Home Education NPS Cancellation: ರಾಜ್ಯದಲ್ಲಿ OPS ಜಾರಿ – ಸರ್ಕಾರದಿಂದ ಹೊರಬಿತ್ತು ಬಿಗ್ ಅಪ್ಡೇಟ್ !!

NPS Cancellation: ರಾಜ್ಯದಲ್ಲಿ OPS ಜಾರಿ – ಸರ್ಕಾರದಿಂದ ಹೊರಬಿತ್ತು ಬಿಗ್ ಅಪ್ಡೇಟ್ !!

NPS Cancellation

Hindu neighbor gifts plot of land

Hindu neighbour gifts land to Muslim journalist

NPS Cancellation: ರಾಜ್ಯದಲ್ಲಿ ಹಳೇ ಪಿಂಚಣಿ ಪದ್ಧತಿಯನ್ನೇ (Old Pension Scheme) ಮರು ಜಾರಿ ಮಾಡಬೇಕು. ಹೊಸ ಪಿಂಚಣಿ ವ್ಯವಸ್ಥೆಯನ್ನು ರದ್ದು ಮಾಡಬೇಕು (NPS Cancellation) ಎಂದು ಆಗ್ರಹಿಸುತ್ತಿರುವ ಸರ್ಕಾರಿ ನೌಕರರಿಗೆ (Government employees) ಈ ಬಾರಿ ರಾಜ್ಯ ಸರ್ಕಾರದಿಂದ ಹೊಸ ಅಪ್ಡೇಟ್ ನೀಡಲಾಗಿದೆ.

ಹೌದು, ಬೆಳಗಾವಿ ಅಧಿವೇಶನದಲ್ಲಿ (Belagavi Winter Session) ಸಚಿವ ಕೃಷ್ಣ ಬೈರೇಗೌಡ (Minister Krishna Byre Gowda) ಅವರು, ಹಳೇ ಪಿಂಚಣಿ ವ್ಯವಸ್ಥೆಯನ್ನು ರಾಜ್ಯದಲ್ಲಿ ಜಾರಿಗೊಳಿಸುವ ಸಂಬಂಧ 10 ದಿನದೊಳಗೆ ಸಮಿತಿಯನ್ನು ಪುನರ್ ರಚನೆ ಮಾಡುತ್ತೇವೆ. ಆದಷ್ಟು ಶೀಘ್ರದಲ್ಲಿ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.

ಹಳೇ ಪಿಂಚಣಿ ವ್ಯವಸ್ಥೆ ಜಾರಿಗೊಳಿಸುವ ಬಗ್ಗೆ ಸರ್ಕಾರ ತೆಗೆದುಕೊಂಡ ಕ್ರಮ ಏನು? ಎಂಬ ಜೆಡಿಎಸ್‌ನ ಮರಿತಿಬ್ಬೇಗೌಡ, ಬಿಜೆಪಿಯ ಎಸ್.ವಿ. ಸಂಕನೂರ್ ಅವರು ವಿಧಾನ ಪರಿಷತ್‌ನಲ್ಲಿ ಪ್ರಶ್ನೆ ಕೇಳಿದ್ದರು. ಇದಕ್ಕೆ ಉತ್ತರಿಸಿದ ಸಚಿವ ಕೃಷ್ಣ ಬೈರೇಗೌಡ, ಹಿಂದೆ ಏಕ ವ್ಯಕ್ತಿಯ ಸಮಿತಿಯನ್ನು ಮಾಡಿದ್ದರು. ಈಗ ಆ ಸಮಿತಿಯನ್ನು ಪರಿಷ್ಕರಣೆ ಮಾಡಿ ನಾಲ್ಕೈದು ಸದಸ್ಯರ ನೇಮಕ ಮಾಡಲಾಗುವುದು. ಬಳಿಕ ಆ ಸಮಿತಿ ಕಾರ್ಯವ್ಯಾಪ್ತಿ ಅಳವಡಿಸುವ ಕೆಲಸವನ್ನು ನಾವು ಮಾಡುತ್ತೇವೆ ಎಂದು ಹೇಳಿದರು.

ಇದನ್ನು ಓದಿ: Drought Relief: ರಾಜ್ಯದ ರೈತರಿಗೆ ಬೊಂಬಾಟ್ ನ್ಯೂಸ್ – ನಿಮ್ಮ ಕೈ ಸೇರುತ್ತೆ 22,500 ದಷ್ಟು ಭರ್ಜರಿ ಬೆಳೆ ಪರಿಹಾರ !! ಹೀಗೆ ಮಾಡಿದರಷ್ಟೇ

ಆದರೆ ಯಾರನ್ನು ಪಿಂಚಣಿಯಿಂದ ಹೊರಗಿಡುವ ಪ್ರಶ್ನೆ ಇಲ್ಲ. ನಾನು ಅಟಲ್‌ ಬಿಹಾರಿ ವಾಜಪೇಯಿಯವರ ಮೇಲೆ ನಂಬಿಕೆ ಇಟ್ಟಿದ್ದೇನೆ. ಅವರ ಆಡಳಿತದ ಬಗ್ಗೆಯೂ ನಂಬಿಕೆ ಇಟ್ಟಿದ್ದೇನೆ. ವಾಜಪೇಯಿ ಆಳ್ವಿಕೆ ಯಲ್ಲಿ ಅವರು ಎನ್‌ಪಿಎಸ್ ತರುವಾಗ ಎಲ್ಲ ವಿಚಾರವನ್ನು ಗಮನದಲ್ಲಿಟ್ಟುಕೊಂಡು ಜಾರಿಗೆ ತಂದಿರುತ್ತಾರೆ ಎಂದರು.

ಈ ಕುರಿತು ಸಿಎಂ ಸಿದ್ದರಾಮಯ್ಯ ಅವರು ಸಾಧಕ ಬಾಧಕ ಅರಿತುಕೊಂಡು ಈಗಾಗಲೇ ಸೂಚನೆ ಕೊಟ್ಟಿದ್ದಾರೆ. 10 ದಿನದೊಳಗೆ ಸಮಿತಿ ಪುನರ್ ರಚನೆ ಮಾಡುತ್ತೇವೆ ಎಂದು ಇದೇ ವೇಳೆ ಸಚಿವ ಕೃಷ್ಣ ಬೈರೇಗೌಡ ಮಾಹಿತಿ ನೀಡಿದರು.