Vinod raj: ಅಬ್ಬಬ್ಬಾ.. ಮಗ-ಸೊಸೆಯನ್ನು ಈ ಕಾರಣಕ್ಕಾಗಿ ಲೀಲಾವತಿ ಅವ್ರು ದೂರ ದೂರ ಇಟ್ಟಿದ್ರಂತೆ – ಶಾಕಿಂಗ್ ಹೇಳಿಕೆ ನೀಡಿದ ವಿನೋದ್ ರಾಜ್ !!
Entertainment Sandalwood news actress Leelavati kept Vinod Raj and his wife away for this reason
Vinod raj: ಕನ್ನಡ ಚಿತ್ರರಂಗದ ‘ಅಮ್ಮ’ ನಟಿ ಲೀಲಾವತಿ(Leelavati) ಅವರು ಕನ್ನಡಿಗರನ್ನು, ಅಪಾಯ ಅಭಿಮಾನಿಗಳನ್ನು ಅಗಲಿ ಕನ್ನಡದ ನೆಲದಲ್ಲಿ ಮಣ್ಣಾಗಿದ್ದಾರೆ. ಹಿರಿಯ ನಟಿ ಅಗಲಿಕೆಗೆ ಇಡೀ ರಾಜ್ಯವೇ ಕಂಬನಿ ಮಿಡಿದಿದೆ. ಇನ್ನು ಇತ್ತ ನಟಿಯ ಸಾವಿನೊಂದಿಗೆ ಕೆಲವು ಸತ್ಯಗಳು ಕೂಡ ಹೊರಬಂದಿದೆ. ಮಗ, ಮೊಮ್ಮಗ, ಸೊಸೆ ಒಂದೊಂದೇ ವಿಚಾರಗಳನ್ನು ಹೊರಗೆಡಹುತಿದ್ದಾರೆ. ಅಂತೆಯೇ ಇದೀಗ ಮಗ ವಿನೋದ್ ರಾಜ್(Vinod raj)ಅವರು ತಮ್ಮ ತಾಯಿ ನಡವಳಿಕೆಯ ಕುತೂಹಲ ಸತ್ಯವೊಂದನ್ನು ಬಿಚ್ಚಿಟ್ಟಿದ್ದಾರೆ.
ಹೌದು, ವಿನೋದ್ ರಾಜ್ ಅವರ ಅಪ್ಪ ಯಾರು, ಲೀಲಾವತಿ ಅವರ ಗಂಡ ಯಾರು ಎಂಬುದು ಕನ್ನಡಿಗರ ಬಹು ವರ್ಷಗಳ ಪ್ರಶ್ನೆ. ಲೀಲಾವತಿ ಅವರ ಅಂತ್ಯದ ವೇಳೆ ಈ ವಿಚಾರ ಸಾಕಷ್ಟು ಚರ್ಚೆಯಾಗಿ ಯಾವದೋ ಫೋಟೋ ಮೂಲಕ ಉತ್ತರ ದೊರೆಯಿತು. ಆದರೆ ತಾಯಿ-ಮಗನ ಬಾಯಿಯಿಂದ ಸತ್ಯ ಹೊರಬೀಳಲಿಲ್ಲ. ವಿನೋದ್ ರಾಜ್ ಅವರು ಈ ಬಗ್ಗೆ ಆಕ್ರೋಶ ಹೊರಹಾಕಿ ತೇಲಿಕೆಯ ಉತ್ತರ ನೀಡಿದ್ದರು. ಇನ್ನು ಇದರೊಂದಿಗೆ ವಿನೋದ್ ರಾಜ್ ಮದುವೆಯಾಗಿದ್ದಾರೆ, ಹೆಂಡತಿ ಬೇರೆಲ್ಲೋ ಇದ್ದಾರೆ ಎಂಬ ಗುಸು ಗುಸು ಆಗಾಗ ಕೇಳಿಸುತ್ತಿತ್ತಾದರೂ ಸತ್ಯ ಏನೆಂದು ತಿಳಿದಿರಲಿಲ್ಲ. ಆದರೆ ಲೀಲಾವತಿ ಅವರ ಕಾಲವಾದ ನಂತರ ವಿನೋದ್ ರಾಜ್ ಅವರ ಹೆಂಡತಿ, ಮಗ ಇದ್ದಕ್ಕಿದ್ದಂತೆ ಪ್ರತ್ಯಕ್ಷ ಆದರು. ಅಂದರೆ ಲೀಲಾವತಿ ಅವರ ಸೊಸೆ ಹಾಗೂ ಮೊಮ್ಮಗ ನಾಡಿನ ಜನರ ಮುಂದೆ ಅಧಿಕೃತವಾಗಿ ಕಾಣಿಸಿಕೊಂಡರು.
ಇನ್ನು ವಿನೋದ್ ರಾಜ್ ಅವರು ತಮ್ಮ ತಾಯಿಯ ಅಂತ್ಯಸಂಸ್ಕಾರದ ಬಳಿಕ ಮದುವೆ, ಹೆಂಡತಿ, ಮಗ ಎಲ್ಲದರ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಅಲ್ಲದೆ ತಮ್ಮ ತಾಯಿ ಗಂಡ-ಹೆಂಡತಿಯರಾದ ತಮ್ಮನ್ನು ಇಷ್ಟು ವರ್ಷ ಯಾಕೆ ದೂರ ಇಟ್ಟಿದ್ದರು ಎಂಬ ಅಚ್ಚರಿಯ ಸತ್ಯವೊಂದನ್ನು ಹೊರಹಾಕಿದ್ದಾರೆ.
ನಾನು ನನ್ನ ತಾಯಿಯ ಬಳಿ ಬೆಳೆದೆ. ಆಗ ತಾಯಿ ಲೀಲಾವತಿ ಅವರು ಹೇಗೆ ನನ್ನನ್ನು ತಿದ್ದಿ ಪಾಠ ಹೇಳಿದ್ದಾರೋ ಅದೇ ರೀತಿ ಯುವರಾಜ್‌ಗೂ ಕೂಡ ತಮ್ಮ ಪತ್ನಿ ಬೆಳೆಸಿದ್ದಾರೆ. ಮಗ-ಪತ್ನಿಯ ಬಗ್ಗೆ ಏನೇನೋ ಮಾತು ಬರೋದು ಬೇಡ ಅಂತ ನನ್ನಮ್ಮ ಮದ್ರಾಸ್‌ನಲ್ಲಿಟ್ಟರು. ಮಗನ ವಿದ್ಯಾಬ್ಯಾಸಕ್ಕಾಗಿ ನಮ್ಮಿಂದ ದೂರ ಇಟ್ಟೇವು. ಅವನು ಚೆನ್ನಾಗಿ ಓದಬೇಕು ಎಂಬ ಆಸೆಯಿತ್ತು. ಅದರಂತೆ ಇಂದು ಮಗ ಚೆನ್ನಾಗಿ ಓದಿ ಕೆಲಸದಲ್ಲಿದ್ದಾರೆ. ತಿಂಗಳಿಗೆ 50 ಸಾವಿರ ಸಂಬಳ ಬರುತ್ತದೆ. ಚೆನ್ನೈಯಲ್ಲಿ ವಾಸವಾಗಿದ್ದರೂ ಕೂಡ ಕನ್ನಡ ಚೆನ್ನಾಗಿಯೇ ಮಾತನಾಡುತ್ತಾರೆ ಎಂದು ವಿನೋದ್ ರಾಜ್ ಹೇಳಿದ್ದಾರೆ.
ಇದನ್ನೂ ಓದಿ: Arjuna death matter:ಕಾಡಾನೆ ಜೊತೆ ಅರ್ಜುನ ಕಾದಾಟ- ವೈರಲ್ ಆಯ್ತು ಸಾವಿನ ಕೊನೇ ಕ್ಷಣದ ಭಯಾನಕ ವಿಡಿಯೋ !!