Home Education Crime News: ಪ್ರವಾದಿಗೆ ಅವಮಾನ ಮಾಡಿದ ಆರೋಪ; ಕಂಡಕ್ಟರ್‌ನನ್ನು ಮಾಂಸ ಕತ್ತರಿಸುವ ಚಾಕುವಿನಿಂದ ಕೊಚ್ಚಿ ಭೀಕರ...

Crime News: ಪ್ರವಾದಿಗೆ ಅವಮಾನ ಮಾಡಿದ ಆರೋಪ; ಕಂಡಕ್ಟರ್‌ನನ್ನು ಮಾಂಸ ಕತ್ತರಿಸುವ ಚಾಕುವಿನಿಂದ ಕೊಚ್ಚಿ ಭೀಕರ ಕೊಲೆ!!!

Uttar Pradesh Crime News
Image credit source: Assianet news

Hindu neighbor gifts plot of land

Hindu neighbour gifts land to Muslim journalist

Uttar Pradesh Crime News: ಪ್ರವಾದಿ ಮೊಹಮ್ಮದರನ್ನು ಹಾಗೂ ಮುಸ್ಲಿಮರನ್ನು ನಿಂದಿಸಿದ್ದಾರೆ ಎಂದು ಆರೋಪಿಸಿ ಎಂಜಿನಿಯರಿಂಗ್‌ ವಿದ್ಯಾರ್ಥಿಯೊಬ್ಬ ಬಸ್‌ ಕಂಡಕ್ಟರ್‌ನನ್ನು ಮಾಂಸ ಕತ್ತಿರಿಸುವ ಚಾಕುವಿನಿಂದ ಕೊಚ್ಚಿ ಹತ್ಯೆ ಮಾಡಿರುವ ಭೀಕರ ಘಟನೆಯೊಂದು ನಡೆದಿದೆ. ಈ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ(Uttar Pradesh Crime News).

ಆದರೆ ಇದೊಂದು ಟಿಕೆಟ್‌ ಹಣದ ವಿಷಯಕ್ಕಾಗಿ ನಡೆದ ಎಂದು ಉತ್ತರಪ್ರದೇಶದ ಪೊಲೀಸರು ಹೇಳಿದ್ದಾರೆ. ಕಂಡಕ್ಟರ್‌ ಪ್ರವಾದಿಯನ್ನು ಅವಮಾನ ಮಾಡಿದ್ದು ಕಾರಣ ಅಲ್ಲ ಎಂದು ವರದಿಯಾಗಿದೆ. ಪೊಲೀಸರು ವಿದ್ಯಾರ್ಥಿ ಆರೋಪಿ ಲಾರೇಬ್‌ ಹಷ್ಮಿಯನ್ನು (20) ನ ಕಾಲಿಗೆ ಗುಂಡು ಹೊಡೆದು ಬಂಧಿಸಿದ್ದಾರೆ.

ಅಷ್ಟಕ್ಕೂ ನಡೆದದ್ದೇನು? ಆರೋಪಿ ಪ್ರಯಾಗ್‌ರಾಜ್‌ನಲ್ಲಿ ಲಾರೇಬ್‌ ಬಸ್‌ನಲ್ಲಿ ಕಂಡಕ್ಟರ್‌ ವಿಶ್ವಕರ್ಮ ಜೊತೆ ಜಗಳ ನಡೆದಿದೆ. ಈ ಸಂದರ್ಭ ಬ್ಯಾಗ್‌ನಲ್ಲಿ ಮಾಂಸ ಕತ್ತರಿಸುವ ಚಾಕು ಹೊರತೆಗೆದ ಆರೋಪಿ ಕಂಡಕ್ಟರ್‌ನನ್ನು ಇರಿದು ಕೊಲೆ ಮಾಡಿದ್ದಾನೆ. ಅಷ್ಟಕ್ಕೂ ನಿಲ್ಲದ ಈತ ಸಮೀಪದ ಕಾಲೇಜು ಕ್ಯಾಂಪಸ್‌ ಒಂದಕ್ಕೆ ಓಡಿ ಹೋಗಿ ಅಲ್ಲಿ ಅಡಗಿ ಕುಳಿತು ಸೋಷಿಯಲ್‌ ಮೀಡಿಯಾದಲ್ಲಿ ವೀಡಿಯೋ ಹಾಕಿದ್ದಾನೆ.

ಆತ ವೀಡಿಯೋದಲ್ಲಿ ಹಿಂದಿ ಭಾಷೆಯಲ್ಲಿ ಅವರು ಮುಸ್ಲಿಮರನ್ನು ನಿಂದಿಸಿದ್ದ ಹಾಗಾಗಿ ನಾನು ದಾಳಿ ಮಾಡಿದೆ. ಅವರು ಖಂಡಿತವಾಗಿಯೂ ಸಾಯುತ್ತಾನೆ ಎಂದು ಹಾಕಿದ್ದಾನೆ. ನಾನು ಪ್ರವಾದಿ ಮೊಹಮ್ಮದರಿಗಾಗಿ ಜೀವ ಬಿಡಲು ಸಿದ್ಧ, ಮುಸ್ಲಿಮರೇ ನೀವು ಕೂಡಾ ಪ್ರವಾದಿಗಾಗಿ ಬಲಿದಾನಕ್ಕಾಗಿ ಸಿದ್ಧರಾಗಿ ಎಂದು ಹೇಳಿದ್ದಾನೆ.

ಪೊಲೀಸರು ಈತನನ್ನು ಬಂಧನ ಮಾಡಿದ್ದು, ಕಾಲೇಜು ಈತನನ್ನು ಅಮಾನತು ಮಾಡಿದೆ.

ಇದನ್ನೂ ಓದಿ: Deadly Accident: ಕಂಬಳ ನೋಡಿ ವಾಪಾಸಾಗುತ್ತಿದ್ದ ಸಂದರ್ಭ ಬೋರ್‌ವೆಲ್‌ ಲಾರಿ- ಬೈಕ್‌ ನಡುವೆ ಭೀಕರ ಅಪಘಾತ!!! ಮಂಗಳೂರಿನ ಇಬ್ಬರ ದಾರುಣ ಸಾವು!!