Gruhalakshmi Yojana: ಇನ್ನೂ ಗೃಹಲಕ್ಷ್ಮೀ ಹಣ ಬಾರದವರಿಗೆ ಬಂಪರ್ ಗುಡ್ ನ್ಯೂಸ್- ನಿಮಗಾಗಿ ಬರ್ತಿದೆ ಹೊಸ ಯೋಜನೆ, ಸಿಗುವ ಹಣವೆಷ್ಟು ಗೊತ್ತಾ?!

Share the Article

Gruhalakshmi Yojana: ಮಾನ್ಯ ಮುಖ್ಯಮಂತ್ರಿಗಳು, ಗೃಹಲಕ್ಷ್ಮೀ ಯೋಜನೆಗೆ (Gruhalakshmi Yojana) ಅರ್ಜಿ ಸಲ್ಲಿಸಿ ಈವರೆಗೆ ಹಣ ಬಾರದೆ ಇರುವವರಿಗೆ ಸಿಹಿಸುದ್ದಿ ನೀಡಿದ್ದಾರೆ. ಹೌದು, ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಗೃಹಲಕ್ಷ್ಮೀ ಅದಾಲತ್ ಆಯೋಜನೆ ಮಾಡಲಾಗುವುದು ಎಂದು ತಿಳಿಸಿದ್ದು, ಈ ಮೂಲಕ ಗೃಹಲಕ್ಷ್ಮೀ ಹಣ ದೊರಕಿಸುವುದಾಗಿ ಮುಖ್ಯಮಂತ್ರಿ ಭರವಸೆ ನೀಡಿದ್ದಾರೆ.

ಈಗಾಗಲೇ ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದು ಆರು ತಿಂಗಳು ಪೂರ್ಣಗೊಂಡಿರುವ ಹಿನ್ನೆಲೆ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಪ್ರಗತಿ ಪರಿಶೀಲನೆ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗೃಹಲಕ್ಷ್ಮಿ ಯೋಜನೆಯ ಎಲ್ಲ ಅರ್ಹ ಫಲಾನುಭವಿಗಳಿಗೆ ಡಿಸೆಂಬ‌ರ್ ಒಳಗೆ ಸೌಲಭ್ಯ ಕಲ್ಪಿಸುವಂತೆ ಸೂಚನೆ ನೀಡಿದ್ದಾರೆ.

ಗೃಹಲಕ್ಷ್ಮೀ ಫಲಾನುಭವಿಗಳು ಬಿಟ್ಟು ಹೋಗಿದ್ದಲ್ಲಿ ಅಥವಾ ಬ್ಯಾಂಕ್ ಖಾತೆ, ಆಧಾ‌ರ್ ಲಿಂಕ್ ಮತ್ತಿತರ ಸಮಸ್ಯೆಗಳ ನಿವಾರಣೆಗಾಗಿ ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಗೃಹಲಕ್ಷ್ಮೀ ಅದಾಲತ್ ಆಯೋಜಿಸಿ ಡಿಸೆಂಬರ್ ಒಳಗೆ ಎಲ್ಲ ಅರ್ಹ ಫಲಾನುಭವಿಗಳಿಗೆ ಸೌಲಭ್ಯ ಕಲ್ಪಿಸಲು ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.

 

ಇದನ್ನು ಓದಿ: ಗಂಡನ ತೂಕದಿಂದ ಹೆಂಡತಿ ಕಾಲು ಮುರಿತ! ಪತಿಯ ವಿರುದ್ಧ ದೂರು ದಾಖಲಿಸಿದ ಪತ್ನಿ!!!

Leave A Reply