H D Kumarswamy: 68,000 ದಂಡ ಕಟ್ಟುತ್ತಿದ್ದಂತೆ ಡಿ ಕೆ ಶಿವಕುಮಾರ್ ಗೆ ಕರೆಂಟ್ ಶಾಕ್ ಕೊಟ್ಟ ಕುಮಾರಸ್ವಾಮಿ!!

political news latest news DK Sivakumar and Kumaraswamy News

Share the Article

H D Kumarswamy: ದೀಪಾವಳಿ ಮುಂಚಿನ ದಿನದಂದು ಅನುಮತಿ ಪಡೆಯದೆ ವಿದ್ಯುತ್ತನ್ನು ಬಳಸಿಕೊಂಡ ಆರೋಪದಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಸರ್ಕಾರಕ್ಕೆ 68,000ಗಳನ್ನು ದಂಡ ಪಾವತಿಸಿದ್ದಾರೆ. ಇದೀಗ ಈ ಬೆನ್ನಲ್ಲೇ ಕುಮಾರಸ್ವಾಮಿ(H D Kumarswamy) ಅವರು ಡಿಸಿಎಂ ಅವರಿಗೆ ಬಿಗ್ ಶಾಕ್ ನೀಡಿದ್ದಾರೆ.

ಹೌದು, ವಿದ್ಯುತ್ ಕಳ್ಳ ಎಂದು ಆರೋಪಿಸಿದಕ್ಕೆ ಕುಮಾರಸ್ವಾಮಿ ಅವರು ಡಿಕೆ ಶಿವಕುಮಾರ್ ಅವರಿಗೆ ಬಿಗ್ ಶಾಕ್ ನೀಡಿದ್ದಾರೆ. ಜೆಪಿ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ನನ್ನನ್ನ ಕಳ್ಳ ಕಳ್ಳ ಎಂದು ಕರೆಯುತ್ತಾರೆ. ಆದರೆ ಲುಲು ಮಾಲ್ (Lulu Mall) 6 ತಿಂಗಳು ಬಿಲ್ ಪಾವತಿಸಿಲ್ಲ. ನೀವು ಲುಲು ಮಾಲ್ ಕರೆಂಟ್ ಕಳ್ಳತನದ ಬಗ್ಗೆ ತನಿಖೆಮಾಡಿ ಎಂದು ಡಿಸಿಎಂ ಡಿಕೆ ಶಿವಕುಮಾರ್‌ಗೆ (DK Shivakumar) ಸವಾಲು ಎಸೆದರು.

ಅಲ್ಲದೆ ಲುಲು ಮಾಲ್ ಪ್ರಾರಂಭಕ್ಕೂ ಮುನ್ನ 6 ತಿಂಗಳು ಬಳಕೆ ಮಾಡಿದಕ್ಕೆ ಬಿಲ್ ಹಾಕ್ತಾರಾ? ನನ್ನನ್ನು ಕಳ್ಳ ಎಂದು ಹೇಳುವುದನ್ನು ಬಿಡಿ. ನಾನು ನಿಮ್ಮಷ್ಟು ದೊಡ್ಡ ಕಳ್ಳ ಅಲ್ಲ. ನೀವು ಹಗಲು ದರೋಡೆಕೋರರು. ನಾನು ದಂಡ ಕಟ್ಟಿದ್ದೇನೆ. ಮೇಕೆದಾಟು ಪಾದಯಾತ್ರೆಗೆ ಯಾವ ಕರೆಂಟ್ ತಗೊಂಡಿದ್ದೀರಿ. ಕನಕಪುರದಲ್ಲಿ ಕನಕೋತ್ಸವ ನಡೆಯುತ್ತದೆ. ಅದಕ್ಕೆ ಕರೆಂಟ್ ಎಲ್ಲಿಂದ ಬಂತು? ಯಾರು ದೊಡ್ಡ ಕಳ್ಳ? ಹೇಗೆ ಮಾಡಿದರೂ ಉತ್ತರ ಕೊಡಬೇಕು. ಎಲ್ಲವೂ ಕಣ್ಣ ಮುಂದೆ ಇದೆ. ಬೇಕಿದ್ರೆ ವಿಡಿಯೋ ಕೊಡೋಣ. ನನ್ನನ್ನು ಬೆದರಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ವಾಗ್ದಾಳಿ ನಡೆಸಿದರು.

Leave A Reply