C T Ravi: ಅಸೆಂಬ್ಲಿಯಲ್ಲಿ ಹೀನಾಯವಾಗಿ ಸೋತ ಸಿ.ಟಿ ರವಿಗೆ ಲೋಕಸಭಾ ಟಿಕೆಟ್ ಫಿಕ್ಸ್ ?! ಯಾರೂ ಊಹಿಸದ ಕ್ಷೇತ್ರ ಆರಿಸಿದ ನಾಯಕ !!

C T Ravi: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋತು ಸುಣ್ಣವಾಗಿರುವ ಬಿಜೆಪಿ ಪ್ರಬಲ ನಾಯಕ, ಮಾಜಿ ಸಚಿವ, ಮಾಜಿ ಶಾಸಕ ಸಿಟಿ ರವಿ(C T Ravi) ಅವರು ಸದ್ಯ ಪಕ್ಷದಲ್ಲಿ ಯಾವ ಅಧಿಕಾರ, ಸ್ಥಾನಮಾನಗಳಿಲ್ಲದೆ ತಣ್ಣಗಾಗಿದ್ದಾರೆ. ಪಕ್ಷ ನೀಡಿದ್ದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಧಿಕಾರವೂ ಸೋತ ಬಳಿಕ ತಾನಾಗೇ ಹೋಯಿತು, ರಾಜ್ಯಾಧ್ಯಕ್ಷ ಪಟ್ಟ ಸಿಗುತ್ತೆ ಅಂದುಕೊಂಡರೆ ಅದೂ ರಾಜಾಹುಲಿ ಮಗನ ಪಾಲಾಯಿತು. ಹೀಗಾಗಿ ಮತ್ತೆ ಏನಾದರೂ ಅವಕಾಶಗಿಟ್ಟಿಸಿಕೊಳ್ಳಲು ರವಿ ಅವರು ಲೋಕಸಭಾ ಚುನಾವಣೆ ಮೇಲೆ ಕಣ್ಣಿಟ್ಟಿದ್ದಾರೆ. ಇದಕ್ಕಾಗಿ ಅವರು ಆರಿಸಿಕೊಂಡಿರೋ ಕ್ಷೇತ್ರವನ್ನು ನೀವು ಊಹಿಸಲೂ ಅಸಾಧ್ಯ.

ಹೌದು, ಸಿ ಟಿ ರವಿ ಅವರು ಲೋಕಸಭಾ ಚುನಾವಣೆ(Parliament election)ಮೇಲೆ ಕಣ್ಣಿಟ್ಟಿರುವುದು ಸತ್ಯದ ಮಾತು ಬಿಡಿ. ಯಾಕೆಂದರೆ ಅವರ ಕ್ಷೇತ್ರದ ಜನರು, ಆಪ್ತರು ಈ ಬಗ್ಗೆ ಮಾತನಾಡುತ್ತಾರೆ. ಅದರಲ್ಲೂ ಅವರು ತಮ್ಮ ತವರು ಭೂಮಿ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲೇ ಸ್ಪರ್ಧೆಗೆ ಇಳಿಯುತ್ತಾರೆ ಎಂಬದು ಸದ್ಯದ ಮಾತು. ಆದರೆ ಚಾಲಕಿ ರವಿ ಅವರ ಚಿಂತನೆಯೇ ಬೇರೆ. ಈ ಹಿನ್ನೆಲೆಯಲ್ಲಿ ಅವರು ಯಾರೂ ಯೋಚಿಸದಂತೆ, ಊಹಿಸದಂತೆ ಬೆಂಗಳೂರು ಉತ್ತರ ಕ್ಷೇತ್ರದ ಟಿಕೆಟ್ ಮೇಲೆ ಸಿ.ಟಿ.ರವಿ ಕಣ್ಣಿಟ್ಟಿದ್ದಾರೆ.

ಯಾಕೆಂದರೆ ಸದ್ಯ ಉಡುಪಿ-ಚಿಕ್ಕಮಗಳೂರು(Udupi-Chikkamagaluru) ಕ್ಷೇತ್ರಲ್ಲಿ ಶೋಭಾ ಕರಂದ್ಲಾಜೆ(Shobha karandlaje) ಯವರು ಹಾಲಿ ಸಂಸದರಾಗಿದ್ದಾರೆ. ಜೊತೆಗೆ ಕೇಂದ್ರ ಸಚಿವರೂ ಆಗಿದ್ದಾರೆ. ಅಲ್ಲದೆ ಕರಾವಳಿಭಾಗದವರಾದ ಕಾರಣ ಅವರಿಗೆ ಈ ಭಾರಿಯೂ ಟಿಕೆಟ್ ಕನ್ಫರ್ಮ್ ಎನ್ನಲಾಗಿದೆ. ಹೀಗಾಗಿ ಇಲ್ಲಿ ನನ್ನ ಆಟ ನಡೆಯದು ಎಂದು ಅರಿತ ಸಿ ಟಿ ರವಿ ಅವರು ಅಭ್ಯರ್ಥಿಗಳ ನಿವೃತ್ತಿಯಿಂದ ಖಾಲಿಯಾಗುವ ಕ್ಷೇತ್ರಗಳತ್ತ ಗಮನ ನೀಡಿದ್ದಾರೆ. ಸೋ ಈ ಹಿನ್ನೆಲೆಯಲ್ಲಿ ಹಾಲಿ ಸಂಸದ ಸದಾನಂದಗೌಡ ಚುನಾವಣಾ ರಾಜಕೀಯಕ್ಕೆ ಗುಡ್ಬೈ ಹೇಳಿದ್ದರಿಂದ ಅವರ ಜಾಗದಲ್ಲಿ ಟಿಕೆಟ್ ಪಡೆಯುವ ಲೆಕ್ಕಾಚಾರ ಸಿ.ಟಿ.ರವಿಯದ್ದು.

ವಿಧಾನಸಭೆ ಸೋಲಿನ ಬಳಿಕ ಬೆಂಗಳೂರಿನಲ್ಲಿ ಆಯಕ್ಟೀವ್ ಆಗಿದ್ದು, ಬೆಂಗಳೂರಿನ ಬಿಜೆಪಿಯ ಎಲ್ಲಾ ಪ್ರತಿಭಟನೆಗಳಲ್ಲಿ ಭಾಗಿಯಾಗಿದ್ದಾರೆ. ಹೈಕಮಾಂಡ್ ಮನವೊಲಿಸಿ, ವರಿಷ್ಠರ ಕೈ ಹಿಡಿದು ಕೊನೆಗೂ ಸಿಟಿ ರವಿಯವರು ಟಿಕೆಟ್ ಗಿಟ್ಟಿಸಿಕೊಳ್ಳುತ್ತಾರಾ ನೋಡಬೇಕಿದೆ. ಹೈಕಮಾಂಡ್ ಏನು ತೀರ್ಮಾನ ಮಾಡುತ್ತದೆ ಎಂಬ ಕುತೂಹಲ ಕೂಡ ಎದ್ದಿದೆ.

 

1 Comment
  1. tlovertonet says

    Enjoyed studying this, very good stuff, regards. “It is in justice that the ordering of society is centered.” by Aristotle.

Leave A Reply

Your email address will not be published.