Opposition leader : ವಿಪಕ್ಷ ನಾಯಕನಾಗಿ ಆರ್ ಅಶೋಕ್ ಆಯ್ಕೆ – ಬಿಜೆಪಿಯಿಂದ ಘೋಷಣೆ !!
Karnataka politics news R Ashok elected as Karnataka opposition party leader latest news
Karnataka Opposition leader : ಬಿಜೆಪಿ ನಾಯಕ, ಮಾಜಿ ಸಚಿವ, ಮಾಜಿ ಡಿಸಿಎಂ ಆದ ಹಾಗೂ ಒಕ್ಕಲಿಗರ ಪ್ರಬಲ ನಾಯಕ ಆರ್ ಅಶೋಕ್( R Ashok) ಅವರನ್ನು ವಿಧಾನಸಭೆಯ ವಿಪಕ್ಷ ನಾಯಕನಾಗಿ(Karnataka Opposition Leader) ಬಿಜೆಪಿ ಘೋಷಣೆ ಮಾಡಿದೆ.
ಹೌದು, ಬಿಜೆಪಿ ಅಧ್ಯಕ್ಷರ ನೇಮಕವಾದ ಬಳಿಕ ಎಲ್ಲರ ಚಿತ್ತ ವಿಪಕ್ಷ ನಾಯಕನತ್ತ ನಟ್ಟಿತ್ತು. ರಾಜ್ಯದ ಜನ ಕುತೂಹಲದಿಂದ ಕಾದಿದ್ದರು. ಅಂತೆಯೇ ಇದೀಗ ತನ್ನ ಪಕ್ಷದ ಪ್ರಬಲ ನಾಯಕ, ಪದ್ಮನಾಭನಗರದ ಶಾಸಕ ಆರ್ ಅಶೋಕ್ ಅವರನ್ನು ಬಿಜೆಪಿಯ ಶಾಸಕಾಂಗ ಸಭೆಯಲ್ಲಿ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದ್ದು, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಘೋಷಣೆ ಮಾಡಿದ್ದಾರೆ.
ಅಂದಹಾಗೆ ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ನಡೆದ ಬಿಜೆಪಿ ಶಾಸಕಾಂಗ ಸಭೆಯ ನಂತರ ಆರ್.ಅಶೋಕ್ ಹೆಸರು ಘೋಷಣೆ ಮಾಡಲಾಗಿದೆ. ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಅಶೋಕ್ ಹೆಸರನ್ನು ಸೂಚಿಸಿದರೆ, ಶಾಸಕ ಸುನಿಲ್ ಕುಮಾರ್ ಇದಕ್ಕೆ ಅನುಮೋದನೆ ನೀಡಿದರು. ಕೊನೆಗೆ ಬಿಜೆಪಿಯ ಹಿರಿಯ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಈ ಹೆಸರಿಗೆ ಅನುಮೋದನೆ ನೀಡಿದರು.ವಿಪಕ್ಷ ನಾಯಕರಾಗಿ ಆರ್ ಅಶೋಕ್ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ.
ಇದನ್ನೂ ಓದಿ: ಹಾವು ಕಡಿದ್ರೂ 2 ದಿನ ಆರೋಗ್ಯವಾಗಿದ್ದ ಮಹಿಳೆ 3ನೇ ದಿನಕ್ಕೆ ಸಾವು – ಇದೆಂತಾ ವಿಚಿತ್ರ ಹಾವು ಮಾರ್ರೆ ?!