Highway Driving Tips: ದಾರಿ ಮಧ್ಯೆ ಪೆಟ್ರೋಲ್, ಡೀಸೆಲ್ ಖಾಲಿಯಾಗಿ ತೊಂದರೆ ಆಗಿದ್ಯಾ?! ಇನ್ನು ಆ ಟೆನ್ಶನ್ ಬೇಡ, ಈ ನಂಬರ್ ಗೆ ಫೋನ್ ಮಾಡಿ ಸಾಕು !!
Travel news lifestyle highway driving tips driving safety tips complete detail in kannada
Highway Driving Tips: ನೀವು ಹೆದ್ದಾರಿಯಲ್ಲಿ ಪ್ರಯಾಣಿಸುವಾಗ (Highway Driving Tips)ನಿಮ್ಮ ಕಾರಿನಲ್ಲಿ ಪೆಟ್ರೋಲ್ ಅಥವಾ ಡೀಸೆಲ್ ಖಾಲಿಯಾಗಿದ್ದರೆ ಏನು ಮಾಡೋದಪ್ಪ ಎಂದು ನೀವು ಯೋಚಿಸುತ್ತಿದ್ದರೆ (Things to do)ಅಥವಾ ಚಿಂತಿತರಾಗಿದ್ದಾರೆ ಇಲ್ಲಿದೆ ನೋಡಿ ನಿಮಗೆ ಟೆನ್ಶನ್ ರಿಲೀಫ್ ಸುದ್ದಿ!!!
ನೀವು ಹೆದ್ದಾರಿಯಲ್ಲಿ ಪ್ರಯಾಣಿಸುವಾಗ(Travel )ನಿಮ್ಮ ಕಾರಿನಲ್ಲಿ ಪೆಟ್ರೋಲ್ ಅಥವಾ ಡೀಸೆಲ್ ಖಾಲಿಯಾದರೆ ಅದರಲ್ಲೂ ದೂರದವರೆಗೆ ಪೆಟ್ರೋಲ್ ಪಂಪ್ ಕಾಣಿಸದಿದ್ದರೆ, ನೀವಿನ್ನೂ ಗಾಬರಿಪಡುವ ಅವಶ್ಯಕತೆ ಇಲ್ಲ!!ಟೋಲ್(Toll)ಹೆದ್ದಾರಿಯಲ್ಲಿ(Highway)ಪ್ರಯಾಣಿಸುವಾಗ ಪ್ರಯಾಣಿಕರ ಕಾರು ಅಥವಾ ಬೈಕ್ ಅಥವಾ ಸ್ಕೂಟರ್ ಕೆಟ್ಟುಹೋದರೆ, ನೀವು ಮೆಕ್ಯಾನಿಕ್ ಅಥವಾ ಕಾರ್ ಸೇವೆಯ ಸಹಾಯವನ್ನು ಪಡೆದುಕೊಳ್ಳಬಹುದು. ಇದಲ್ಲದೆ, ಟೋಲ್ ರಶೀದಿಯಲ್ಲಿ ನೀಡಲಾದ ಸಹಾಯವಾಣಿ ಸಂಖ್ಯೆ ಅಥವಾ ಪೆಟ್ರೋಲ್ ಸಂಖ್ಯೆಗೆ ಕರೆ ಮಾಡಿದರೆ ಸಾಕು!! ನಿಮಗೆ ಕೆಲವು ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಪೂರೈಕೆ ಮಾಡಲಾಗುತ್ತದೆ. ಆದರೆ ಅದಕ್ಕೆ ನೀವು ಬೆಲೆಯನ್ನು ಪಾವತಿಸಬೇಕು.
*ಯಾವುದೇ ರೀತಿಯ ಸಮಸ್ಯೆಗಳಿಗೆ 1033 ಅನ್ನು ಡಯಲ್ ಮಾಡಿ
ಒಂದು ವೇಳೆ ದಾರಿಯಲ್ಲಿ ನಿಮಗೆ ಯಾವುದೇ ರೀತಿಯ ಸಮಸ್ಯೆ ಎದುರಾದರು ಕೂಡ ನೀವು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸಹಾಯವಾಣಿ ಸಂಖ್ಯೆ 1033 ಇಲ್ಲವೇ 108 ಗೆ ಕರೆ ಮಾಡಬಹುದಾಗಿದೆ. ದಿನದ 24 ಗಂಟೆಗಳ ಕಾಲ ನಿರಂತರ ಸೇವೆ ಸಿಗಲಿದೆ. NHEI ಯ ಕಾಲ್ ಸೆಂಟರ್‌ನಲ್ಲಿ ಕಾರ್ಯನಿರ್ವಾಹಕರು ನಿಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ನೆರವಾಗುತ್ತಾರೆ.
* ವೈದ್ಯಕೀಯ ತುರ್ತು ಸಂದರ್ಭದಲ್ಲಿ ಆಂಬ್ಯುಲೆನ್ಸ್
ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರಯಾಣಿಸುವಾಗ ಯಾರಿಗಾದರು ಅನಾರೋಗ್ಯಕ್ಕೀಡಾದರೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಆಂಬ್ಯುಲೆನ್ಸ್ ಸಹಾಯವಾಣಿ ಸಂಖ್ಯೆ 8577051000 ಮತ್ತು 7237999911 ಗೆ ಕರೆ ಮಾಡಿ ಆಂಬ್ಯುಲೆನ್ಸ್ ಸೇವೆ ಪಡೆಯಬಹುದು.
* ಶೀಘ್ರದಲ್ಲೇ ಮೆಕ್ಯಾನಿಕ್ ಕೂಡ ಲಭ್ಯವಾಗಲಿದೆ
ನಿಮ್ಮ ವಾಹನ ದಾರಿ ಮಧ್ಯೆ ಕೆಟ್ಟು ಹೋದರೆ, ಮೆಕ್ಯಾನಿಕ್ ಅನ್ನು ಕರೆತರುವ ಸೌಲಭ್ಯ ಕೂಡ ನಿಮಗೇ ಸಿಗಲಿದೆ. ಆದರೆ ಮೆಕ್ಯಾನಿಕ್ ನಿಮ್ಮ ಕಾರು ಇಲ್ಲವೇ ವಾಹನ ರಿಪೇರಿಗೆ ಶುಲ್ಕ ವಿಧಿಸಲಾಗುತ್ತದೆ. ಅಲ್ಲಿ ವಾಹನ ರಿಪೇರಿ ಮಾಡದಿದ್ದರೆ, ಅದನ್ನು ಸರ್ವೀಸ್ ಸ್ಟೇಷನ್‌ಗೆ ಒಯ್ಯಲಾಗುತ್ತದೆ.
ಇದನ್ನೂ ಓದಿ: ಸೂರ್ಯನ ಫೋಟೋ ಸೆರೆಹಿಡಿದ ಭಾರತದ ‘ಆದಿತ್ಯಾ’ – ಅಬ್ಬಬ್ಬಾ.. ಒಂದೊಂದೂ ಫೋಟೋ ಕೂಡ ರೋಚಕ !!