Dakshina Kannada: ಹಿಂ.ಜಾ.ವೇ.ಸಹಸಂಯೋಜಕ ದಿನೇಶ್ ಪಂಜಿಗ ಗಡಿಪಾರು !

Share the Article

ಹಿಂದೂ ಜಾಗರಣ ವೇದಿಕೆ ಪುತ್ತೂರು ಜಿಲ್ಲಾ ಸಹಸಂಯೋಜಕ ದಿನೇಶ್‌ ಪಂಜಿಗ ಅವರು ವಿರುದ್ಧ ಪುತ್ತೂರು ಉಪವಿಭಾಗೀಯ ದಂಡಾಧಿಕಾರಿ ಗಡಿಪಾರು ನೋಟಿಸ್‌ ಜಾರಿ ಮಾಡಿದ ಕುರಿತು ವರದಿಯಾಗಿದೆ. ಹಾಗೂ ನೋಟಿಸ್‌ ಜಾರಿ ಮಾಡಿದ್ದು, ಯಾಕೆ ಗಡಿಪಾರು ಮಾಡಬಾರದು ಎಂಬುವುದಕ್ಕೆ ಕಾರಣ ಕೇಳಿದ್ದಾರೆ.

ದಿನೇಶ್‌ ಪಂಜಿಗರವರು ಕಾನೂನು ರೀತ್ಯಾ ಈ ನೋಟಿಸ್‌ ಗೆ ಉತ್ತರ ನೀಡದಿದ್ದರೆ ವಿಜಯಪುರ ಜಿಲ್ಲೆಯ ಸಿಂಧಗಿ ಪೊಲೀಸ್‌ ಠಾಣಾ ವ್ಯಾಪ್ತಿಗೆ ಗಡಿಪಾರು ಸಾಧ್ಯತೆ ಇದೆ ಎನ್ನಲಾಗಿದೆ.

ಇದನ್ನು ಓದಿ: HD Kumaraswamy: ಕುಮಾರಸ್ವಾಮಿಯಿಂದ ಕೋಟ್ಯಾಂತರ ರೂ ಸಾಲಗಾರನಾಗಿ, ಇಂದಿಗೂ ಬಡ್ಡಿ ಕಟ್ಟುತ್ತಿದ್ದಾರೆ ಈ ಪ್ರಬಲ ಸಂಸದ !!

ಪುತ್ತೂರು ನಗರ ಪೊಲೀಸ್‌ ಠಾಣಾ ವ್ಯಾಪ್ತಿಯ ಶಾಂತಿಗೋಡು ಗ್ರಾಮದ ಪಂಜಿಗ ಮನೆ ಎಂಬಲ್ಲಿನ ದಿನೇಶ್‌ ಅವರು ವಿನಾಕಾರಣ ಕ್ಷುಲ್ಲಕ ವಿಚಾರಗಳಿಗೆ ತನ್ನ ಸಹಚರರೊಂದಿಗೆ ಸೇರಿ ತಕರಾರು ನಡೆಸಿದ್ದಾಗಿಯೂ, ದೊಂಬಿ, ಹಲ್ಲೆ ನಡೆಸಿ ಜನರಿಗೆ ಬೆದರಿಕೆ ಹಾಕಿರುವ ಪ್ರಕರಣದ ಆರೋಪಿ ಎಂದು ನೋಟಿಸ್‌ನಲ್ಲಿ ಹೇಳಲಾಗಿದೆ.

ಡಿ.20 ರಂದು ನ್ಯಾಯಾಲಯಕ್ಕೆ ಖುದ್ದು ಹಾಜರಾಗಿ ಅಥವಾ ವಕೀಲರ ಮೂಲಕ ಲಿಖಿತ ವಿವರಣೆ ನೀಡಬೇಕು ಇಲ್ಲವಾದಲ್ಲಿ ಏಕಪಕ್ಷೀಯ ತೀರ್ಮಾನ ಮಾಡಲಾಗುವುದು ಎಂದು ಹೇಳಲಾಗಿದೆ.

Leave A Reply