Lucky Draw: ದುಡಿಯಲು ದುಬೈಗೆ ಹಾರಿದ ವ್ಯಕ್ತಿ- ಹೋದ ದಿನವೇ 45 ಕೋಟಿ ಸಂಪಾದಿಸಿ ಬಿಟ್ಟ !! ಅರೆ ಇದ್ಯಾವ ಕೆಲಸ ಮರ್ರೆ ?!

National news Kerala man living in Fujairah win rs 45 crore in weekly lucky draw

Share the Article

Lucky Draw: ಕುರುಡು ಕಾಂಚಾಣದ ವ್ಯಾಮೋಹ ಯಾರಿಗಿಲ್ಲ ಹೇಳಿ!! ಹಣ (Money)ಮಾಡಬೇಕು, ಶ್ರೀಮಂತರಾಗಬೇಕು ಎಂದು ಎಲ್ಲರೂ ಬಯಸುವುದು ಸಹಜ.ಆದ್ರೆ, ಅದೃಷ್ಟ ಲಕ್ಷ್ಮೀ ಸುಲಭವಾಗಿ ಎಲ್ಲರ ಕೈ ಹಿಡಿಯುವುದಿಲ್ಲ. ನಸೀಬು ಚೆನ್ನಾಗಿದ್ದರೆ ಮಾತ್ರ ಅದೃಷ್ಟದ(Luck)ಬಾಗಿಲು ತೆರೆದುಕೊಳ್ಳುತ್ತದೆ. ಅದಕ್ಕೆ ನಿದರ್ಶನ ಅನ್ನೋ ಹಾಗೆ ಇಂಟ್ರೆಸ್ಟಿಂಗ್ ಕಹಾನಿಯೊಂದು (Intresting Story)ವರದಿಯಾಗಿದೆ.

ಅದೃಷ್ಟ ಯಾವಾಗ ಯಾರ ಕೈ ಹಿಡಿಯುತ್ತೆ ಎಂದು ಹೇಳೋದಕ್ಕೆ ಸಾಧ್ಯವಿಲ್ಲ. ಹೌದು!! ಕಳೆದ 11 ವರ್ಷಗಳಿಂದ ಉದ್ಯೋಗಿಯಾಗಿರುವ ಕೇರಳ ಮೂಲದ ವ್ಯಕ್ತಿಗೆ ಅದೃಷ್ಟ ಖುಲಾಯಿಸಿದ್ದು, ಬರೋಬ್ಬರಿ 45 ಕೋಟಿ ಲಾಟರಿ(Lottery Ticket ) ಬಹುಮಾನ (Lucky Draw)ಸಿಕ್ಕಿದೆ. 39 ವರ್ಷದ ಶ್ರೀಜು ಎಂಬುವವರು ದುಬೈನಿಂದ 120 ಕಿಲೋಮೀಟರ್ ದೂರದಲ್ಲಿರುವ ಪೂಜೈರಾದಲ್ಲಿ ಆಯಿಲ್ ಅಂಡ್ ಗ್ಯಾಸ್ ಕಂಪನಿಯಲ್ಲಿ ಕಂಟ್ರೋಲ್ ರೂಮ್ ಆಪರೇಟರ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ.

ಕಳೆದ ಆರು ವರ್ಷಗಳಿಂದ ಶ್ರೀಜು ತಿಂಗಳಿಗೆ ಎರಡು ಬಾರಿ ಮಹಜೂಜ್ ಸ್ಯಾರ್ಟ್ ಡೇ ಮಿಲಿಯನ್ಸ್ ನಲ್ಲಿ ಲಾಟರಿ ಖರೀದಿ ಮಾಡುತ್ತಿದ್ದರಂತೆ. ಇವರು ಊರಿನಲ್ಲಿ ಮನೆ ಕಟ್ಟಬೇಕು ಎಂಬ ಅಭಿಲಾಷೆಯನ್ನು ಹೊತ್ತಿದ್ದರಂತೆ. ಈ ನಡುವೆ, ಮಹಜೂಜ್ ಸ್ಯಾರ್ಟ್ ಡೇ ಮಿಲಿಯನ್ಸ್ 154ನೇ ಡ್ರಾದಲ್ಲಿ ಶ್ರೀಜು ಅವರಿಗೆ 45 ಕೋಟಿ ರೂಪಾಯಿ ಮೊತ್ತದ ಲಾಟರಿ ಬಹುಮಾನ ಸಿಕ್ಕಿದೆ.ಲಾಟರಿಯಲ್ಲಿ ಬಂದ ಈ ಬೃಹತ್ ಮೊತ್ತವನ್ನು ಹೇಗೆ ವ್ಯಯಿಸಬೇಕು ಎಂದು ಶ್ರೀಜು ಇನ್ನೂ ತೀರ್ಮಾನ ಕೈಗೊಂಡಿಲ್ಲವಂತೆ.

ಇದನ್ನೂ ಓದಿ: ಪುತ್ತೂರು ಉಪವಿಭಾಗದ ಡಿವೈಎಸ್ಪಿ ಡಾ.ಗಾನಾ ಪಿ.ಕುಮಾರ್ ಲೋಕಾಯುಕ್ತಕ್ಕೆ ವರ್ಗಾವಣೆ : ಪುತ್ತೂರಿಗೆ ಅರುಣ್ ನಾಗೇಗೌಡ

Leave A Reply