New rules for vehicles: ಇನ್ಮುಂದೆ ಈ ವಾಹನಗಳು ರಸ್ತೆಗೆ ಇಳಿಯುವಂತಿಲ್ಲ – ಸರ್ಕಾರದ ಖಡಕ್ ಆದೇಶ !!

New rules for vehicles: ವಾಹನ ಸಂಚಾರದ ಕುರಿತು ಸರ್ಕಾರ ಅನೇಕ ನಿಯಮಗಳನ್ನು ತರುತ್ತದೆ. ವಾಹನ ಸವಾರರು ಅದೆಲ್ಲವನ್ನೂ ಪಾಲಿಸಲೇಬೇಕು. ಯಾಕೆಂದರೆ ಸಾರ್ವಜನಿಕರ ಅನುಕೂಲಕ್ಕಾಗಿಯೇ ಸರ್ಕಾರ ಈ ಯೋಜನೆಗಳನ್ನು ತರುವುದು. ಅಂತೆಯೇ ಇದೀಗ ವಾಹನಗಳಿಗೆ ಮತ್ತೊಂದು ಹೊಸ ನಿಯಮವನ್ನು(New rules for vehicles) ಸರ್ಕಾರ ಜಾರಿಗೊಳಿಸಿದ್ದು ಈ ವಾಹನಗಳು ಇನ್ಮುಂದೆ ರಸ್ತೆಗಿಳಿಯುವಂತಿಲ್ಲ.

ಹೌದು, ಈಗ ಬಂದಿರುವ ಹೊಸ ನಿಯಮದ ಪ್ರಕಾರ ನೀವು ಫೆಬ್ರವರಿ 17 ಒಳಗೆ ಈ ಕೆಲಸ ಮಾಡಿಕೊಳ್ಳದೆ ಇದ್ದರೆ ನಿಮ್ಮ ವಾಹನವನ್ನು ಕಳೆದುಕೊಳ್ಳುತ್ತೀರಿ. ಅದೇನೆಂದರೆ HSRP ನಂಬರ್ ಪ್ಲೇಟ್ ಅನ್ನು ಈ ದಿನದೊಳಗೆ ನೀವು ನಿಮ್ಮ ವಾಹನಗಳಿಗೆ ತಪ್ಪದೇ ಅಳವಡಿಸಲೇ ಬೇಕು. ಇಲ್ಲವಾದರೆ ನಿಮ್ಮ ವಾಹನ ಸೀಜ್ ಆಗುತ್ತದೆ ಎಂದು ಸರ್ಕಾರ ತಿಳಿಸಿದೆ.

ಅಂದಹಾಗೆ ಇತ್ತೀಚಿಗೆ ವಾಹನ (Vehicle) ಖರೀದಿಸಿದವರಿಗೆ ಈ ಸಮಸ್ಯೆ ಎದುರಾಗುವುದಿಲ್ಲ. ಯಾಕೆಂದರೆ ಇತ್ತೀಚಿನ ವಾಹನಗಳಿಗೆ ನಂಬರ್ ಪ್ಲೇಟ್ (number plate) ಅನ್ನು HSRR ಮಾದರಿಯಲ್ಲಿ ನೀಡಲಾಗುತ್ತದೆ. ಆದರೆ 2019 ಎಪ್ರಿಲ್ 1ರ ಮೊದಲು ಖರೀದಿಸಿದ ವಾಹನಗಳಿಗೆ ನೀವು ಈ ಪ್ಲೇಟ್ ಅನ್ನು ಕಡ್ಡಾಯವಾಗಿ ಹಾಕಿಸಲೇ ಬೇಕೆಂದು ಕೇಂದ್ರ ಸರ್ಕಾರ ತಿಳಿಸಿದೆ.

ಅಂದಹಾಗೆ ಈ ಹಿಂದೆಯೂ ಅನೇಕ ಸಲ ಸರ್ಕಾರ HSRP ನಂಬರ್ ಪ್ಲೇಟ್ ಅಳವಡಿಸಲು ತಿಳಿಸಿತ್ತು. ಆದರೆ ಯಾರೂ ಕೂಡ ಸರ್ಕಾರದ ಈ ನಿಯಮಗಳನ್ನು ಪಾಲಿಸಲಿಲ್ಲ. ಇದೀಗ ಸರ್ಕಾರವೇ ಇದಕ್ಕೆ ಫೆಬ್ರವರಿ 17ರ ವರೆಗೆ ಡೆಡ್ ಲೈನ್ ನೀಡಿ ಎಚ್ಚರಿಸಿದೆ.

ಎಚ್ಎಸ್ಆರ್ಪಿ ಯಾಕೆ ಮತ್ತು ವಿಶೇಷತೆ ಏನು?
* HSRP ನೋಂದಣಿ ಫಲಕಗಳು ಅತ್ಯಂತ ಸುರಕ್ಷಿತವಾಗಿದ್ದು ಇವುಗಳನ್ನು ಬದಲಿಸಲು ಇಲ್ಲವೇ ವಿರೂಪಗೊಳಿಸುವುದಕ್ಕೆ ಸಾಧ್ಯವಿಲ್ಲ.
*ರಸ್ತೆಗಳಲ್ಲಿ ಸಂಚರಿಸುವ ಎಲ್ಲ ವಾಹನಗಳನ್ನು ಗುರುತಿಸಲು ಸಹಕರಿಸುತ್ತದೆ.
* ನೋಂದಣಿ ಫಲಕಗಳಲ್ಲಿ ಏಕರೂಪತೆ ಖಚಿತಪಡಿಸಿಕೊಳ್ಳಲು ಸಹಕರಿಸುತ್ತದೆ.
* ನಂಬರ್ ಪ್ಲೇಟ್ನ ಒಂದು ಬದಿಯಲ್ಲಿ ನೀಲಿ ಬಣ್ಣದ ಚಕ್ರವನ್ನು ಹೋಲುವ ಹಾಲೋಗ್ರಾಮ್ ಇರಲಿದ್ದು, ಇದರ ಕೆಳಗಡೆ 10 ನಂಬರಿನ ವಿಶಿಷ್ಟ ಗುರುತಿನ ಸಂಖ್ಯೆ ಇರುತ್ತದೆ. ಅಂಕಿಗಳ ಮೇಲೆ ಆಂಗ್ಲಭಾಷೆಯಲ್ಲಿ ‘ಇಂಡಿಯಾ’ ಎಂಬ ಪದ ಬಳಕೆ ಮಾಡಲಾಗುತ್ತದೆ.
* ಸುರಕ್ಷಿತ ನಂಬರ್ ಪ್ಲೇಟ್ನಲ್ಲಿ ನಂಬರ್ ಪ್ಲೇಟ್ ನಕಲು ಮಾಡುವುದು ಸಾಧ್ಯವಿಲ್ಲ.
* ವಾಹನಗಳ ಕಳವು, ಅವುಗಳನ್ನು ಬಳಸಿ ಅಪರಾಧ ಚಟುವಟಿಕೆ ಮಾಡಿದ ಸಂದರ್ಭ ಎಚ್ಎಸ್ಆರ್ಪಿ ಮೂಲಕ ಸುಲಭವಾಗಿ ಪತ್ತೆ ಹಚ್ಚಬಹುದು

ಹೆಚ್.ಎಸ್.ಆರ್.ಪಿ ಅಳವಡಿಸುವುದು ಹೇಗೆ?
# ಮೊದಲಿಗೆ, https://transport.karnataka.gov.in ಅಥವಾ www.siam.in ಭೇಟಿ ನೀಡಿ ಮತ್ತು Book HSRP ನ್ನು ಕ್ಲಿಕ್ ಮಾಡಿಕೊಳ್ಳಿ
# ನಿಮ್ಮ ವಾಹನ ತಯಾರಕರನ್ನು ಆಯ್ಕೆಮಾಡಿಕೊಂಡು, ವಾಹನದ ಮೂಲ ವಿವರಗಳನ್ನು ಭರ್ತಿ ಮಾಡಿಕೊಳ್ಳಿ.
# HSRP ಅಳವಡಿಕೆಗಾಗಿ ನಿಮ್ಮ ಅನುಕೂಲದ ಅನುಸಾರ ಡೀಲರ್ ಸ್ಥಳವನ್ನು ಆಯ್ಕೆಮಾಡಿ.
# HSRP ಶುಲ್ಕವನ್ನು ಆನ್‌ಲೈನ್‌ನಲ್ಲಿ ಪಾವತಿಸಿ .
# ವಾಹನ ಮಾಲೀಕರ ಮೊಬೈಲ್ ಸಂಖ್ಯೆಗೆ ಒಟಿಪಿ ರವಾನೆ ಮಾಡಲಾಗುತ್ತದೆ.
# ನಿಮ್ಮ ಅನುಕೂಲಕ್ಕೆ, ತಕ್ಕಂತೆ HSRP ಅಳವಡಿಕೆಯ ದಿನಾಂಕ ಹಾಗೂ ಸಮಯವನ್ನು ಆಯ್ಕೆಮಾಡಿಕೊಳ್ಳಿ.
# ನಿಮ್ಮ ವಾಹನದ ಯಾವುದೇ ತಯಾರಕ/ಡೀಲರ್ ಸಂಖ್ಯೆಗೆ ಭೇಟಿ ನೀಡಿ, ವಾಹನ ಮಾಲೀಕರ ಕಚೇರಿ ಆವರಣ/ಮನೆಯ ಸ್ಥಳದಲ್ಲಿ HSRP ಅಳವಡಿಕೆಗಾಗಿ ಆಯ್ಕೆ ಮಾಡಬಹುದು.

 

ಇದನ್ನು ಓದಿ: Kerala Nurse: ಕೇರಳ ನರ್ಸ್ ಗೆ ವಿದೇಶದಲ್ಲಿ ಮರಣ ದಂಡನೆ – ಶಿಕ್ಷೆ ವಿರುದ್ಧದ ಮೇಲ್ಮನವಿ ವಜಾಗೊಳಿಸಿದ ಸುಪ್ರೀಂ !! ಅಷ್ಟಕ್ಕೂ ನಡೆದದ್ದೇನು ?

Leave A Reply

Your email address will not be published.