Home Karnataka State Politics Updates Jagadish shetter: ಜಗದೀಶ್ ಶೆಟ್ಟರ್ ಮತ್ತೆ ಬಿಜೆಪಿ ಸೇರ್ಪಡೆ ?!

Jagadish shetter: ಜಗದೀಶ್ ಶೆಟ್ಟರ್ ಮತ್ತೆ ಬಿಜೆಪಿ ಸೇರ್ಪಡೆ ?!

Jagadish Shettar rejoins bjp

Hindu neighbor gifts plot of land

Hindu neighbour gifts land to Muslim journalist

Jagadish Shettar rejoins bjp: ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿ ಸಾಕಷ್ಟು ಸುದ್ದಿಯಾಗಿದ್ದರು. ಕಾಂಗ್ರೆಸ್ ಸೇರಿದಾಗಿಂದಲೂ ಹಲವು ವಿಚಾರಗಳಲ್ಲಿ ಬಿಜೆಪಿಯನ್ನು ಕುಟುಕಿದ್ದರು. ಆದರೀಗ ಬಿಜೆಪಿ ನಾಯಕ ಈಶ್ವರಪ್ಪನವರು ಜಗದೀಶ್ ಶೆಟ್ಟರ್(Jagadish shetter) ಮತ್ತೆ ಬಿಜೆಪಿ ಸೇರುತ್ತಾರೆ (Jagadish Shettar rejoins bjp)ಎಂದು ಹೇಳಿ ಹೊಸ ಬಾಂಬ್ ಸಿಡಿಸಿದ್ದಾರೆ.

ಹೌದು, ಗದಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಕೆ ಎಸ್ ಈಶ್ವರಪ್ಪನವರು(K S Eshwarappa) ನನಗಂತೂ ಜಗದೀಶ್‌ ಶೆಟ್ಟರ್‌ ಬಿಜೆಪಿಗೆ ಬರಬೇಕು ಎಂಬ ಅಪೇಕ್ಷೆ ಇದೆ. ಅವರು ಆತ್ಮೀಯ ಸ್ನೇಹಿತರು. ಅವರ ತಂದೆ ಜನಸಂಘದ ಕಾಲದಿಂದ ಬಂದವರು. ಅವರ ಮೈಯಲ್ಲಿ ಹಿಂದುತ್ವದ ರಕ್ತ ಹರಿಯುತ್ತಿದೆ. ಕಾಂಗ್ರೆಸ್ (Congress) ಸೇರಿದ್ದಕ್ಕೆ ಅನಿವಾರ್ಯ ಹೇಳಿಕೆ ನೀಡುತ್ತಾರೆ. ಇನ್ನು ಸ್ವಲ್ಪ ದಿನಕ್ಕೆ ನಮ್ಮ ಹತ್ರಾನೇ ಬರುತ್ತಾರೆ. ಅಧಿಕೃತವಾಗಿ ಬಿಜೆಪಿ ಸೇರುತ್ತಾರೆ. ಆಗ ದೇಶದಲ್ಲಿ ಕಾಂಗ್ರೆಸ್ ರಿಪೇರಿ ಮಾಡೋಕೆ ಆಗಲ್ಲ ಎಂಬ ಮಾತು ಹೇಳ್ತಾರೆ ಎಂದು ಹೇಳಿದ್ದಾರೆ.

ಬಳಿಕ ಮಾತನಾಡಿದ ಅವರು ಶೆಟ್ಟರ್ ಕಾಂಗ್ರೆಸ್‌ಗೆ ಹೋದಾಗ ನನಗೆ ತುಂಬ ನೋವಾಗಿತ್ತು. ಬಹಿರಂಗವಾಗಿ ಪತ್ರವನ್ನೂ ಬರೆದಿದ್ದೆ. ಕಾಂಗ್ರೆಸ್‌ ಸೇರಿದ ಕಾರಣಕ್ಕೆ ಬಿಜೆಪಿ ವಿರುದ್ಧ ಪದೇ ಪದೇ ಹೇಳಿಕೆ ನೀಡುತ್ತಿದ್ದಾರೆ. ಆದರೆ ಶೆಟ್ಟರ್ ಬಿಜೆಪಿಗೆ ಬರುವುದು ನನಗಂತೂ ವಿಶ್ವಾಸ ಇದೆ. ನಾನು, ಅವರು ಆತ್ಮಿಯರು. ಒಟ್ಟಿಗೆ ಕೆಲಸ ಮಾಡಿದವರು. ಬಂದರೆ ತುಂಬಾನೆ ಸಂತೋಷ ಎಂದರು.

ಇದನ್ನೂ ಓದಿ: Exit Poll Results 2023: ಪಂಚ ರಾಜ್ಯ ಚುನಾವಣೆ- ಯಾವ ರಾಜ್ಯದಲ್ಲಿ ಯಾರಿಗೆ ಮೇಲುಗೈ?!