Punishment transfer: ಸೌಜನ್ಯಾ ಹೋರಾಟಗಾರರಿಗೆ ಕಿರುಕುಳ ನೀಡುತ್ತಿದ್ದ ಬಂಟ್ವಾಳ ವ್ಯಾಪ್ತಿಯ DYSP ಪ್ರತಾಪ್ ಸಿಂಗ್ ಥೋರಟ್ ಕಿಕ್ ಔಟ್ !
Dakshina Kannada news Bantwal dysp Prathap Singh Thorat Punishment transfer latest news
Punishment transfer: ಕರ್ನಾಟಕದಲ್ಲಿ ಒಟ್ಟು 44 ಜನ ಡಿವೈಎಸ್ಪಿಗಳನ್ನು ವರ್ಗಾವಣೆ ನವೆಂಬರ್ 17ರಂದು ಮಾಡಲಾಗಿದ್ದು, ಇದರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ವ್ಯಾಪ್ತಿಯ ಪ್ರತಾಪ್ ಸಿಂಗ್ ಥೋರಟ್ (Bantwal dysp Prathap Singh Thorat ) ಕೂಡಾ ಒಬ್ಬರು. ಥೋರಟ್ ರವರನ್ನು ಕರ್ನಾಟಕ ಕಾಂಗ್ರೆಸ್ ಸರ್ಕಾರ ಕಿಕ್ ಔಟ್ ಮಾಡಿದ್ದು, ಕೆಲಸಕ್ಕೆ ಬಾರದ ಕಡೆ ವರ್ಗಾವಣೆ ಮಾಡಿದೆ. ಸೌಜನ್ಯಾ ಪರ ಹೋರಾಟಗಾರರಿಗೆ ಸಾಕಷ್ಟು ಕಿರುಕುಳವನ್ನು ನೀಡಿದ್ದ ಪ್ರತಾಪ್ ಸಿಂಗ್ ಥೋರಟ್ ವರು ಸದಾ ಬಡವರ ಮತ್ತು ಶೋಷಿತರ ವಿರುದ್ಧವಾಗಿ ನಿಲ್ಲುತ್ತಿದ್ದರು. ಬೆಳ್ತಂಗಡಿ ತಾಲೂಕಿನ ಭೂ ಬಕಾಸುರ ಮಾಲಿಕರ ಮತ್ತು ಧನದಾಹಿ ವ್ಯಕ್ತಿಗಳ ಪರವಾಗಿ ಕೆಲಸ ಮಾಡುತ್ತಿದ್ದ ಥೋರಟ್ ರವರನ್ನು ಕರಾವಳಿಯಿಂದ ಒದ್ದೊಡಿಸಲಾಗಿದೆ(Punishment transfer).
ಇತ್ತೀಚೆಗೆ ಉಜಿರೆಯಲ್ಲಿ ನಡೆದ ಧರ್ಮ ಸಂರಕ್ಷಣಾಯಾತ್ರೆಯ ಸಂದರ್ಭ ವಿನಾಕಾರಣ ಸೌಜನ್ಯ ಪರ ಹೋರಾಟಗಾರರಾಗಿರುವ ಮಹೇಶ್ ಶೆಟ್ಟಿ ತಿಮರೋಡಿಯವರ ವಿರುದ್ಧ ನಾನ್ ಬೈಲಬಲ್ ಕೇಸು ದಾಖಲಿಸಿ, ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿ ಸುದ್ದಿಯಾಗಿದ್ದರು. ಈ ಥೋರಟ್ ಇದಕ್ಕಿಂತ ಮುಂಚೆ, ಬೆಳ್ತಂಗಡಿಯ ಶಿಬಾಜೆಯ ಒಂದು ಪ್ರಕರಣದಲ್ಲಿ ಕೂಡ ಹೆಸರು ಕೆಡಿಸಿಕೊಂಡಿದ್ದರು. ಇದೀಗ ಆತನ ಅನ್ಯಾಯದ ಕೊಡ ತುಂಬಿ ಬಂದಿದ್ದು ಪ್ರಕಾಶ್ ಸಿಂಗ್ ಥೋರಟ್ ನನ್ನು ಕರಾವಳಿಯಿಂದ ಒದ್ದು ಓಡಿಸಲಾಗಿದೆ. ಒಂದು ಪೀಡೆ ಸದ್ಯಕ್ಕೆ ತೊಲಗಿದಂತಾಗಿದೆ.
ಪ್ರಸ್ತುತ ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ಡಿ.ಸಿ.ಆರ್.ಬಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವಿಜಯಪ್ರಸಾದ್ ಇವರನ್ನು ಬಂಟ್ವಾಳ ಡಿವೈಎಸ್ಪಿಯಾಗಿ ಪೊಲೀಸ್ ಇಲಾಖೆ ನೇಮಕ ಮಾಡಲಾಗಿದೆ. ಮುಂದೆ ಬರುವ ಅಧಿಕಾರಿ ಕರ್ತವ್ಯ ಪ್ರಜ್ಞೆ ಮೆರೆದು ಶೋಷಿತರ ಪರವಾಗಿ ನಿಲ್ಲಲಿ, ದೊಡ್ಡವರ ದಾಸ್ಯ ಅವರಿಗೆ ಅಂಟದಿರಲಿ ಅನ್ನೋದೇ ಕರಾವಳಿಯ ಆ ಭಾಗದ ಜನರ ಇಂದಿನ ಆಶಯ.
ಇದನ್ನೂ ಓದಿ: Ration card: ಹೊಸ ರೇಷನ್ ಕಾರ್ಡ್ ನಿರೀಕ್ಷೆಯಲ್ಲಿದ್ದವರಿಗೆ ಬಿಗ್ ಶಾಕ್ ; ಸರ್ಕಾರದಿಂದ ಬಂತು ಹೊಸ ರೂಲ್ಸ್ !!