Gruha Lakshmi Scheme: ಗೃಹಲಕ್ಷ್ಮೀ ಹಣ ವರ್ಗಾವಣೆಯಲ್ಲಿ ಹೊಸ ಟ್ವಿಸ್ಟ್- ಬೇಗ ಹಣ ಪಡೆಯಲು ಮಹಿಳೆಯರೇ ಹೀಗೆ ಮಾಡಿ
State Government given big Update regarding Gruha Lakshmi scheme latest updates
Gruha Lakshmi Scheme: ಕಾಂಗ್ರೆಸ್ ಸರ್ಕಾರದ 5 ಗ್ಯಾರಂಟಿಗಳಲ್ಲಿ ಗೃಹಲಕ್ಷ್ಮೀ ಯೋಜನೆ (Gruha Lakshmi Scheme) ಕೂಡ ಒಂದಾಗಿದ್ದು, ಈಗಾಗಲೇ ಕೆಲವು ಮಹಿಳೆಯರ ಖಾತೆಗೆ ಹಣ ಜಮಾ ಆಗಿದ್ದು, ಇನ್ನೂ ಕೆಲವರ ಅಕೌಂಟ್ಗೆ ಜಮೆ ಆಗಿಲ್ಲ. ಈ ಹಿನ್ನಲೆ ರಾಜ್ಯಾದ್ಯಂತ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗೃಹಲಕ್ಷ್ಮಿ ಯೋಜನೆಯಡಿ(Gruha Lakshmi Scheme) ಯಜಮಾನಿಯರಿಗೆ 2,000 ರೂ. ನೀಡಲಾಗುತ್ತಿದ್ದು, ಖಾತೆಗೆ ಹಣ ಜಮೆ ಆಗಿಲ್ಲ ಎಂದಾದರೆ ತಪ್ಪದೇ ಈ ಕೆಲಸಗಳನ್ನು ಮಾಡಿ
ಈ ಯೋಜನೆಯಡಿ ಪಡಿತರ ಚೀಟಿ ಹೊಂದಿದ ‘ಕುಟುಂಬದ ಯಜಮಾನಿ’ ಎಂದು ಗುರುತಿಸಲ್ಪಟ್ಟ ಮಹಿಳೆಯರಿಗೆ ಆಧಾರ್ ಜೋಡಣೆಯಾಗಿರುವ ಬ್ಯಾಂಕ್ ಖಾತೆಗೆ ಆಗಸ್ಟ್ 2023 ರಿಂದ ತಿಂಗಳ 2000 ರೂ.ಗಳನ್ನು ಡಿಬಿಟಿ ಮೂಲಕ ಹಣ ಜಮೆ ಮಾಡಲಾಗುತ್ತಿದೆ.
* ಮಹಿಳಾ ಮತ್ತು ಮಕ್ಕಳ ಇಲಾಖೆ ಅಧಿಕಾರಿ, ಸಿಡಿಪಿಓ ಅಧಿಕಾರಿಗಳನ್ನು ಭೇಟಿಯಾಗಿ :
ಮಹಿಳಾ ಮತ್ತು ಮಕ್ಕಳ ಇಲಾಖೆ ಅಧಿಕಾರಿ, ಸಿಡಿಪಿಓ ಅಧಿಕಾರಿಗಳನ್ನು ಭೇಟಿಯಾಗಿ ನಿಮ್ಮ ಗೃಹಲಕ್ಷ್ಮಿ ಅರ್ಜಿ ಸಲ್ಲಿಕೆಯ ಸ್ವೀಕೃತಿ, ಬ್ಯಾಂಕ್ ಪಾಸ್ ಬುಕ್ (ವಿವರ, ಆಧಾರ್ ಕಾರ್ಡ್ ಮತ್ತು ರೇಷನ್ ಕಾರ್ಡ್ ಪ್ರತಿಯನ್ನು ನೀಡಿ ಮಾಹಿತಿ ಪಡೆಯಿರಿ.
* ಇ-ಕೆವೈಸಿ ಅಪ್ಲೇಟ್:
ಗೃಹಲಕ್ಷ್ಮಿ ಯೋಜನೆಯ ಸೌಲಭ್ಯ ದೊರೆಯಲು ಇ-ಕೆವೈಸಿ ಅಪ್ಡೇಟ್ ನೀಡಲು ಸೂಚನೆ ನೀಡಲಾಗಿದೆ.
* ಬ್ಯಾಂಕ್ ಗೆ ಭೇಟಿ ನೀಡಿ :
ನಿಮ್ಮ ಬ್ಯಾಂಕ್ ಖಾತೆ ಇಲ್ಲವೇ ಪೋಸ್ಟ್ ಆಫೀಸ್ ನಲ್ಲಿ ಚೆಕ್
ಮಾಡಿಕೊಳ್ಳಿ. ಕೆಲವೊಮ್ಮೆ ತಾಂತ್ರಿಕ ಸಮಸ್ಯೆಗಳಿಂದ ಎಸ್ ಎಂ ಎಸ್ ಬರದೇ ಇರುವ ಸಾಧ್ಯತೆಗಳಿವೆ. ಹೀಗಾಗಿ, ಬ್ಯಾಂಕ್ ಗೆ ಹೋಗಿ ಖಾತೆ ಪರಿಶೀಲಿಸಿಕೊಳ್ಳಬಹುದು.
* ಖಾತೆ ಆ್ಯಕ್ಟಿವ್ ಇದೆಯೋ ಇಲ್ಲವಾ ಪರಿಶೀಲಿಸಿ
ಯಜಮಾನಿಯರ ಬ್ಯಾಂಕ್ ಖಾತೆಯಲ್ಲಾಗಿರುವ ಕೆಲವು ತಾಂತ್ರಿಕ ತೊಂದರೆಗಳಿಂದ ಇನ್ನೂ ಕೆಲವು ಯಜಮಾನಿಯರ ಖಾತೆಗೆ ಹಣ ಬಂದಿಲ್ಲ. ಹೀಗಾಗಿ, ಬ್ಯಾಂಕ್ ಗೆ ಹೋಗಿ ಖಾತೆ ಆ್ಯಕ್ಟಿವ್ ಆಗಿದೆಯೇ ಎಂದು ಪರಿಶೀಲಿಸಿಕೊಳ್ಳಿ.
ಇದನ್ನು ಓದಿ: Health Care: ಮನೆಯೊಳಗೆ ಒದ್ದೆ ಬಟ್ಟೆ ಒಣಗಿಸುವವರೆ ಹುಷಾರ್ – ಇಂದೇ ನಿಲ್ಲಿಸಿ ಈ ಅಭ್ಯಾಸ !! ಇದರಿಂದ ಏನೇನಾಗುತ್ತೆ ಗೊತ್ತಾ?!
* ದೂರು ಕೊಡಿ
‘ಗೃಹಲಕ್ಷ್ಮಿ’ ಯೋಜನೆಯ ಹಣ ಪಾವತಿ ಆಗದ ಹಿನ್ನೆಲೆಯಲ್ಲಿ ಅದಾಲತ್ ನಡೆಸಲು ಸರ್ಕಾರ ಮುಂದಾಗಿದೆ. ಹಣ ಜಮೆಯಾಗದೇ ಇರುವವರ ಬಳಿ ಸರ್ಕಾರ ಹೋಗಿ ಸಮಸ್ಯೆಯನ್ನು ಬಗೆಹರಿಸಲು ತೀರ್ಮಾನ ಕೈಗೊಂಡಿದೆ. ಇನ್ನೂ ಹಣ ಸಿಗದವರು ಅದಾಲತ್ ನಲ್ಲಿ ದೂರು ನೀಡಬಹುದು. ಗ್ರಾಮ-ಗ್ರಾಮಗಳಲ್ಲಿ ಅದಾಲತ್ ಗೆ ಇಲಾಖೆ ಸಿದ್ದವಾಗಿದ್ದು, ಅದಾಲತ್ ಗೂ ಮುನ್ನ ಅಂಗನವಾಡಿ ಕಾರ್ಯಕರ್ತೆಯರು ಮನೆಗಳಿಗೆ ತೆರಳಿ, ತಾಂತ್ರಿಕ ದೋಷಗಳಿಗೆ ಕಾರಣ ಸಂಗ್ರಹಿಸಲಿದ್ದಾರೆ.
* ರೇಷನ್ ಕಾರ್ಡ್ ಗೆ ಕಡ್ಡಾಯವಾಗಿ ಇ-ಕೆವೈಸಿ ಮಾಡಿಸಿ
* ಅಂಚೆ ಕಚೇರಿಯಲ್ಲಿ ಖಾತೆ ತೆರೆಯಿರಿ
* ರೇಷನ್ ಕಾರ್ಡ್ ಗೆ ಆಧಾರ್ ಲಿಂಕ್ ಮಾಡಿಸಿ.
* ಆಧಾರ್ ಕಾರ್ಡ್ ಹಾಗೂ ಬ್ಯಾಂಕ್ ಖಾತೆ ಲಿಂಕ್ ಆಗಿದೆಯೇ ಪರಿಶೀಲಿಸಿ.