B S Yediyurappa: ವಿ ಸೋಮಣ್ಣ ಕಾಂಗ್ರೆಸ್ ಸೇರ್ಪಡೆ ವಿಚಾರ – ಯಡಿಯೂರಪ್ಪ ಕೊಟ್ರು ಶಾಕಿಂಗ್ ಹೇಳಿಕೆ!!
Karnataka politics news BS Yediyurappa clarifies v Somanna won't join any party latest news
BS Yediyurappa: ರಾಜ್ಯದಲ್ಲಿ ಬಿಜೆಪಿ(BJP) ಸೋತು ಸಣ್ಣವಾದ ಬಳಿಕ ಬಿಜೆಪಿಯ ಅನೇಕ ಪ್ರಬಲ ನಾಯಕರು ಕಾಂಗ್ರೆಸ್ ಸೇರುವ ಕುರಿತು ಚಿಂತನೆ ನಡೆಸಿದ್ದಾರೆ. ಅದರಲ್ಲಿಯೂ ಅವರ ಹೇಳಿಕೆಗಳು ಬಿಜೆಪಿಗೆ ಆಗಿದ್ದಾಂಗೆ ನಿದ್ದೆಗೆಡಿಸುತ್ತಿದೆ. ಅಂತಯೇ ಬಿಜೆಪಿ ಪ್ರಬಲ ನಾಯಕ, ಮಾಜಿ ಸಚಿವ ವಿ. ಸೋಮಣ್ಣ(V Somanna) ಅವರು ಕಾಂಗ್ರೆಸ್ ಸೇರುತ್ತಾರೆ ಎಂಬ ಸುದ್ದಿ ಭಾರೀ ಸದ್ದು ಮಾಡುತ್ತಿದೆ. ಸದ್ಯ ಈ ಬಗ್ಗೆ ಬಿಜೆಪಿ ಮಾಸ್ ಲೀಡರ್ ಯಡಿಯೂರಪ್ಪನವರು(BS Yediyurappa) ಮೌನಮುರಿದಿದ್ದಾರೆ.
ಹೌದು, ಕಾಂಗ್ರೆಸ್(Congress) ಸೇರುವ ಬಗ್ಗೆ ಸೋಮಣ್ಣ ಅವರು ದಿನದಿಂದ ದಿನಕ್ಕೆ ಹೊಸ ಹೊಸ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇದೀಗ ಹೈಕಮಾಂಡ್ ನಡೆ ನೋಡಿ ನನ್ನ ನಿರ್ಧಾರ ಏನು ಎಂದು ತಿಳಿಸುತ್ತೇನೆ ಎಂದಿದ್ದಾರೆ. ಒಟ್ಟಿನಲ್ಲಿ ನನಗೆ ಯಾವ ಸ್ಥಾನಮಾನ ನೀಡದಿದ್ದರೆ ಕಾಂಗ್ರೆಸ್ ಸೇರುವೆ ಎಂಬುದನ್ನು ಪರೋಕ್ಷವಾಗಿ ನುಡಿದಿದ್ದಾರೆ. ಆದರೆ ಈ ಬೆನ್ನಲ್ಲೇ ಇದಕ್ಕೆ ಪ್ರತಿಕ್ರಿಯಿಸಿದ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಮಾತನಾಡಿ, ಸೋಮಣ್ಣ ಎಲ್ಲೂ ಹೋಗಲ್ಲ, ತಮ್ಮ ಪಕ್ಷದಲ್ಲೇ ಇರುತ್ತಾರೆ, ತಾನು ಅವರೊಂದಿಗೆ ಮಾತಾಡುವುದಾಗಿ ಹೇಳಿದ್ದಾರೆ.
ಅಂದರೆ ಸೋಮಣ್ಣ ಅವರ ಮನವೊಲಿಸಲು ಯಡಿಯೂರಪ್ಪನವರು ಮುಂದಾಗಿದ್ದು ತಮ್ಮ ಪಕ್ಷದಲ್ಲೆ ಉಳ್ಳಿಸಿಕೊಳ್ಳಲು ಬಿಎಸ್ವೈ ಕಾರ್ಯಗತರಾಗಿದ್ದಾರೆ. ಜೊತೆಗೆ ಅವರಿಗೆ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ನೀಡಿದರು ಕೂಡ ಆಶ್ಚರ್ಯ ಏನಿಲ್ಲ!!