Astro Tips: ಸೂರ್ಯ ಮುಳುಗುವಾಗ ಇವುಗಳನ್ನೇನಾದ್ರೂ ಕಂಡಿದ್ದೀರಾ ?! ಹಾಗಿದ್ರೆ ನಿಮ್ಮ ಮನೆಯೊಳಗೆ ಮಹಾಲಕ್ಷ್ಮೀ ಕೂತಿದ್ದಾಳೆ ಎಂದರ್ಥ!!

Astro Tips: ಹಿಂದೂ ಧರ್ಮದಲ್ಲಿ ಮಾತೆ ಲಕ್ಷ್ಮಿಯನ್ನು ಸಂಪತ್ತು, ವೈಭವ, ಸಂತೋಷ ಮತ್ತು ಸಮೃದ್ಧಿಯ ಪ್ರತೀಕ ಎಂಬ (Astro Tips)ನಂಬಿಕೆಯಿದೆ. ತಾಯಿ ಲಕ್ಷ್ಮಿಯ(Lordest Lakshmi)ಆಶೀರ್ವಾದ ಇರುವ ಮನೆಯಲ್ಲಿ ಎಂದಿಗೂ ಹಣದ ಸಮಸ್ಯೆಯಾಗಲಿ ಇಲ್ಲವೇ ಸುಖ-ಸಂಪತ್ತಿಗೆ ಕೊರತೆ ಇರುವುದಿಲ್ಲ ಎಂದು ಹೇಳಲಾಗುತ್ತದೆ.

ಧಾರ್ಮಿಕ ನಂಬಿಕೆಗಳ ಪ್ರಕಾರ, ಸೂರ್ಯೋದಯದ ರೀತಿಯಲ್ಲಿ ಸೂರ್ಯಾಸ್ತಕ್ಕೂ ಕೂಡ ವಿಶೇಷವಾದ ಮಹತ್ವವಿದೆ. ಜ್ಯೋತಿಷ್ಯ ಶಾಸ್ತ್ರದ ಅನುಸಾರ, ಸೂರ್ಯಾಸ್ತದ ಬಳಿಕ ಕಾಣುವ ಕೆಲವು ಚಿಹ್ನೆಗಳು ಆ ಮನೆಯಲ್ಲಿ ಶೀಘ್ರದಲ್ಲೇ ಮಾತೆ ಲಕ್ಷ್ಮಿ ಆಗಮನವನ್ನು ಸೂಚಿಸುತ್ತದೆ.

*ಹಲ್ಲಿ
ಸೂರ್ಯಾಸ್ತದ ಬಳಿಕ ಹಲ್ಲಿಯನ್ನು ಕಂಡರೆ ಅದು ಶುಭದ ಸಂಕೇತ. ಅದರಲ್ಲೂ ಮೂರು ಹಲ್ಲಿಗಳನ್ನು ಒಟ್ಟಿಗೆ ನೋಡಿದರೆ ಅದು ಲಕ್ಷ್ಮಿ ಆಗಮನವನ್ನು ಸೂಚಿಸುತ್ತದೆ.
* ಹಕ್ಕಿ ಗೂಡು
ನೀವು ಮುಸ್ಸಂಜೆ ವೇಳೆಗೆ ಹಕ್ಕಿ ಗೂಡು ಕಟ್ಟುವುದನ್ನು ನೋಡಿದರೆ ಅತಿ ಶೀಘ್ರದಲ್ಲಿ ಹಠಾತ್ ಧನಲಾಭವಾಗಲಿದೆ ಎಂಬುದನ್ನು ಸೂಚಿಸುತ್ತದೆ.
* ಕನಸಿನಲ್ಲಿ ಇವುಗಳ ಗೋಚರ
ರಾತ್ರಿ ವೇಳೆ ಕನಸ್ಸಿನಲ್ಲಿ ಪೊರಕೆ, ಶಂಖ, ಹಾವು, ಕಮಲ, ಗುಲಾಬಿ ಪುಷ್ಪ ಕಂಡರೆ ಶೀಘ್ರದಲ್ಲೇ ನಿಮ್ಮ ಮನೆಗೆ ಸಂಪತ್ತಿನ ಲಕ್ಷ್ಮಿ ಬರಲಿದ್ದಾಳೆ ಎಂಬುದನ್ನು ಸೂಚಿಸುತ್ತದೆ.

* ಕಪ್ಪು ಇರುವೆ
ಮನೆಯಲ್ಲಿ ಸಂಜೆ ಸೂರ್ಯಾಸ್ತದ ಬಳಿಕ ನೀವು ಏಕಾಏಕಿ ಕಪ್ಪು ಇರುವೆಗಳ ಸಮೂಹವನ್ನು ನೋಡಿದರೆ ಸಂಪತ್ತಿನ ದೇವತೆಯಾದ ಲಕ್ಷ್ಮೀ ನಿಮ್ಮಿಂದ ಸಂತುಷ್ಟಗೊಂಡಿರುವುದನ್ನು ತಿಳಿಸುತ್ತದೆ. ಅಷ್ಟೇ ಅಲ್ಲದೆ, ನಿಮ್ಮ ಮೇಲೆ ಲಕ್ಷ್ಮಿಯ ಕೃಪಾ ಕಟಾಕ್ಷವಿದೆ ಎಂಬುದನ್ನು ಸೂಚಿಸುತ್ತದೆ.

 

ಇದನ್ನು ಓದಿ: New rules for vehicles: ಇನ್ಮುಂದೆ ಈ ವಾಹನಗಳು ರಸ್ತೆಗೆ ಇಳಿಯುವಂತಿಲ್ಲ – ಸರ್ಕಾರದ ಖಡಕ್ ಆದೇಶ !!

Leave A Reply

Your email address will not be published.