Home Breaking Entertainment News Kannada Marichi: ಹೆಂಡತಿ ಕೊಲೆಯ ಹಿಂದಿನ ರಹಸ್ಯ ಭೇದಿಸಲು ಮುಂದಾದ ವಿಜಯ್ ರಾಘವೇಂದ್ರ!! ಅರೆ ಏನಪ್ಪಾ ಇದು...

Marichi: ಹೆಂಡತಿ ಕೊಲೆಯ ಹಿಂದಿನ ರಹಸ್ಯ ಭೇದಿಸಲು ಮುಂದಾದ ವಿಜಯ್ ರಾಘವೇಂದ್ರ!! ಅರೆ ಏನಪ್ಪಾ ಇದು ಹೊಸ ಸುದ್ದಿ?!

Marichi

Hindu neighbor gifts plot of land

Hindu neighbour gifts land to Muslim journalist

Marichi: ಚಂದನವನದಲ್ಲಿ ಕೆಲವು ನಾಯಕ ನಟರೆಂದರೆ ಪ್ರತಿಯೊಬ್ಬ ಹೀರೋಗಳ ಅಭಿಮಾನಿಗಳಿಗೂ ಇಷ್ಟ ಆಗುವಂತವರಿದ್ದಾರೆ. ಅಂಥವರ ಸಾಲಿನಲ್ಲಿ ಮೊದಲಿಗೆ ನಿಲ್ಲುವವರೆಂದರೆ ಚಿನ್ನಾರಿ ಮುತ್ತ ಖ್ಯಾತಿಯ ವಿಜಯ್ ರಾಘವೇಂದ್ರ(Vijay raghavendra)ರವರು. ಕೆಲವು ದುಃಖದ ನಡುವೆಯೂ ಅವುಗಳನ್ನು ಮರೆಯಲು ಹಾಗೂ ತಮ್ಮ ಪ್ರೇಕ್ಷಕರಿಗೆ ನಿರಾಸೆಯಾಗಬಾರದೆಂದು ವಿಜಯ್ ಅವರು ಕೆಲವು ಹೊಸ ಸಿನಿಮಾಗಳನ್ನು ಮಾಡುತ್ತಿದ್ದಾರೆ. ಅಂತೆಯೇ ಇದೀಗ ಅವರ ‘ಮರೀಚಿ'(Marichi) ಚಿತ್ರದ ಮೊದಲ ನೋಟ ಅನಾವರಣ ಆಗಿದೆ.

ಹೌದು, ಟೀಸರ್ ಮೂಲಕ ಭಾರೀ ಸದ್ದು ಮಾಡಿದ್ದ ವಿಜಯ್ ರಾಘವೇಂದ್ರ ಹಾಗೂ ಸೋನೂ ಗೌಡ ನಟನೆಯ ಮರೀಚಿ ಚಿತ್ರ ಡಿಸೆಂಬರ್ ಆರಂಭದಲ್ಲಿ ತೆರೆಕಾಣಲಿದೆ. ಆದರೀಗ ಈ ನಡುವೆ ಚಿತ್ರದ ಮೊದಲ ನೋಟ ಬಿಡುಗಡೆಯಾಗಿದ್ದು ಜನರ ಗಮನ ಸೆಳೆದಿದೆ. ಅಂದಹಾಗೆ ಹ್ಯಾಪಿ ನ್ಯೂ ಇಯರ್ ಆದ್ಮೇಲೆ ವಿಜಯ್ ರಾಘವೇಂದ್ರ ಮತ್ತು ಸೋನು ಗೌಡ ಇಲ್ಲಿ ಜೋಡಿ ಆಗಿದ್ದಾರೆ. ಆದರೆ ಇಲ್ಲಿ ಕ್ರೈಮ್ ಮತ್ತು ಸಸ್ಪೆನ್ಸ್ ಥ್ರಿಲ್ಲರ್‌ (Vijay Raghavendra New Film) ಪ್ರಮುಖವಾಗಿಯೇ ಇದೆ ಎಂದು ಹೇಳಬಹುದು.

ಏನು ಮರೀಚಿ ಕಥೆ?
ಇದ ಒಂದು ಲವ್ ಸ್ಟೋರಿ ಹಾಗೂ ಕ್ರೈಮ್ ಮತ್ತು ಸಸ್ಪೆನ್ಸ್ ಥ್ರಿಲ್ಲರ್‌ ಇರೋ ಚಿತ್ರ. ಇಲ್ಲಿ ಸೋನು ಗೌಡ ಮತ್ತು ವಿಜಯ್ ರಾಘವೇಂದರ ಗಂಡ-ಹೆಂಡತಿ ಆಗಿಯೇ ಅಭಿನಯಿಸಿದ್ದಾರೆ. ವಿಜಯ್ ರಾಘವೇಂದ್ರ ಅವರು ಪೊಲೀಸ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಇದರಲ್ಲಿ ವಿಜಯ್ ಅವರು ತಮ್ಮ ಹೆಂಡತಿಯ ಕೊಲೆಯ ರಹಸ್ಯ ಭೇಧಿಸುವ ಥ್ರಿಲ್ಲರ್ ಇದೆ. ಒಟ್ಟಾರೆ ಕಥೆಯು ಸಸ್ಪೆನ್ಸ್ ಆಗಿದ್ದು ಅಭಿಮಾನಿಗಳಲ್ಲಿ ಕುತೂಹಲ ಕೆರಳಿಸಿದೆ.

ಅಂದಹಾಗೆ ಈ ಸಿನಿಮಾಕ್ಕೆ ನಿರ್ದೇಶಕ ಕಂ ನಿರ್ಮಾಪಕ ಸಿದ್ಧ್ರುವ್. ಕಥೆ, ಚಿತ್ರಕಥೆ ಕೂಡ ಇವರೇ ಬರೆದಿದ್ದಾರೆ. ವಿಜಯ ರಾಘವೇಂದ್ರ, ಸೋನು ಗೌಡ, ಅಭಿ ದಾಸ್, ನಟಿ ಸ್ಪಂದನಾ ಸೋಮಣ್ಣ, ಆರ್ಯನ್, ಶ್ರುತಿ ಪಾಟೀಲ್, ಗೋಪಾಲಕೃಷ್ಣ ದೇಶಪಾಂಡೆ, ಅರುಣಾ ಬಾಲರಾಜ್ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ.

ಇನ್ನು ಫಸ್ಟ್ ಲುಕ್ ಬಿಡುಗಡೆಯ ವೇಳೆ ಮಾತನಾಡಿದ ವಿಜಯ್ ರಾಘವೇಂದ್ರ ಅವರು “ಮರೀಚಿ ಸಿನಿಮಾದ ಟೀಸರ್, ಹಾಡುಗಳು ವೀಕ್ಷಕರನ್ನು ತಲುಪಿವೆ. ಈ ಚಿತ್ರದ ಟ್ರೇಲರ್ ನೋಡಿದ್ದು ಬಹಳ ಖುಷಿಯಾಯ್ತು. ಈ ಸಿನಿಮಾಕ್ಕಾಗಿ ಟೆಕ್ನಿಕಲ್ ಆಗಿ ಸಿದ್ಧತೆ ಮಾಡಿಕೊಂಡು ಶೂಟಿಂಗ್ ಮಾಡಲಾಗಿದೆ. ಸಿನಿಮಾವನ್ನು ತುಂಬ ಪ್ರೀತಿಸುವ ನಿರ್ಮಾಪಕರು, ನಿರ್ದೇಶಕರು ಈ ಸಿನಿಮಾದಲ್ಲಿ ಅದ್ಭುತವಾಗಿ ನಟಿಸಿದ್ದಾರೆ. ನಿಮ್ಮೆಲ್ಲರ ಪ್ರೋತ್ಸಾಹ ನಮ್ಮ ಸಿನಿಮಾದ ಮೇಲೆ ಇರಲಿ. ಡಿಸೆಂಬರ್ 8ಕ್ಕೆ ಥಿಯೇಟರ್‌ಗೆ ಬನ್ನಿ, ಒಟ್ಟಿಗೆ ಸಿನಿಮಾ ನೋಡಬಹುದು” ಎಂದರು.

ಇದನ್ನೂ ಓದಿ: Gruhalakshmi scheme: ‘ಗೃಹಲಕ್ಷ್ಮೀ’ಯರಿಗೆ ಮತ್ತೆ ಬಿಗ್ ಶಾಕ್ – 50,000 ಯಜಮಾನಿಯರ ಅರ್ಜಿ ರಿಜೆಕ್ಟ್ !!