Home Karnataka State Politics Updates Jagadish Shettar: ಬಿಜೆಪಿ ಸೇರ್ಪಡೆ ವಿಚಾರ- ಬಿಗ್ ಅಪ್ಡೇಟ್ ಕೊಟ್ಟ ಜಗದೀಶ್ ಶೆಟ್ಟರ್ !!

Jagadish Shettar: ಬಿಜೆಪಿ ಸೇರ್ಪಡೆ ವಿಚಾರ- ಬಿಗ್ ಅಪ್ಡೇಟ್ ಕೊಟ್ಟ ಜಗದೀಶ್ ಶೆಟ್ಟರ್ !!

Congress leader jagadish Shettar

Hindu neighbor gifts plot of land

Hindu neighbour gifts land to Muslim journalist

Congress leader jagadish Shettar: ರಾಜ್ಯದ ಮಾಜಿ ಸಿಎಂ ಹಾಗೂ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿರುವ ಪ್ರಬಲ ನಾಯಕ ಜಗದೀಶ್ ಶೆಟ್ಟರ್ ಅವರು ಮರಳಿ ಬಿಜೆಪಿಗೆ ಸೇರುತ್ತಾರೆ ಎಂಬ ವಿಚಾರ ನಿನ್ನೆ ಸಾಕಷ್ಟು ಸುದ್ಧಿಯಾಗಿತ್ತು. ಬಿಜೆಪಿ ನಾಯಕ ಕೆ ಎಸ್ ಈಶ್ವರಪ್ಪನವರು ಈ ಕುರಿತು ಹೊಸ ಬಾಂಬ್ ಸಿಡಿಸಿದ್ದರು. ಆದರೀಗ ಈ ಬಗ್ಗೆ ಸ್ವತಃ ಜಗದೀಶ್ ಶೆಟ್ಟರ್(Jagadish Shetter) ಅವರೇ ಮಹತ್ವದ ಹೇಳಿಕೆ ನೀಡಿದ್ದಾರೆ.

ಹೌದು, ನಾನು ಮರಳಿ ಎಂದಿಗೂ ಬಿಜೆಪಿ(BJP) ಸೇರುವುದಿಲ್ಲ. ಬಿಜೆಪಿ ಸೇರುತ್ತೇನೆ ಎನ್ನುವ ಈಶ್ವರಪ್ಪ(K S Eshwarappa) ಅವರ ಹೇಳಿಕೆ ಹಸಿಯಾದ ಸುಳ್ಳು. ಬೇರೆಯವರು ಕಾಂಗ್ರೆಸ್‌ಗೆ ಬರಬಾರದು ಎಂದು ನಾನು ಬಿಜೆಪಿಗೆ ವಾಪಸ್‌ ಬರುತ್ತಿದ್ದೇನೆ ಎಂದು ಬಿಂಬಿಸಲಾಗುತ್ತಿದೆಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌( Congress leader jagadish Shettar) ಹೇಳಿದರು.

ಅನೇಕ ನಾಯಕರು ಕಾಂಗ್ರೆಸ್(Congress) ಸೇರಲು ಮುಂದಾಗಿದ್ದಾರೆ. ಹೀಗಾಗಿ ಶೆಟ್ಟರ್ ಅವರೇ ಬಿಜೆಪಿಗೆ ಬಂದು ಬಿಡ್ತಾರೆ ನೀವು ಕಾಂಗ್ರೆಸ್‌ಗೆ ಹೋಗಬೇಡಿ ಎಂದು ಹೇಳುತ್ತಿದ್ದಾರೆ. ನಾನು ಮರಳಿ ಬಿಜೆಪಿಗೆ ಹೋಗುವ ಮಾತೇ ಇಲ್ಲ. ನನಗೆ ಮತ್ತು ಲಕ್ಷ್ಮಣ ಸವದಿಯವರಿಗೆ ಟಿಕೆಟ್ ತಪ್ಪಿಸಿದ ಪರಿಣಾಮವನ್ನು ಜನ ತೋರಿಸಿದ್ದಾರೆ. ಲೋಕಸಭೆ ಚುನಾವಣೆಯಲ್ಲೂ ಇದು ಮುಂದುವರಿಯಲಿದೆ. ಬಿಜೆಪಿಯವರು ಕಾಂಗ್ರೆಸ್‌ಗೆ ಹೋಗದಂತೆ ತಡೆಯಲು ನನ್ನ ಹೆಸರು ಬಳಕೆ ಮಾಡ್ತಿದ್ದಾರೆ. ಎಂದರು.

ಈಶ್ವರಪ್ಪ ಹೇಳಿದ್ದೇನು ?!:
ಕೆ ಎಸ್ ಈಶ್ವರಪ್ಪನವರು(K S Eshwarappa) ನನಗಂತೂ ಜಗದೀಶ್‌ ಶೆಟ್ಟರ್‌ ಬಿಜೆಪಿಗೆ ಬರಬೇಕು ಎಂಬ ಅಪೇಕ್ಷೆ ಇದೆ. ಅವರು ಆತ್ಮೀಯ ಸ್ನೇಹಿತರು. ಅವರ ತಂದೆ ಜನಸಂಘದ ಕಾಲದಿಂದ ಬಂದವರು. ಅವರ ಮೈಯಲ್ಲಿ ಹಿಂದುತ್ವದ ರಕ್ತ ಹರಿಯುತ್ತಿದೆ. ಕಾಂಗ್ರೆಸ್ (Congress) ಸೇರಿದ್ದಕ್ಕೆ ಅನಿವಾರ್ಯ ಹೇಳಿಕೆ ನೀಡುತ್ತಾರೆ. ಇನ್ನು ಸ್ವಲ್ಪ ದಿನಕ್ಕೆ ನಮ್ಮ ಹತ್ರಾನೇ ಬರುತ್ತಾರೆ. ಅಧಿಕೃತವಾಗಿ ಬಿಜೆಪಿ ಸೇರುತ್ತಾರೆ. ಆಗ ದೇಶದಲ್ಲಿ ಕಾಂಗ್ರೆಸ್ ರಿಪೇರಿ ಮಾಡೋಕೆ ಆಗಲ್ಲ ಎಂಬ ಮಾತು ಹೇಳ್ತಾರೆ ಎಂದು ಹೇಳಿದ್ದರು.

ಇದನ್ನೂ ಓದಿ: ಬೆಳ್ತಂಗಡಿ: ಗುರುವಾಯನಕೆರೆ ಕಾಲೇಜಿನ ಹಾಸ್ಟೆಲ್ 11 ಹುಡುಗರು ನಾಪತ್ತೆ! ಹುಡುಗ್ರು ಎಸ್ಕೇಪ್ ರೂಟ್ ಹಿಡಿದದ್ದೇ ವಿಚಿತ್ರ !