Home Karnataka State Politics Updates Central government: ದೇಶಾದ್ಯಂತ ಎಲ್ಲಾ ರೈತರಿಗೂ ಬಿಗ್ ಶಾಕ್ ಕೊಟ್ಟ ಮೋದಿ ಸರ್ಕಾರ- ಚುನಾವಣೆ ಹೊತ್ತಲ್ಲಿ...

Central government: ದೇಶಾದ್ಯಂತ ಎಲ್ಲಾ ರೈತರಿಗೂ ಬಿಗ್ ಶಾಕ್ ಕೊಟ್ಟ ಮೋದಿ ಸರ್ಕಾರ- ಚುನಾವಣೆ ಹೊತ್ತಲ್ಲಿ ಏನಿದು ಸರ್ಕಾರದ ಹೊಸ ನಡೆ ?!

Central government

Hindu neighbor gifts plot of land

Hindu neighbour gifts land to Muslim journalist

Central Government: ರೈತರ ಸಬಲೀಕರಣಕ್ಕಾಗಿ ಕೇಂದ್ರ ಸರ್ಕಾರ ಒಪಿಎಂಸಿ ಯೋಜನೆಯನ್ನು ಜಾರಿಗೆ ತಂದಿದ್ದು ಇದರ ಅಡಿಯಲ್ಲಿ ನೀಡುವ ಆರ್ಥಿಕ ನೆರವನ್ನು ಸರ್ಕಾರ ಹೆಚ್ಚು ಮಾಡುತ್ತದೆ ಎಂಬ ವಿಚಾರ ಸಾಕಷ್ಟು ಸುದ್ಧಿಯಾಗಿತ್ತು. ಆದರೀಗ ಈ ಕುರಿತು ಕೇಂದ್ರ ಸರ್ಕಾರವು(Central Government) ಬಿಗ್ ಅಪ್ಡೇಟ್ ನೀಡಿದ್ದು ದೇಶದ ರೈತರಿಗೆ ಶಾಕ್ ಎದುರಾಗಿದೆ.

ಹೌದು, ಪಿಎಂ ಕಿಸಾನ್(PM Kissan)ಯೋಜನೆಯಡಿ ನೀಡುವ ಆರ್ಥಿಕ ನೆರವನ್ನು ಹೆಚ್ಚಿಸುವ ಯಾವುದೇ ಯೋಚನೆ ನಮ್ಮ ಮುಂದಿಲ್ಲ ಎಂದು ಕೇಂದ್ರ ಸರ್ಕಾರವು ಕಡ್ಡಿ ತುಂಡಾಗುವಂತೆ ಹೇಳಿದೆ. ಅಂದಹಾಗೆ ಲೋಕಸಭಾ ಅಧಿವೇಶನದಲ್ಲಿ ಈ ಕುರಿತಂತೆ ಪ್ರಶ್ನೆ ಕೇಳಲಾಗಿದ್ದು, ಇದಕ್ಕೆ ಉತ್ತರಿಸಿದ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್‌ ತೋಮರ್‌ ಅವರು ಲೋಕಸಭೆಗೆ ಮಂಗಳವಾರ ತಿಳಿಸಿದರು.

Central government

ಅಲ್ಲದೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಸೇರಿ ಹಲವು ವಿಷಯಗಳ ಕುರಿತು ಪರಿಶೀಲನೆ ನಡೆಸಲು ಸರ್ಕಾರವು ಸಮಿತಿ ರಚಿಸಿದೆ. ಸಮಿತಿಯು ವರದಿಯನ್ನು ಇನ್ನಷ್ಟೇ ನೀಡಬೇಕಿದೆ ಎಂದು ಅವರು ಹೇಳಿದರು. ಈ ಮೂಲಕ ಪಿಎಂ ಕಿಸಾನ್ ಯೋಜನೆಯಡಿ ಹಣ ಹೆಚ್ಚಾಗುತ್ತದೆ, ಲೋಕಸಭಾ ಚುನಾವಣೆ ಇರುವುದರಿಂದ ಖಂಡಿತಾ ಆಗೇ ಆಗುತ್ತದೆ ಎಂದು ಭಾವಿಸಿದ್ದ ರೈತರಿಗೆ ಭಾರೀ ದೊಡ್ಡ ಆಘಾತ ಎದುರಾಗಿದೆ.

ಇದನ್ನು ಓದಿ: Refrigerator Tips: ಮನೆಗೆ ಫ್ರಿಡ್ಜ್ ಖರೀದಿಸೋ ನಿರೀಕ್ಷೆಯೇ ?! ಹಾಗಿದ್ರೆ ಯಾವ ತರದ ಫ್ರಿಡ್ಜ್ ಒಳ್ಳೆಯದು.. ಆರಿಸುವುದು ಹೇಗೆ ?!

ಪಿಎಂ ಕಿಸಾನ್ ಯೋಜನೆ:
ಯೋಜನೆ ಅಡಿ ಸದ್ಯ ಪ್ರತೀ ವರ್ಷ ರೈತರಿಗೆ ₹ 6,000ವನ್ನು ಮೂರು ಕಂತುಗಳಲ್ಲಿ ಅಂದರೆ ಪ್ರತೀ ಕಂತಿಗೆ 2,000 ರೂಪಾಯಿಗಳಂತೆ ನೀಡಲಾಗುತ್ತಿದೆ. ಈ ವರೆಗೆ ಕೇಂದ್ರವು ₹ 2.81 ಲಕ್ಷ ಕೋಟಿಯನ್ನು 11 ಕೋಟಿಗೂ ಹೆಚ್ಚು ಫಲಾನುಭವಿಗಳಿಗೆ 15 ಕಂತುಗಳಲ್ಲಿ ರೈತರ ಖಾತೆಗೆ ಜಮಾ ಮಾಡಿದೆ.