪ್ಪು ಸಂದೇಶ ರವಾನಿಸುವ ಕೆಲಸ ಮಾಡಿದ್ದಾರೆ.

ಕಾರ್ತಿಕ್ ಹಾಗೂ ಅವರ ಪತ್ನಿಯನ್ನು ಕಿಡ್ನಾಪ್ ಮಾಡುವ ದೃಶ್ಯ cc ಕ್ಯಾಮೆರಾದಲ್ಲಿ ಸೆರೆ.
ಕಾರ್ತಿಕ್ ಅವರ ಮನೆಯಲ್ಲಿದ್ದ cc ಕ್ಯಾಮರದಲ್ಲಿ ಕಾರ್ತಿಕ್ ಮತ್ತು ಅವರ ಪತ್ನಿಯನ್ನು ಕರೆದೊಯ್ಯುತ್ತಿರುವ ದೃಶ್ಯ ಸೆರೆಯಾಗಿದೆ. ಕೆಂಪು ಕಾರ್ ನಲ್ಲಿ ಬಂದ ಯುವಕರು ಕಾರ್ತಿಕ್ ಅವರ ಪತ್ನಿಯನ್ನು ಕಾರಿನ್ ಹಿಂದಿನ ಸೀಟಿನಲ್ಲಿ ಕುರಿಸುತ್ತಿರುವ ದೃಶ್ಯ ಕಂಡು ಬಂದಿದೆ. ಹಾಗೂ ಕಾರ್ತಿಕ್ ಹಾಕಿದ 41 ಲಕ್ಷ ರೂಪಾಯಿಗಳು ಮತ್ತು ಪುನಃ ಹಿಂಪಡೆದ 41 ಲಕ್ಷ ರೂಪಾಯಿಗಳ ಬ್ಯಾಂಕ್ ಸ್ಟೇಟ್ಮೆಂಟ್ ಕೂಡ ಅವರ ಬಳಿ ಇದೆ. ಇದಲ್ಲದೆ ಕಾಲ್ ರೆಕಾರ್ಡಿಂಗ್ ಗಳು ಸಹ ಅವರ ಬಳಿ ಇವೆ.