Benefits Of Hugging: ಅಬ್ಬಬ್ಬಾ.. ಸಂಗಾತಿಯನ್ನು ತಬ್ಬಿಕೊಂಡ್ರೆ ಈ ರೀತಿಯೆಲ್ಲಾ ಆಗುತ್ತಾ ?!

Lifestyle health news benefits of hugging can improve mental and physical health

Benefits Of Hugging: ಆರೋಗ್ಯವೇ ಭಾಗ್ಯ(Good Health)ಎಂಬಂತೆ ಪ್ರತಿಯೊಬ್ಬರು ಆರೋಗ್ಯವನ್ನು(Health)ಕಾಪಾಡಲು ಮಾಡುವ ಹರಸಾಹಸ ಅಷ್ಟಿಷ್ಟಲ್ಲ. ಇಂದಿನ ಒತ್ತಡ ಯುತ ಜೀವನ ಶೈಲಿ, ಜಂಕ್ ಫುಡ್ ಸೇವನೆ, ನಿದ್ರಾಹೀನತೆ ಅನೇಕ ಆರೋಗ್ಯ ಸಮಸ್ಯೆಗಳಿಗೆ ಎಡೆ ಮಾಡಿಕೊಡುತ್ತಿದೆ. ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ಮಾನಸಿಕ (Mental Health)ಮತ್ತು ದೈಹಿಕ ಆರೋಗ್ಯ( Physical Health)ಗಂಭೀರ ಪರಿಣಾಮ ಬೀರುತ್ತದೆ. ಈ ನಡುವೆ ಸಂಶೋಧನೆಯೊಂದು ಅಚ್ಚರಿಯ ಸಂಗತಿಯನ್ನು ಬಿಚ್ಚಿಟ್ಟಿದೆ.

ಸಾಮಾನ್ಯವಾಗಿ ನಾವು ಯಾರನ್ನಾದರೂ ತಬ್ಬಿಕೊಂಡ ಕೂಡಲೇ ಆಕ್ಸಿಟೋಸಿನ್ ಬಿಡುಗಡೆಯಾಗುತ್ತದೆ. ಇದನ್ನು “ಪ್ರೀತಿಯ ಹಾರ್ಮೋನ್” ಅಥವಾ “ಬಂಧನ ಹಾರ್ಮೋನ್” ಎನ್ನಲಾಗುತ್ತದೆ. ಆಕ್ಸಿಟೋಸಿನ್ ಬಿಡುಗಡೆಯಾದ ಸಂದರ್ಭದಲ್ಲಿ ನಮ್ಮನ್ನು ತಬ್ಬಿಕೊಳ್ಳುವ(Benefits Of Hugging) ವ್ಯಕ್ತಿಯ ಬಗ್ಗೆ ನಾವು ನಂಬಿಕೆ, ಸಹಾನುಭೂತಿ ಮತ್ತು ಬಾಂಧವ್ಯ ಬೆಸೆಯುವಲ್ಲಿ ನೆರವಾಗುತ್ತದೆ. ಅಪ್ಪಿಕೊಳ್ಳುವಿಕೆಯು ಮೆದುಳಿನ ಪ್ರತಿಫಲ ಕೇಂದ್ರಗಳನ್ನು ವಿಶೇಷವಾಗಿ ವೆಂಟ್ರಲ್ ಸ್ಟ್ರೈಟಮ್ ಅನ್ನು ಜಾಗೃತಗೊಳಿಸುತ್ತದೆ.

ಒಬ್ಬರನ್ನೊಬ್ಬರು ತಬ್ಬಿಕೊಳ್ಳುವುದರಿಂದ ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯವು ಉತ್ತಮವಾಗಿರುವ ಕುರಿತು ಸಂಶೋಧನೆಗಳು ಮಾಹಿತಿ ನೀಡಿವೆ. ಅಷ್ಟೇ ಅಲ್ಲದೆ, ಒಬ್ಬರನ್ನೊಬ್ಬರು ತಬ್ಬಿಕೊಳ್ಳುವುದರಿಂದ ಒತ್ತಡವನ್ನು ಕಡಿಮೆ ಮಾಡಲು, ಭಾವನಾತ್ಮಕ ಬಂಧವನ್ನು ಕಡಿಮೆ ಮಾಡಿ ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

ಅಪ್ಪುಗೆಯಿಂದ ದೈಹಿಕ ಆರೋಗ್ಯದ ಮೇಲೆ ಹೇಗೆ ಪ್ರಭಾವ ಬೀರುತ್ತದೆ ಗೊತ್ತಾ?
* ಒತ್ತಡ ನಿವಾರಣೆ
ಅಪ್ಪುಗೆಯಿಂದ ಆಕ್ಸಿಟೋಸಿನ್ ಬಿಡುಗಡೆಯಾಗಿ ಹಾರ್ಮೋನ್ ಕಾರ್ಟಿಸೋಲ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಇದರಿಂದಾಗಿ ಒತ್ತಡವನ್ನು ಕಡಿಮೆಯಾಗುತ್ತದೆ.

* ರೋಗನಿರೋಧಕ ಶಕ್ತಿ ವೃದ್ಧಿ:
ಅಪ್ಪುಗೆ ಇಲ್ಲವೇ ತಬ್ಬಿಕೊಳ್ಳುವಿಕೆಯಿಂದ ಸಕಾರಾತ್ಮಕ ದೈಹಿಕ ಸಂವಹನಗಳು ರೋಗನಿರೋಧಕ ಶಕ್ತಿಯನ್ನು ಬಲಪಡಿಸಬಹುದು ಎಂದು ಸಂಶೋಧನೆ ಬಹಿರಂಗಪಡಿಸಿದೆ.

* ಭಾವನಾತ್ಮಕ ಆರೋಗ್ಯ
ಅಪ್ಪುಗೆಗಳು ನಮ್ಮ ಮನಸ್ಥಿತಿಯನ್ನು ಸುಧಾರಣೆ ಮಾಡಲಿದೆ. ನಾವು ಯಾರನ್ನಾದರೂ ತಬ್ಬಿಕೊಂಡಾಗ, ಆ ವ್ಯಕ್ತಿಯೊಂದಿಗೆ ನಾವು ಭಾವನಾತ್ಮಕ ಸಂಪರ್ಕವನ್ನು ಹೊಂದಲಿದ್ದು , ಇದರಿಂದ ಮಾನಸಿಕ ಒತ್ತಡವನ್ನು ಕಡಿಮೆಯಾಗುತ್ತದೆ. ಅಷ್ಟೇ ಅಲ್ಲದೆ, ನಿಮ್ಮ ಚಿಂತೆಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಕಡಿಮೆ ಮಾಡಲು ನೆರವಾಗುತ್ತದೆ.

* ಹೃದಯ ಆರೋಗ್ಯ:
ಅಪ್ಪುಗೆಯಿಂದ ರಕ್ತದೊತ್ತಡ ಮತ್ತು ಹೃದಯ ಬಡಿತವನ್ನು ಕಡಿಮೆಯಾಗಲಿದ್ದು, ಇದರಿಂದ ಉತ್ತಮ ಹೃದಯದ ಆರೋಗ್ಯವನ್ನು ಉತ್ತೇಜನ ನೀಡುತ್ತದೆ.

* ನೋವು ಪರಿಹಾರ:
ಮಸಾಜ್ ಇಲ್ಲವೇ ಸರಳವಾದ ಅಪ್ಪುಗೆಯಂತಹ ಯಾರೊಂದಿಗಾದರೂ ನಾವು ದೈಹಿಕವಾಗಿ ಸಂಪರ್ಕಿಸಿದ ಸಂದರ್ಭ ಅದು ಎಂಡಾರ್ಫಿನ್‌ಗಳ ಬಿಡುಗಡೆಯನ್ನು ಉತ್ತೇಜಿಸಲಿದೆ. ಇದು. ನೈಸರ್ಗಿಕ ನೋವು ನಿವಾರಕಗಳಾಗಿ ಕೂಡ ಕಾರ್ಯನಿರ್ವಹಿಸುತ್ತದೆ.

ಇದನ್ನೂ ಓದಿ: KS Eshwarappa On Zameer Ahmed Khan:’ಸ್ಪೀಕರ್ ಖಾದರ್’ಗೆ ಗೌರವ ವಿಚಾರ- ಅಚ್ಚರಿ ಸ್ಟೇಟ್ಮೆಂಟ್ ಕೊಟ್ಟ ಈಶ್ವರಪ್ಪ !!

Leave A Reply

Your email address will not be published.