BBK-10: ಬಿಗ್ ಬಾಸ್ ಮನೆಯಲ್ಲಿ ನಡೆಯಿತು ನಡೆಯಬಾರದ್ದು – ಮನೆಯಿಂದ ಹೊರನಡೆದ ತನಿಷಾ !!

Entertainment news Bigg Boss season 10 Tanisha came out from BBK house

Share the Article

BBK-10: ಈ ಬಾರಿಯ ಬಿಗ್ ಬಾಸ್ ಕನ್ನಡ ಸೀಸನ್-10(BBK-10) ಹಲವು ವಿಚಿತ್ರ ಘಟನೆಗಳಿಗೆ ಸಿಕ್ಷೆಯಾಗುತ್ತಿದೆ. ಅಂತೆಯೇ ಇದೀಗ ದೊಡ್ಮನೆಯಲ್ಲಿ ಭಾರೀ ಅವಘಡವೊಂದು ಸಂಭವಿಸಿದ್ದು ಪ್ರಬಲ ಕಂಟೆಸ್ಟೆಂಟ್ ಆದ ತನಿಷಾ ಮನೆಯಿಂದ ಹೊರ ಬಂದಿದ್ದಾರೆ ಎಂಬ ಸುದ್ದಿ ಲಭ್ಯವಾಗಿದೆ.

ಹೌದು, ಬಿಗ್ ಬಾಸ್ ತನ್ನ ಕಂಟೆಸ್ಟೆಂಟ್ ಗಳಿಗೆ ಟಾಸ್ಕ್ ನೀಡಿದ್ದು ಈ ವೇಳೆ ಆಡುತ್ತಿದ್ದಾಗ ಮನೆಯೊಳಗಡೆ ಅವಘಡವೊಂದು ಸಂಭವಿಸಿದೆ. ಈ ಕಾರಣದಿಂದಾಗಿ ಸ್ಟ್ರಾಂಗ್ ಕಂಟೆಸ್ಟೆಂಟ್ ಆಗಿರುವ ತನಿಷಾ ಕುಪ್ಪಂಡ (Tanisha Kuppanda) ಅವರಿಗೆ ಬಲವಾದ ಪೆಟ್ಪು ಬಿದ್ದಿದ್ದು ಚಿಕಿತ್ಸೆಗಾಗಿ (Treatment) ಅವರನ್ನು ಮನೆಯಿಂದ ಕಳುಹಿಸಲಾಗಿದೆ ಎನ್ನುವ ಮಾಹಿತಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಅಂದಹಾಗೆ ಮುಂದಿನ ವಾರದ ಕ್ಯಾಪ್ಟನ್ ಆಯ್ಕೆಯ ಟಾಸ್ಕ್ ಗೆ ಎರಡು ತಂಡವಾಗಿ ವಿಂಗಡಿಸಿ ಟಾಸ್ಕ್ ನೀಡಲಾಗಿತ್ತು. ಎರಡು ತಂಡ ಟಾಸ್ಕ್ವೊಂದರಲ್ಲಿ ಆಟ ಆಡುವಾಗ ತನಿಷಾ ಕಾಲಿಗೆ ಪೆಟ್ಟಾಗಿದ್ದು, ತುಂಬಾ ನೋವಿನಿಂದ ಒದ್ದಾಡಿದ್ದಾರೆ. ಇದರ ಫೋಟೋ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದೆ. ಇನ್ನು ತನಿಷಾ ಅವರನ್ನು ಕೂಡಲೇ ಅವರನ್ನು ಚಿಕಿತ್ಸೆಗೆ ಕಳುಹಿಸಲಾಗಿದೆ. ಸಣ್ಣ ಪುಟ್ಟ ಪೆಟ್ಟಾಗಿದ್ದರೆ ಬಿಗ್ ಬಾಸ್ ಮನೆಗೆ ಬೇಗ ಮರಳಬಹುದು. ದೊಡ್ಡ ಪೆಟ್ಟಾದರೆ ವಾಪಸ್ಸು ಬರುವುದು ಡೌಟ್ ಎನ್ನಲಾಗಿದೆ. ಒಟ್ಟಾರೆ ಇದರ ಬಗ್ಗೆ ಇಂದಿನ ಎಪಿಸೋಡ್ ನಲ್ಲಿ ನೋಡಬುಹುದು.

ಇದನ್ನೂ ಓದಿ: New Ration card: ಹೊಸ ರೇಷನ್ ಕಾರ್ಡ್ ವಿತರಣೆ ಕುರಿತು ಹೊರಬಿತ್ತು ಬಿಗ್ ಅಪ್ಡೇಟ್- ಇಂತವರಿಗೆ ಮಾತ್ರ ಸಿಗುತ್ತೆ ಹೊಸ ಕಾರ್ಡ್ !!

Leave A Reply