V Somanna: ಕೊನೆಗೂ ಬಿಜೆಪಿಯಲ್ಲಿ ಉಳಿಯುವ ನಿರ್ಧಾರಗೈದ ವಿ. ಸೋಮಣ್ಣ- ಈ ಕ್ಷೇತ್ರದಿಂದಲೇ ಲೋಕಸಭಾ ಸ್ಪರ್ಧೆ!!
V Somanna: ವಿಧಾನಸಭಾ ಚುನಾವಣೆಯಲ್ಲಿ ಎರಡು ಕ್ಷೇತ್ರದಲ್ಲಿ ನಿಂತು ಹೀನಾಯವಾಗಿ ಸೋಲುಂಡ ಬಿಜೆಪಿ ಪ್ರಬಲ ನಾಯಕ, ಮಾಜಿ ಸಚಿವ ಪಕ್ಷದ ಕಡೆಗಣೆಯಿಂದ ಕಾಂಗ್ರೆಸ್ ಸೇರಲು ಮುಂದಾಗಿದ್ದರು. ಈ ವಿಚಾರವಾಗಿ ಹೈಕಮಾಂಡ್ ಅನ್ನು ಭಾರೀ ಆಟ ಆಡಿಸಿದ್ರು. ಆದರೀಗ ಕೊನೆಗೂ ಅವರ ಮನವೊಲಿಸಿ ಪಕ್ಷದಲ್ಲೇ ಉಳಿಸಿಕೊಳ್ಳುವಲ್ಲಿ ಹೈಕಮಾಂಡ್ ಯಶಸ್ವಿಯಾಗಿದೆ.
ಹೌದು, ವಿಧಾನಸಭಾ ಚುನಾವಣೆಯಲ್ಲಿ(Assembly election) ಎರಡೈ ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಹೀನಾಯವಾಗಿ ಸೋಲುಂಡು, ಯಾವ ಅಧಿಕಾರವೂ ಇಲ್ಲದೆ ಅತಂತ್ರವಾಗಿರುವ ಮಾಜಿ ಸಚಿವ ವಿ ಸೋಮಣ್ಣ ಬಿಜೆಪಿ ರಾಜ್ಯಾಧ್ಯಕ್ಷ ಪಟ್ಟವಾದರೂ ಸಿಗುತ್ತದೆ ಎಂದು ನಿರೀಕ್ಷಿಸಿಸಿದ್ದರು. ನಾನು ಆಕಾಂಕ್ಷಿ ಎಂದು ಬಹಿರಂಗವಾಗಿ ಹೇಳಿದ್ದರು. ಆದರೆ ಇದು ವಿಜಯೇಂದ್ರ ಪಾಲಾದಾಗ ಅವರ ಆಕ್ರೋಶ ಸ್ಪೋಟಗೊಂಡಿತು. ಇನ್ನು
ಅವರು ಕಾಂಗ್ರೆಸ್(Congress) ಸೇರುತ್ತಾರೆ ಎಂದು ಹಲವು ಸಮಯದಿಂದ ಭಾರೀ ಚರ್ಚೆಯಾಗುತ್ತಿತ್ತು. ಸ್ವಪಕ್ಷದ ವಿರುದ್ಧ, ನಾಯಕರ ವಿರುದ್ಧ ಅವರು ನೀಡುವ ಹೇಳಿಕೆಗಳು ಇದಕ್ಕೆ ಬಲ ನೀಡುತ್ತಿದ್ದವು. ತನ್ನ ನಿರ್ಧಾರ ನಾಳೆ ಹೇಳುತ್ತೇನೆ, ನಾಡಿದ್ದು ಹೇಳುತ್ತೇನೆ ಎಂದು ಸತಾಯಿಸಿ, ಸತಾಯಿಸಿ ಕೊನೆಗೆ ಹೈಕಮಾಂಡ್ ನಡೆ ನೋಡಿ ನನ್ನ ನಿರ್ಧಾರ ಪ್ರಕಟ ಮಾಡುತ್ತೇನೆ ಎಂದಿದ್ದರು. ಆದರೀಗ ಅವರ ಮನವೊಲಿಸಿ ಪಕ್ಷದಲ್ಲೇ ಉಳಿಸಿಕೊಳ್ಳುವಲ್ಲಿ ಹೈಕಮಾಂಡ್ ಯಶಸ್ವಿಯಾಗಿದೆ.
ಕೇವಲ ಮನವೊಲಿಸಿ ಪಕ್ಷದಲ್ಲಿ ಇರುವಂತೆ ಮಾಡುವುದಲ್ಲದೆ ಲೋಕಸಭಾ ಟಿಕೆಟ್ ಕೊಡುವ ಭರವಸೆಯನ್ನೂ ಹೈಕಮಾಂಡ್ ನೀಡಲಾಗಿದೆ ಎನ್ನಲಾಗಿದೆ. ಅಂದಹಾಗೆ ತುಮಕೂರು ಲೋಕಸಭಾ ಕ್ಷೇತ್ರದಿಂದ ಟಿಕೆಟ್ ನೀಡುವ ಆಫರ್ ನ್ನ ಬಿಜೆಪಿ ನಾಯಕರು ನೀಡಿದ್ದಾರೆ. ತುಮಕೂರು ಕ್ಷೇತ್ರದಿಂದ ನೀವು ಅಥವಾ ನಿಮ್ಮ ಪುತ್ರ ಯಾರಾದರೂ ಸರಿ ಈ ಕ್ಷೇತ್ರದಿಂದ ಸ್ಪರ್ಧಿಸಿ ಎಂದು ಆಫರ್ ನೀಡಿದ್ದಾರೆ ಎನ್ನಲಾಗಿದ್ದು, ತುಮಕೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಕುರಿತು ಸಿದ್ದತೆ ನಡೆಸಿದ್ದಾರೆ ಎನ್ನಲಾಗಿದೆ.