EPFO ಪಿಂಚಣಿದಾರರಿಗೆ ಸಿಹಿ ಸುದ್ದಿ – ಇಲ್ಲಿದೆ ನೋಡಿ ಹೊಸ ಅಪ್ಡೇಟ್

EPFO: ನೌಕರರ ಭವಿಷ್ಯ ನಿಧಿ (EPFO)ಹೆಚ್ಚಿನ ಪಿಂಚಣಿ ಆಕಾಂಕ್ಷಿಗಳಿಗೆ ಪರಿಹಾರ ನೀಡಿದೆ. ನೌಕರರ ಪಿಂಚಣಿ ಯೋಜನೆಯ (EPS)ಪ್ಯಾರಾ 12 ರ ಅಡಿಯಲ್ಲಿ ನಿರ್ದಿಷ್ಟಪಡಿಸಿದ ಸೂತ್ರದ ಅನುಸಾರ ಪಿಂಚಣಿ ನೀಡಲಾಗುತ್ತದೆ.

ಅರ್ಜಿಗಳ ಪರಿಶೀಲನೆ ಮಾಡಿದ ಬಳಿಕ ಅರ್ಹ ನಿವೃತ್ತ ಉದ್ಯೋಗಿಗಳಿಗೆ ನಿವೃತ್ತಿಯ ದಿನಾಂಕದಿಂದ ಹುದ್ದೆಯನ್ನು ನೀಡಲಾಗುತ್ತದೆ. ಪಿಂಚಣಿ ಮಂಜೂರು ಮಾಡುವವರೆಗೆ ಬಾಕಿಯಿರುವ ಮಾಸಿಕ ಪಿಂಚಣಿ ಬಾಕಿಯ ಮೊತ್ತದ ಮೇಲೆ ಆದಾಯ ತೆರಿಗೆ (TDS) ಕಡಿತ ಮಾಡಲಾಗುತ್ತದೆ. ಈ ಕುರಿತು ಅರ್ಹತಾ ಮಾನದಂಡಗಳ ಬಗ್ಗೆ ಇಪಿಎಫ್‌ಒ ಸ್ಪಷ್ಟಪಡಿಸಿದೆ.

ಪ್ರಾದೇಶಿಕ ಕಚೇರಿಗಳು ಪಿಂಚಣಿ ಲೆಕ್ಕಾಚಾರದ ಬಗ್ಗೆ ಸ್ಪಷ್ಟತೆಯ ಜೊತೆಗೆ ಅರ್ಜಿಗಳ ಪರಿಹಾರ ಪ್ರಕ್ರಿಯೆಯನ್ನು ಆರಂಭ ಮಾಡಿದೆ. ಬೇಡಿಕೆ ನೋಟಿಸ್ ಅನುಸಾರ, ಇಪಿಎಸ್ ಬಾಕಿ ಪಾವತಿಸಿದ ನಿವೃತ್ತ ನೌಕರರಿಗೆ ಪಿಂಚಣಿ ಮಂಜೂರಾತಿ ದಾಖಲೆಗಳನ್ನು ಅತೀ ಶೀಘ್ರದಲ್ಲಿ ಒದಗಿಸಲಾಗುತ್ತದೆ. ಬಾಕಿ ಬಿಡುಗಡೆಗೆ ಕ್ರಮ ಕೈಗೊಳ್ಳಲಾಗುತ್ತದೆ. ಯಾವುದೇ ಸಾಕ್ಷಿಯಿಲ್ಲದೆ ಸಲ್ಲಿಸಿದ ಅರ್ಜಿಗಳನ್ನು ಏಕಪಕ್ಷೀಯವಾಗಿ ತಿರಸ್ಕರಿಸಲಾಗುವುದಿಲ್ಲ. ಹೀಗಾಗಿ , ಉದ್ಯೋಗಿ ಅಥವಾ ಉದ್ಯೋಗದಾತರಿಂದ ಅವಶ್ಯಕ ಎಲ್ಲಾ ದಾಖಲೆಗಳನ್ನು ಸ್ವೀಕರಿಸಿ ಪರಿಶೀಲಿಸಲಾಗುತ್ತದೆ. ಒಂದು ವೇಳೆ ಅರ್ಹರಲ್ಲ ಎಂದಾದರೆ ಅರ್ಜಿಗಳನ್ನು ತಿರಸ,ರಿಸಲಾಗುತ್ತದೆ ಎಂದು ತಿಳಿಸಿದೆ.

ಇದನ್ನು ಓದಿ: Mangosteen Fruit Benefits: ಇದೊಂದು ಹಣ್ಣು ತಿಂದ್ರೆ ಎಂದಿಗೂ ನಿಮ್ಮ ತೂಕ ಹೆಚ್ಚಾಗುವುದೇ ಇಲ್ಲ !! ಮಾರ್ಕೆಟ್ ಅಲ್ಲಿ ಜನ ಮುಗಿಬಿದ್ದು ಕೊಳ್ತಾ ಇದ್ದಾರೆ !!

ಉದ್ಯೋಗಿಯೊಬ್ಬ ಸೆಪ್ಟೆಂಬರ್ 1, 2014 ಕ್ಕಿಂತ ಮೊದಲು ನಿವೃತ್ತರಾಗುವುದಾದರೆ, ಸೆಪ್ಟೆಂಬರ್ 1, 2014 ರೊಳಗೆ ನೌಕರರಿಗೆ ಪಿಂಚಣಿ ಪಾವತಿ ಆರಂಭವಾಗುತ್ತದೆ. ಇದಾದ ಬಳಿಕ, ಅವರು ಕಳೆದ 12 ತಿಂಗಳ ಸಂಬಳದ ಸರಾಸರಿಯ ಆಧಾರದ ಮೇಲೆ ಪಿಂಚಣಿಯನ್ನು ಲೆಕ್ಕ ಹಾಕಲಾಗುತ್ತದೆ.ಸೆಪ್ಟೆಂಬರ್ 1, 2014 ರ ಮೊದಲೆ ಇದ್ದ ಉದ್ಯೋಗಿಯಾದರೆ, ಅವರು 58 ಕ್ಕಿಂತ ಮೊದಲೇ ನಿವೃತ್ತಿ ಪಡೆಯುತ್ತಿದ್ದರೆ, ಸೆಪ್ಟೆಂಬರ್ 1, 2014 ನಂತರ ತಮ್ಮ ಪಿಂಚಣಿಯನ್ನು ಆರಂಭ ಮಾಡಬೇಕಾಗುತ್ತದೆ. ಇವರ ಕೊನೆಯ 60 ತಿಂಗಳ ಸರಾಸರಿ ವೇತನವನ್ನು ಪರಿಗಣಿಸಿ ಪಿಂಚಣಿಯನ್ನು ಲೆಕ್ಕಹಾಕಲಾಗುತ್ತದೆ.

Leave A Reply

Your email address will not be published.