Parliament: ಸಂಸತ್ ಪ್ರವೇಶಕ್ಕೆ 3 ಹಂತದ ಭಧ್ರತೆಯಿದ್ದರೂ ಲೋಪವಾದದ್ದೆಲ್ಲಿ ?! ಭದ್ರತೆಯ ಮೇಲುಸ್ತುವಾರಿ ಯಾರು ?!

Parliament news parliament has three levels of security and who is incharge of this security

Parliament : ಸಂಸತ್‍ನಲ್ಲಿ ಸ್ಮೋಕ್ ಬಾಂಬ್ (Security Breach in LokSabha) ಎಸೆದವರಲ್ಲಿ ಒಬ್ಬ ಆರೋಪಿಯನ್ನು ಮನೋರಂಜನ್ ಎಂದು ಗುರುತಿಸಲಾಗಿದೆ. ಈತ ಮೈಸೂರು ಮೂಲದವನು ಎನ್ನಲಾಗಿದೆ. ಪಾಸ್‌ ಹೊಂದಿರುವ ಸಂದರ್ಶಕರು ಸಂಸತ್‌ ಭವನದೊಳಗೆ(Parliament) ಭೇಟಿ ನೀಡಲು ಮೂರು ಹಂತದಲ್ಲಿ ಭದ್ರತಾ ಪರಿಶೀಲನೆ ವ್ಯವಸ್ಥೆಯಿದೆ.

ಸಂಸತ್‌ ಭವನದೊಳಗೆ(Parliament) ಮೂರು ಹಂತದ ಭದ್ರತೆಯಿದ್ದರೂ ಕೂಡ ಭದ್ರತಾ ಲೋಪ ಆದದ್ದು ಹೇಗೆ? ಎಂಬ ಪ್ರಶ್ನೆ ಸಹಜವಾಗಿ ಎಲ್ಲರನ್ನೂ ಕಾಡುತ್ತಿದೆ. ಸಂಸತ್ತಿನ ಆವರಣದ ಪ್ರವೇಶ ದ್ವಾರ, ಸಂಸತ್ತಿನ ಕಟ್ಟಡದ ಪ್ರವೇಶ ದ್ವಾರ, ಸಂದರ್ಶಕರ ಗ್ಯಾಲರಿಗೆ ತೆರಳುವ ಕಾರಿಡಾರ್‌ನಲ್ಲಿ ಭದ್ರತಾ ತಪಾಸಣೆ ಮಾಡಲಾಗುತ್ತದೆ. ಗುರುತಿನ ಚೀಟಿಗಳನ್ನು (identity card)ಹೊಂದಿರುವ ಸಂಸದರು, ಅಧಿಕಾರಿಗಳು, ಪ್ರಮಾಣೀಕೃತ ಪತ್ರಕರ್ತರು, ತಂತ್ರಜ್ಞರು ಮತ್ತು ಸಿಬ್ಬಂದಿ ಮಾತ್ರ ಸಂಸತ್‌ ಪ್ರವೇಶಿಸಲು ಅವಕಾಶ ನೀಡಲಾಗುತ್ತದೆ. ಇದನ್ನು ಹೊರತುಪಡಿಸಿ, ಇನ್ನುಳಿದವರಿಗೆ ಪ್ರವೇಶಕ್ಕೆ ನಿರ್ಬಂಧ ಹೇರಲಾಗುತ್ತದೆ.

ಸಂಸತ್ತಿಗೆ ಭೇಟಿ ನೀಡುವವರಿಗೆ ಸಂಸದರಿಂದ ಭದ್ರತಾ ಅನುಮತಿ ಬೇಕಾಗುತ್ತದೆ. ಇದರ ಜೊತೆಗೆ ಉದ್ಯಾನಗಳು, ಕಸಗುಡಿಸುವ ವರು ಮತ್ತು ಆವರಣದಲ್ಲಿರುವ ಇತರರನ್ನು ಒಳಗೊಂಡ ಹಾಗೆ ಸಿಬ್ಬಂದಿ ಪತ್ತೆಗೆ ಸಂಸತ್ತಿನ ಕಾವಲುಗಾರರಿಗೆ ತರಬೇತಿ ನೀಡಲಾಗುತ್ತದೆ. ಇವರೆಲ್ಲರಿಗೂ ಕಡ್ಡಾಯವಾಗಿ ಗುರುತಿನ ಚೀಟಿಗಳನ್ನು ನೀಡಲಾಗುತ್ತದೆ.ಸಂಸತ್ ಒಳ ಪ್ರವೇಶಿಸಲು ಮೊದಲಿಗೆ, ಸಂಸತ್ತಿನ ಆವರಣದ ಪ್ರವೇಶ ದ್ವಾರದಲ್ಲಿ ಸಂದರ್ಶಕರ ಬಳಿಯಿರುವ ಬ್ಯಾಗ್‌ ಸೇರಿದಂತೆ ಇನ್ನಿತರ ವಸ್ತುಗಳನ್ನು ಕನಿಷ್ಠ ಮೂರು ಬಾರಿ ಪರಿಶೀಲಿಸಲಾಗುತ್ತದೆ.

ಇದನ್ನು ಓದಿ: Pension Holders: ಪಿಂಚಣಿದಾರರಿಗೆ ಮುಖ್ಯ ಮಾಹಿತಿ- ಇನ್ಮುಂದೆ ಪೆನ್ಶನ್ ಬೇಕಂದ್ರೆ ನೀವು ಇಲ್ಲಿಗೆ ಹೋಗಲೇ ಬೇಕು !!

ಈ ಸಂದರ್ಭ ಸಂದರ್ಶಕರು ಪ್ರತ್ಯೇಕ ಪ್ರವೇಶ ದ್ವಾರ ಬಳಕೆ ಮಾಡಬೇಕಾಗುತ್ತದೆ. ಎರಡನೆಯ ಹಂತದಲ್ಲಿ ಸಂಸತ್ತಿನ ಕಟ್ಟಡದ ಪ್ರವೇಶ ದ್ವಾರದಲ್ಲಿ ಮೆಟಲ್‌ ಡಿಟೆಕ್ಟರ್‌ನಿಂದ ಹೊರ ಬಂದ ಬಳಿಕ ಭದ್ರತಾ ತಪಾಸಣೆ ಮಾಡಲಾಗುತ್ತದೆ. ಮೂರನೆಯದಾಗಿ ಸಂದರ್ಶಕರ ಗ್ಯಾಲರಿಗೆ ತೆರಳುವ ಕಾರಿಡಾರ್‌ನಲ್ಲಿ ಇನ್ನೊಮ್ಮೆ ಭದ್ರತಾ ತಪಾಸಣೆ ನಡೆಸಲಾಗುತ್ತದೆ.ಸಂಸತ್ತಿನ ಆವರಣ ಹಾಗೂ ಸುತ್ತಮುತ್ತಲಿನ ಸಂಸದರ ಸುರಕ್ಷತೆಯನ್ನು ಸಂಸತ್ತಿನ ಭದ್ರತಾ ಸೇವೆಗೆ ನೀಡಲಾಗುತ್ತದೆ.

ಲೋಕಸಭೆಯ ಸೆಕ್ರೆಟರಿಯಟ್‌ನ ಹೆಚ್ಚುವರಿ ಕಾರ್ಯದರ್ಶಿ (ಭದ್ರತೆ) ಅವರು ಸಂಸತ್ತಿನ ಭದ್ರತಾ ಸೇವೆ, ದಿಲ್ಲಿ ಪೊಲೀಸ್‌, ಐಟಿಬಿಪಿ, ಸಿಆರ್‌ಪಿಎಫ್‌ ಮತ್ತಿತರ ಪಡೆಗಳು ಇಡೀ ಸಂಸತ್ತಿನ ಭದ್ರತೆಯ ಉಸ್ತುವಾರಿ ವಹಿಸಿರುತ್ತವೆ.ಭದ್ರತಾ ಸಿಬ್ಬಂದಿ ಆಧುನಿಕ ಶಸ್ತ್ರಾಸ್ತ್ರಗಳನ್ನು ಒಳಗೊಂಡಿದ್ದು, ಸಂಸತ್ತಿನ ಪರಿಧಿಯ ನಿಯಂತ್ರಣವನ್ನು ತೆಗೆದುಕೊಳ್ಳುವ ಸಂದರ್ಭ ದಿಲ್ಲಿ ಪೊಲೀಸರ ಶಾರ್ಪ್‌ಶೂಟರ್‌ಗಳು ಮತ್ತು ಎಸ್‌ಡಬ್ಯುಎಟಿ ಕಮಾಂಡೋಗಳಿಂದ ಸಹಾಯ ಪಡೆಯುತ್ತವೆ. ಈ ಪ್ರಕ್ರಿಯೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಸಮನ್ವಯಕ್ಕಾಗಿ ಜಂಟಿ ಕಮಾಂಡ್‌ ಮತ್ತು ಕಂಟ್ರೋಲ್‌ ಕೇಂದ್ರವನ್ನು ಸ್ಥಾಪಿಸಲಾಗಿದ್ದು, ಇದರ ಜೊತೆಗೆ ಸಂಸತ್‌ ಭವನದ ಸುತ್ತಲೂ ಪರಿಧಿ ರಕ್ಷಣ ವ್ಯವಸ್ಥೆಯನ್ನು ಕೂಡ ಕಲ್ಪಿಸಲಾಗಿರುತ್ತದೆ.

Leave A Reply

Your email address will not be published.