SBI Bank: SBI ಬ್ಯಾಂಕ್ ನಲ್ಲಿ ಖಾತೆ ಹೊಂದಿದವರಿಗೆ ದೊಡ್ಡ ಆಘಾತ !!

 

SBI Bank: ದೇಶದ ಅತಿದೊಡ್ಡ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ SBI ಬ್ಯಾಂಕ್(SBI Bnak) ಕೂಡ ಒಂದು. ಇದೀಗ ಎಸ್‌ಬಿಐ ಗ್ರಾಹಕರಿಗೆ ದೊಡ್ಡ ಆಘಾತ ಎದುರಾಗಿದ್ದು ಬ್ಯಾಂಕ್ ತನ್ನ ಸಾಲದ EMI ಬಡ್ಡಿ ದರವನ್ನು ಹೆಚ್ಚಿಸಿ ಆದೇಶ ಹೊರಡಿಸಿದೆ.

ಹೌದು, ಎಸ್‌ಬಿಐ ಬ್ಯಾಂಕ್ ತಮ್ಮ ಗ್ರಾಹಕರಿಗೆ ಭಾರಿ ಹೊಡೆತ ನೀಡಿದೆ. ವಿವಿಧ ಅವಧಿಯ ಸಾಲಗಳಿಗೆ ಮಾರ್ಜಿನಲ್ ಕಾಸ್ಟ್ ಬೇಸ್ಡ್ ಲೆಂಡಿಂಗ್ ದರವನ್ನು (MCLR)ಮಾರ್ಜಿನಲ್ ವೆಚ್ಚದಲ್ಲಿ 5-10 ಬೇಸಿಸ್ ಪಾಯಿಂಟ್‌ಗಳ್ಟು ಹೆಚ್ಚಿಸುವುದಾಗಿ ಬ್ಯಾಂಕ್ ಘೋಷಿಸಿದೆ. ಇದರಿಂದ SBI ಗ್ರಾಹಕರಾಗಿದ್ದು, ಸಾಲ ಮಾಡಿದವರಿಗೆ ಭಾರೀ ಹೊಡೆತ ಬೀಳಲಿದೆ.

ಗ್ರಾಹೀರ ಮೇಲೆ ಏನೇನು ಪರಿಣಾಮ ಬೀರಲಿದೆ?
• ವಾಹನ ಅಥವಾ ಗೃಹ ಸಾಲಗಳಂತಹ ಗ್ರಾಹಕ ಸಾಲಗಳು ಸಾಲಗಾರರಿಗೆ ಹೆಚ್ಚು ದುಬಾರಿಯಾಗುತ್ತವೆ.
• ಸಾಲಗಳ ಮೇಲಿನ ಸಮಾನ ಮಾಸಿಕ ಕಂತುಗಳು (ಇಎಂಐಗಳು) ಹೆಚ್ಚು ದುಬಾರಿಯಾಗುತ್ತವೆ.
• ಹೆಚ್ಚುವರಿಯಾಗಿ, ಈಗಾಗಲೇ ಸಾಲ ಪಡೆದಿರುವ ಗ್ರಾಹಕರು ತಮ್ಮ ಭವಿಷ್ಯದ ಕಂತುಗಳನ್ನು ಈ ಹೆಚ್ಚಿದ ದರದಲ್ಲಿ ಪಾವತಿಸಬೇಕಾಗುತ್ತದೆ.
• ಪ್ರಸ್ತುತ ಸಾಲಕ್ಕಾಗಿ ಅರ್ಜಿ ಸಲ್ಲಿಸುತ್ತಿರುವ ಗ್ರಾಹಕರು ಹೊಸ, ಹೆಚ್ಚಿನ ದರದಲ್ಲಿ ಸಾಲವನ್ನು ಸ್ವೀಕರಿಸಬೇಕಾಗುತ್ತದೆ.

SBI ಯ ಪರಿಷ್ಕೃತ MCLR ನ ಹೊಸ ದರಗಳು :
• 1 ತಿಂಗಳ ಅವಧಿಗೆ 8.20%,
• 3 ತಿಂಗಳ ಅವಧಿಗೆ 8.20%,
• 6 ತಿಂಗಳ ಅವಧಿಗೆ 8.55%,
• 1 ವರ್ಷದ ಅವಧಿಗೆ 8.65%,
• 2 ವರ್ಷಗಳ ಅವಧಿಗೆ 8.75%,
• 3 ವರ್ಷಗಳ ಅವಧಿಗೆ 8.85%.ಆಗಲಿದೆ.

Leave A Reply

Your email address will not be published.