2024 Govt Holidays: 2024 ರಲ್ಲಿ ಭರ್ಜರಿ ರಜೆ – ಸರ್ಕಾರಿ ನೌಕರರಿಗೆ ಹೊಡೀತು ಜಾಕ್ ಪಾಟ್

2024 Govt Holidays: ಕರ್ನಾಟಕ ಸರ್ಕಾರವು ಮುಂಬರುವ 2024ನೇ ಸಾಲಿಗೆ ಮಂಜೂರು ಮಾಡಿರುವ ಸಾರ್ವತ್ರಿಕ ರಜಾ ದಿನಗಳ (2024 Govt Holidays) ಪಟ್ಟಿಯನ್ನು ಪ್ರಕಟಿಸಲಾಗಿದೆ. ಈ ರಜಾ ಪಟ್ಟಿಯಲ್ಲಿ ಭಾನುವಾರಗಳಂದು ಬರುವ ಡಾ. ಬಿ.ಆರ್‌ ಅಂಬೇಡ್ಕರ್‌ ಜಯಂತಿ ಹಾಗೂ ಮಹಾವೀರ ಜಯಂತಿ, ಎರಡನೇ ಶನಿವಾರದಂದು ಬರುವ ವಿಜಯದಶಮಿ ರಜೆಯನ್ನು ಈ ಪಟ್ಟಿಯಲ್ಲಿ ನಮೂದಿಸಿಲ್ಲ.

ಸಾರ್ವತ್ರಿಕ ರಜಾ ದಿನಗಳಲ್ಲಿ ರಾಜ್ಯಾದ್ಯಂತ ಸರ್ಕಾರಿ ಕಚೇರಿಗಳು ಮುಚ್ಚಲ್ಪಡುತ್ತವೆ. ಇನ್ನು ಸೆ.9ರಂದು ಕೈಲ್‌ ಮೂಹರ್ತ, ಅ.17ರಂದು ತುಲಾ ಸಂಕ್ರಮಣ ಹಾಗೂ ಡಿ.14ರ ಹುತ್ತರಿ ಹಬ್ಬವನ್ನು ಆಚರಿಸಲು ಕೊಡುಗು ಜಿಲ್ಲೆಗ ಮಾತ್ರ ಅನ್ವಯವಾಗುವಂತೆ ಸ್ಥಳೀಯ ಸಾರ್ವತ್ರಿಕ ರಜೆಯನ್ನು ಸರ್ಕಾರ ಘೋಷಿಸಿದೆ.

ಸಾರ್ವತ್ರಿಕ ರಜಾ ದಿನಗಳ ಪಟ್ಟಿ ಇಂತಿವೆ:
1) 15-1-2024- ಮಕರ ಸಂಕ್ರಾಂತಿ, ಉತ್ತರಾಯಣ ಪುಣ್ಯಕಾಲ
2) 26-1-2024- ಗಣರಾಜ್ಯೋತ್ಸವ
3) 08-3-2024- ಮಹಾಶಿವರಾತ್ರಿ
4) 29-3-2024- ಗುಡ್‌ಫ್ರೈಡೆ
5) 09-4-2024- ಯುಗಾದಿ ಹಬ್ಬ
6) 11-4-2024- ಖುತುಬ್‌-ಎ-ರಂಜಾನ್‌
7) 01-5-2024- ಕಾರ್ಮಿಕ ದಿನಚಾರಣೆ.
8) 10-5-2024-ಬಸವ ಜಯಂತಿ ಹಾಗೂ ಅಕ್ಷಯ ತೃತೀಯ
9) 17-6-2024- ಬಕ್ರೀದ್‌
10) 17-7-2024-ಮೊಹರಂ ಕಡೇ ದಿನ
11) 15-8-2024-ಸ್ವಾತಂತ್ರ್ಯ ದಿನಾಚರಣೆ
12) 07-9-2024-ಗಣೇಶ ಚತುರ್ಥಿ
13) 16-9-2024- ಈದ್‌-ಮಿಲಾದ್‌
14) 02-10-2024- ಗಾಂಧಿ ಜಯಂತಿ/ಮಹಾಲಯ ಅಮವಾಸ್ಯೆ
15) 11-10-2024-ಮಹಾನವಮಿ, ಆಯುಧ ಪೂಜೆ
16) 17-10-2024-ಮಹರ್ಷಿ ವಾಲ್ಮೀಕಿ ಜಯಂತಿ
17) 31-10-2024-ನರಕ ಚತುರ್ದಶಿ
18) 01-11-2024- ಕನ್ನಡ ರಾಜ್ಯೋತ್ಸವ
19) 02-11-2024-ಬಲಿಪಾಡ್ಯಮಿ, ದೀಪಾವಳಿ
20) 18-11-2024-ಕನಕದಾಸ ಜಯಂತಿ
21) 25-12-2024- ಕ್ರಿಸ್‌ಮಸ್‌ ಹಬ್ಬ.

ಸದ್ಯ ಈ ಮೇಲಿನ ದಿನದಂದು ಕರ್ನಾಟಕ ಸರ್ಕಾರವು ಮುಂಬರುವ 2024ನೇ ಸಾಲಿಗೆ ಮಂಜೂರು ಮಾಡಿರುವ ಸಾರ್ವತ್ರಿಕ ರಜಾ ರಜೆ (Govt Holidays) ಪಟ್ಟಿಯನ್ನು ಪ್ರಕಟಿಸಿದೆ.

 

ಇದನ್ನು ಓದಿ: 2024 Govt Holidays: 2024 ರಲ್ಲಿ ಭರ್ಜರಿ ರಜೆ – ಸರ್ಕಾರಿ ನೌಕರರಿಗೆ ಹೊಡೀತು ಜಾಕ್ ಪಾಟ್

Leave A Reply

Your email address will not be published.