Gas KYC: ಗ್ಯಾಸ್ ಸಬ್ಸಿಡಿ ಕುರಿತು ಈ ರೀತಿ ಮೆಸೇಜ್ ಬಂದಿದ್ಯಾ?! ಹಾಗಿದ್ರೆ ತಕ್ಷಣ ಈ ಕೆಲಸ ಮಾಡಿ !!

Share the Article

Gas KYC: ಗ್ಯಾಸ್ ಸಂಪರ್ಕ ಇದ್ದವರು ತಮ್ಮ ಅಧಾರ್ ಕಾರ್ಡ್ ಬ್ಯಾಂಕ್ ಪಾಸ್ ಪುಸ್ತಕ ಮತ್ತು ಗ್ಯಾಸ್ ಏಜೆನ್ಸಿ ನೀಡಿದ ಪುಸ್ತಕವನ್ನು ಡಿಸೆಂಬರ್ 31 ರ ಒಳಗಡೆ ಗ್ಯಾಸ್ ನೀಡುವ ಎಜೆನ್ಸಿ ಬಳಿ ಹೋಗಿ KYC (Gas KYC) ಮಾಡಿಸಬೇಕೆಂಬ ಸಂದೇಶವೊಂದು ಜಾಲತಾಣದಲ್ಲಿ ಹರಿದಾಡುತ್ತಿದ್ದು, ಇದು ಸುಳ್ಳು ಸಂದೇಶ ಎಂದು ಆಹಾರ ಇಲಾಖೆ ಸ್ಪಷ್ಟಪಡಿಸಿದೆ.

Gas KYC

ಯಾಕೆಂದರೆ ಆಧಾರ್ ದೃಢೀಕರಣವು ಉಜ್ವಲ ಗ್ಯಾಸ್ ಸಂಪರ್ಕ ಪಡೆದಿರುವವರಿಗೆ ಮಾತ್ರ ಕಡ್ಡಾಯವಾಗಿದೆ. ಉಳಿದ ಬಳಕೆದಾರರಿಗೆ ಗ್ಯಾಸ್ ಸಬ್ಸಿಡಿಯ ಬಗ್ಗೆ ಪ್ರಸ್ತುತ ಯಾವುದೇ ಘೋಷಣೆ ಆಗಿರುವುದಿಲ್ಲ. ಗ್ಯಾಸ್ ಬಳಕೆದಾರರು ಯಾವುದೇ ಗೊಂದಲಕ್ಕೊಳಗಾಗಬಾರದು ಎಂದು ಆಹಾರ ಇಲಾಖೆಯ ಉಪನಿರ್ದೇಶಕರು ಸ್ಪಷ್ಟಪಡಿಸಿದ್ದಾರೆ.

ಇದನ್ನು ಓದಿ: Dakshina Kannada: ಹಿಂ.ಜಾ.ವೇ.ಸಹಸಂಯೋಜಕ ದಿನೇಶ್ ಪಂಜಿಗ ಗಡಿಪಾರು !

Leave A Reply