Brahmanda guruji: ನಟಿ ಲೀಲಾವತಿ ಕುರಿತು ಯಾರೂ ತಿಳಿಯದ ಅಚ್ಚರಿ ಸತ್ಯ ಬಿಚ್ಚಿಟ್ಟ ಬ್ರಹ್ಮಾಂಡ ಗುರೂಜಿ !!

Entertainment news Sandalwood news Brahmanda guruji reveal truth about actress leelavati

Brahmanda guruji : ಕನ್ನಡ ಚಿತ್ರರಂಗದ ‘ಅಮ’ ನಟಿ ಲೀಲಾವತಿ(Leelavati) ಅವರು ಕನ್ನಡ ನೆಲದಲ್ಲಿ ಮಣ್ಣಾಗಿದ್ದಾರೆ. ಹಿರಿಯ ನಟಿ ಅಗಲಿಕೆಗೆ ಇಡೀ ರಾಜ್ಯವೇ ಕಂಬನಿ ಮಿಡಿದಿದೆ. ನಟಿಯ ಸಾವಿನೊಂದಿಗೆ ಕೆಲವು ಸತ್ಯಗಳು ಕೂಡ ಹೊರಬಂದಿದೆ. ಅಂತೆಯೇ ಇದೀಗ ಕನ್ನಡ ಖ್ಯಾತ ಬ್ರಹ್ಮಾಂಡ ಗುರೂಜಿ(Brahmanda guruji ) ಲೀಲಾವತಿ ಅವರ ಕುರಿತು ಯಾರೂ ಅರಿಯದ ಅಚ್ಚರಿ ಸತ್ಯವೊಂದನ್ನು ಹೊರಹಾಕಿದ್ದಾರೆ.

ಹೌದು, ನಿನ್ನೆ ದಿನ ನಟಿ ಲೀಲಾವತಿ ಅವರ ಪಾರ್ಥೀವ ಶರೀರವನ್ನು ಸಾರ್ವಜನಿಕರ ದರ್ಶನಕ್ಕೆಂದು ಇಡಲಾಗಿತ್ತು. ಈ ವೇಳೆ ಅನೇಕ ಗಣ್ಯರು ಬಂದು ಲೀಲಾವತಿ ಅವರ ಅಂತಿಮ ದರ್ಶನ ಪಡೆದಿದ್ದಾರೆ. ಈ ವೇಳೆ ಅಂತಿಮ ದರ್ಶನ ಪಡೆಯಲು ಬ್ರಹ್ಮಾಂಡ ಗುರೂಜಿಯವರೂ ಬಂದಿದ್ದರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಸೂಪರ್ ಸ್ಟಾರ್ ರಜನಿಕಾಂತ್(Rajanikanth) ಅವರಿಗೆ ಲೀಲಾವತಿ ಅಮ್ಮ 10 ಎಕರೆ ಜಾಗ ಖರೀದಿಸಿಕೊಟ್ಟಿದ್ದಾರೆ’ಎಂದು ಹೇಳಿದ್ದಾರೆ.

ಈ ಕುರಿತಂತೆ ಮಾತನಾಡಿದ ಅವರು ‘ಡಾ.ರಾಜ್‌ಕುಮಾರ್‌, ಉದಯಕುಮಾರ್‌ ಅವರಿಂದ ಹಿಡಿದು ಅನೇಕರಿಗೆ ಮದ್ರಾಸ್‌ ಮೂಲಕೇಂದ್ರವಾಗಿತ್ತು. ಮಹಾಬಲಿಪುರದಲ್ಲಿ 10 ಎಕರೆ ಜಾಗ ತೆಗೆದುಕೊ ಅಂತಾ ಆಗ ರಜನಿಕಾಂತ್‌ (Rajinikanth) ಅವರಿಗೆ ಲೀಲಾವತಿ ಅಮ್ಮನವರು ಹೇಳಿದ್ದರು. ಆಗ ನಾವು ಅಲ್ಲೇ ಇದ್ದೆವು. ದ್ವಾರಕೀಶ್‌ ಚಿತ್ರ ಶೂಟಿಂಗ್‌ ನಡೆಯುತ್ತಿತ್ತು. ಆಗ ರಜನಿಕಾಂತ್‌ ನನ್ನ ಹತ್ತಿರ ದುಡ್ಡಿಲ್ಲ ಎಂದಾಗ, ಸ್ವತಃ ತಾವೇ ದುಡ್ಡುಕೊಟ್ಟು ರಜನಿಕಾಂತ್‌ಗೆ ಜಮೀನು ಖರೀದಿಸಿಕೊಟ್ಟಿದ್ದರು. ನಂತರ ಲೀಲಾವತಿ ಅವರಿಗೆ ರಜನಿಕಾಂತ್‌ ಹಣ ವಾಪಸ್‌ ಮಾಡಿದರು ಎಂದು ನೆನಪಿಸಿಕೊಂಡರು.

ಇದನ್ನೂ ಓದಿ: ಮಗ ವಿನೋದ್ ರಾಜ್ ಮದುವೆಯನ್ನ ಲೀಲಾವತಿ ಎಲ್ಲಿ ಮಾಡಿದ್ರು ಗೊತ್ತಾ ?! ಹೀಗೇಕೆ ಮಾಡಿದ್ರು ಲೀಲಮ್ಮ ?!

Leave A Reply

Your email address will not be published.