Samantha Second Marriage: ಸಮಂತಾಗೆ ಮರು ಮದುವೆ ?! ನಟಿ ಕೊಟ್ರು ಬಿಗ್ ಅಪ್ಡೇಟ್- ಇವರೇನಾ ಹುಡುಗ ?!

Share the Article

Samantha Second Marriage: ಭಾರತದ ಚಲನಚಿತ್ರ ಜಗತ್ತಿನಲ್ಲಿ ಪ್ಯಾನ್ ಇಂಡಿಯಾ ಎಂದು ಜನಪ್ರಿಯರಾಗಿರುವ, ಸಮಂತಾ ಅನಾರೋಗ್ಯದ ಕಾರಣ, ಆರೋಗ್ಯದ ಕಡೆ ಗಮನ ಹರಿಸಲು ಸಿನಿಮಾಗಳಿಂದ ಕೊಂಚ ರಿಲೀಫ್ ತೆಗೆದುಕೊಂಡ ಸ್ಯಾಮ್‌ ಇದೀಗ ಜನರೊಂದಿಗೆ ತಮ್ಮ ಮನದಾಳದ ಮಾತು ಹಂಚಿಕೊಂಡಿದ್ದಾರೆ.

ಹೌದು, ಸಿನಿಮಾದಿಂದ ದೂರ ಉಳಿದು ತನ್ನ ಆರೋಗ್ಯದ ಕಡೆ ಗಮನ ಹರಿಸಿರುವ ಸ್ಯಾಮ್ ತಮ್ಮ ಮಾನಸಿಕ ಮತ್ತು ದೈಹಿಕ ಆರೋಗ್ಯ‌ಕ್ಕಾಗಿ ಅನೇಕ ದೇಶಗಳಿಗೆ ಸುತ್ತುತ್ತಿದ್ದು, ಸಮಂತಾ ಇತ್ತೀಚೆಗೆ ಭೂತಾನ್‌ನಿಂದ ಹೈದರಾಬಾದ್‌ಗೆ ಹಿಂದಿರುಗಿದ್ದಾರೆ.

ಸದ್ಯ ಸಂಡೇ ಸ್ಪೇಷಲ್‌ ಎನ್ನುವ ಹಾಗೇ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಪ್ರಶ್ನೆಗಳನ್ನು ಕೇಳಿದರೆ, ಅದಕ್ಕೆ ಉತ್ತರಿಸುತ್ತೇನೆ ಎಂದು ಬರೆದುಕೊಂಡಿದ್ದರು. ಅಂತೆಯೇ ಅಭಿಮಾನಿಗಳು ತಮ್ಮ ಪ್ರಶ್ನೆಗಳನ್ನು ಕೇಳಿದರು ಮತ್ತು ಆ ಪ್ರಶ್ನೆಗಳಿಗೆ ಸ್ಯಾಮ್ ಉತ್ತರಿಸಿದರು. ಆದರೆ ಅದೇ ವೇಳೆ ಅಭಿಮಾನಿ ಒಬ್ಬರು ಸಮಂತಾಳ ಎರಡನೇ ಮದುವೆ (Samantha Second Marriage) ಬಗ್ಗೆ ಪ್ರಶ್ನೆ ಮಾಡಿದ್ದಾರೆ.

ಇದನ್ನು ಓದಿ: CM Siddaramaiah: ಭಾರತ ಹಿಂದೂ ರಾಷ್ಟ್ರ ಅಲ್ಲ, ಹಿಂದೂ ರಾಷ್ಟ್ರವಾಗಲು ಬಿಡುವುದೂ ಇಲ್ಲ !! ಸಿಎಂ ಸಿದ್ದರಾಮಯ್ಯ ಶಾಕಿಂಗ್ ಹೇಳಿಕೆ !!

ಇದಕ್ಕೆ ಉತ್ತರಿಸಿದ ಸಮಂತಾ, ಮರುಮದುವೆ ಕೆಟ್ಟ ಹೂಡಿಕೆ , ಕೀ ಡೈವೋರ್ಸ್ ಸ್ಟ್ಯಾಟಿಸ್ಟಿಕ್ಸ್ ಎಂಬ ವರದಿಯನ್ನು ಹಂಚಿಕೊಂಡಿದ್ದಾರೆ. ಅವರು ಹಂಚಿಕೊಂಡ ವರದಿಯಲ್ಲಿ, ಮೊದಲ ಬಾರಿಗೆ ಮದುವೆಯಾಗುವವರಿಗೆ ವಿಚ್ಛೇದನ ಪಡೆಯುವ ಸಾಧ್ಯತೆ 50 ಪ್ರತಿಶತವಿದೆ. ಮರುಮದುವೆಯಾದವರಿಗೆ ವಿಚ್ಛೇದನದ ಸಾಧ್ಯತೆ 67 ಪ್ರತಿಶತ. ಮೂರನೇ ಬಾರಿಗೆ ಮದುವೆಯಾಗುವವರಿಗೆ ವಿಚ್ಛೇದನದ ಸಾಧ್ಯತೆ ಶೇಕಡ 70 ರಷ್ಟು ಇರುತ್ತದೆ ಎಂದು ಹೇಳಲಾಗಿದೆ. ಈ ಮೂಲಕ ಸಮಂತಾ ಮತ್ತೆ ಮದುವೆಯಾಗುವುದಿಲ್ಲ ಎಂದು ಪರೋಕ್ಷವಾಗಿ ಸ್ಪಷ್ಟನೆ ನೀಡಿದ್ದಾರೆ. ಇದೀಗ ಸಮಂತಾ ಪೋಸ್ಟ್ ಎಲ್ಲೆಡೆ ವೈರಲ್ ಆಗಿದೆ.

 

Leave A Reply