lottery: ಬಾಯಾರಿಕೆಗೆ ಸೋಡಾ ಕುಡಿಯಲು ಅಂಗಡಿಗೆ ಹೋದ ಮಹಿಳೆ – ಮರಳುವಾಗ ಲಕ್ಷಾಧೀಶ್ವರಳಾಗಿ ಹೊರ ಬಂದಳು!! ಏನಪ್ಪಾ ಇದು ಸೋಡಾ ಮಹಿಮೆ?
America lottery news Woman go to shop to drink soda and she returned with rupees 83 lakh

lottery: ಅದೃಷ್ಟ ಯಾವಾಗ ಯಾರಿಗೆ ಒಲಿಯಲಿದೆ ಎನ್ನುವುದನ್ನು ಊಹಿಸಲು ಅಸಾಧ್ಯ. ಯಾಕೆಂದರೆ ಜೀವನ ನಿರ್ವಹಿಸಲು ಕಷ್ಟಪಡುವಂತಹ ಬಡಜನರೂ ರಾತ್ರೋ ರಾತ್ರೋ ಕೋಟ್ಯಾಧಿಪತಿಗಳಾಗಿದ್ದಾರೆ. ಅಂತೆಯೇ ಸೋಡಾ ಕುಡಿಯಲು ಹೋಗಿ ಏಕಾ ಏಕಿ ಶ್ರೀಮಂತೆಯಾದ ಮಹಿಳೆ ಬಗ್ಗೆ ನೀವು ಇಲ್ಲಿ ತಿಳಿಯಲಿದ್ದೀರಿ.

ಹೌದು, ಅದೃಷ್ಟ ಎಂದರೆ ಇದೇ ನೋಡಿ! ಅಮೆರಿಕದ ವರ್ಜೀನಿಯಾ ನಿವಾಸಿ ಜಾನೆಟ್ ಬೈನ್ ಎಂಬಾಕೆ ಸೋಡಾ ಕುಡಿಯಲು ಹೋಗಿ ಶ್ರೀಮಂತೆಯಾಗಿ ಹಿಂದುರುಗಿದ್ದಾಳೆ. ಈಕೆ ಸೋಡಾ ಕುಡಿಯಲು ಹೋಗಿದ್ದವಳು ಅಲ್ಲೇ ಕಂಡ ಲಾಟರಿ (lottery) ಟಿಕೆಟ್ ಖರೀದಿಸಿದಳು. ತನ್ನ ಟಿಕೆಟ್‌ನಲ್ಲಿ 100,000 ಡಾಲರ್ ಅಂದರೆ 83 ಲಕ್ಷ ರೂಪಾಯಿ ಬಹುಮಾನ ಬಂದಿದೆ ಎಂದು ತಿಳಿದ ತಕ್ಷಣ ಮಹಿಳೆ ಆಘಾತಕ್ಕೊಳಗಾಗಿದ್ದಾರೆ. ಟಿಕೆಟ್ ಸಂಖ್ಯೆಯನ್ನು ನೋಡಿದ ನಂತರ ಅವಳು ಆಶ್ಚರ್ಯಚಕಿತರಾದರು. ಬಳಿಕ ತುಂಬಾ ಸಂತೋಷಪಟ್ಟಿದ್ದಾರೆ.
ಸದ್ಯ ಲಾಟರಿಯಿಂದ ಇಷ್ಟು ಮೊತ್ತ ಗೆದ್ದಿರುವುದು ಇದೇ ಮೊದಲಲ್ಲ. ಈ ಹಿಂದೆ, ಹಲವು ಜನ ಇದೇ ರೀತಿ ಅಕಸ್ಮಾತ್ ಆಗಿ ಲಾಟರಿ ಗೆದ್ದ ನಿದರ್ಶನಗಳು ಇವೆ.