Home latest Wall Collapses: ಮನೆಯಲ್ಲಿ ಮದುವೆಯ ‘ಅರಿಶಿನ’ ಸಂಭ್ರಮ – ಗೋಡೆ ಕುಸಿದು 8 ಮಂದಿ ಸ್ಥಳದಲ್ಲೇ...

Wall Collapses: ಮನೆಯಲ್ಲಿ ಮದುವೆಯ ‘ಅರಿಶಿನ’ ಸಂಭ್ರಮ – ಗೋಡೆ ಕುಸಿದು 8 ಮಂದಿ ಸ್ಥಳದಲ್ಲೇ ಧುರ್ಮರಣ

Hindu neighbor gifts plot of land

Hindu neighbour gifts land to Muslim journalist

Wall Collapses: ಉತ್ತರ ಪ್ರದೇಶದ ಘೋಸಿ ಎಂಬಲ್ಲಿ ನಡೆದ ಮೆಹಂದಿ ಕಾರ್ಯಕ್ರಮದ (Pre-Wedding Function) ವೇಳೆ ಹಠಾತ್ ಗೋಡೆ ಕುಸಿದು (Wall Collapses) ಸಾವು ನೋವು ಸಂಭವಿಸಿರುವ ಮಾಹಿತಿ ಬೆಳಕಿಗೆ ಬಂದಿದೆ.

ಜಿಲ್ಲಾ ಮ್ಯಾಜಿಸ್ಟ್ರೇಟ್ ಅರುಣ್ ಕುಮಾರ್ ಮಾತನಾಡಿ, ವಿವಾಹ ಪೂರ್ವ ‘ಹಲ್ದಿ’ ಕಾರ್ಯಕ್ರಮದ (haldi function) ವೇಳೆ ಇದ್ದಕ್ಕಿದ್ದಂತೆ 20 ಜನರ ಮೇಲೆ ಗೋಡೆ ಕುಸಿದಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಗೋಡೆ ಕುಸಿತದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ(viral Video).

ಶುಕ್ರವಾರ ವಿವಾಹ ಪೂರ್ವ ಕಾರ್ಯಕ್ರಮದ ವೇಳೆ ಪಕ್ಕದ ಗೋಡೆ ಕುಸಿದು ಬಿದ್ದಿದೆ, ಗಾಯಾಳುಗಳನ್ನು ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ ಮತ್ತು ಅವರಿಗೆ ಚಿಕಿತ್ಸೆಯನ್ನು ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಅರುಣ್ ಕುಮಾರ್ ಅವರು ತಿಳಿಸಿದ್ದಾರೆ. ಘಟನೆಯಲ್ಲಿ ಆರು ಮಹಿಳೆಯರು ಮತ್ತು ಇಬ್ಬರು ಮಕ್ಕಳು ಸಾವನ್ನಪ್ಪಿದ್ದು, 20 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಘಟನೆ ಹಿನ್ನೆಲೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂಪಾಯಿ ಮತ್ತು ಎಲ್ಲಾ ಗಾಯಾಳುಗಳಿಗೆ 50,000 ರೂಪಾಯಿಗಳ ಪರಿಹಾರವನ್ನು ಘೋಷಿಸಿದ್ದಾರೆ ಮತ್ತು ಎಲ್ಲಾ ಗಾಯಾಳುಗಳಿಗೆ ಉಚಿತ ವೈದ್ಯಕೀಯ ಸೌಲಭ್ಯಗಳನ್ನು ಖಚಿತಪಡಿಸಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಇದನ್ನೂ ಓದಿ: ಎಂತಾ ಚಾನ್ಸ್ ಮಾರ್ರೆ .. ಒಂದೇ ಸಲಕ್ಕೆ 4 ಹುಡುಗಿಯರನ್ನು ಮದುವೆಯಾದ ಭೂಪ !! ಈ ಲಾಟ್ರಿ ಹೊಡೆದದ್ದಾದರು ಹೇಗೆ ?!