Hair care Tips: ತಲೆ ಸ್ನಾನ ಮಾಡುವಾಗ ಹುಡುಗಿಯರು ಎಂದೂ ಈ ತಪ್ಪುಗಳನ್ನು ಮಾಡಬಾರದು
Hair Care Tips: ತಲೆ ಸ್ನಾನ ಮಾಡುವಾಗ ಕೆಲ ತಪ್ಪುಗಳನ್ನು ಬಹುತೇಕರು ಮಾಡುತ್ತಾರೆ. ಇದರಿಂದಾಗಿ ಕೂದಲ ಆರೋಗ್ಯದಲ್ಲಿ ಹಲವಾರು ತೊಂದರೆ ಉಂಟಾಗಬಹುದು. ಮುಖ್ಯವಾಗಿ ತಲೆಗೆ ಸ್ನಾನ ಮಾಡುವಾಗ ಕೆಲ ಸೂಕ್ಷ್ಮತೆಗಳ ಬಗ್ಗೆ ತಿಳಿದುಕೊಳ್ಳಬೇಕು. ಈ ಕೆಳಗೆ ತಿಳಿಸಿದ ಕೆಲ ಅಂಶಗಳ ಬಗ್ಗೆ ಗಮನ ಹರಿಸಿದರೆ ಕೂದಲಿನ ಸಮಸ್ಯೆಗಳನ್ನು ದೂರವಾಗಿಸಬಹುದು.
ಶಾಂಪೂ ಬಳಕೆ:
ಕೂದಲಿಗೆ ಹೊಂದುವ ಶಾಂಪೂ ಬಳಸುವುದು ಬಹಳ ಮುಖ್ಯ. ನಿಮ್ಮದು ಒರಟು ಕೂದಲು, ನಯವಾದ ಕೂದಲು ಹೀಗೆ ಕೂದಲಿನ ವಿಧ ಯಾವುದು ಎಂದು ಗುರುತಿಸಿ ಅದಕ್ಕೆ ತಕ್ಕ ಹಾಗೆ ಶಾಂಪೂ ಬಳಸಿ.
ಕೂದಲ ಸಿಕ್ಕು ಬಿಡಿಸಿಕೊಳ್ಳಿ: ತಲೆಸ್ನಾನಕ್ಕೂ ಮುನ್ನ ಕೂದಲ ಸಿಕ್ಕು ಬಿಡಿಸಿಕೊಳ್ಳುವುದು ಬಹಳ ಮುಖ್ಯ. ಇಲ್ಲದಿದ್ದರೆ ಇದು ಕೂದಲಿಗೆ ಬುಡದಿಂದಲೇ ಹಾನಿ ಮಾಡಬಹುದು. ಅಲ್ಲದೇ ಒದ್ದೆ ಕೂದಲು ಬಾಚುವುದರಿಂದ ಸಮಸ್ಯೆ ಹೆಚ್ಚಬಹುದು.
ರಾಸಾಯನಿಕ ರಹಿತ ಶಾಂಪೂ ಬಳಕೆ:
ಸಾಧ್ಯವಾದಷ್ಟು ರಾಸಾಯನಿಕ ಅಂಶ ರಹಿತ ಶಾಂಪೂ ಬಳಸಲು ಟ್ರೈ ಮಾಡಿ. ಒಂದು ವೇಳೆ ರಾಸಾಯನಿಕ ಅಂಶವುಳ್ಳ ಶಾಂಪೂ ಬಳಸಿದರೂ ಕಡಿಮೆ ಪ್ರಮಾಣದಲ್ಲಿ ಬಳಸಿ.
ಕೂದಲಿನ ಬುಡಕ್ಕೆ ತಪ್ಪಿಯೂ ಕಂಡೀಷನರ್ ಬಳಕೆ ಮಾಡಬೇಡಿ: ಕಂಡೀಷನರ್ ಅನ್ನು ಕೂದಲಿಗೆ ಮಾತ್ರ ಹಚ್ಚಿ. ಕೂದಲಿನ ಬುಡಕ್ಕೆ ತಪ್ಪಿಯೂ ಕಂಡೀಷನರ್ ತಾಕದಿರಲಿ. ಇದರಿಂದ ಡ್ಯಾಂಡ್ರಫ್, ಕೆರೆತದಂತಹ ಸಮಸ್ಯೆಗಳು ಕಾಣಿಸಬಹುದು.
ಬಿಸಿ ನೀರಿನ ಸ್ನಾನ:
ಅತಿಯಾದ ಬಿಸಿ ನೀರು ಕೂದಲಿಗೆ ಬಹಳ ಹಾನಿ ಮಾಡಬಹುದು. ಇದರಿಂದ ಕೂದಲು ಬುಡದಿಂದಲೇ ಒಣಗಬಹುದು. ಇದು ನೆತ್ತಿಯ ಬುಡದ ತುರಿಕೆ, ಕಿರಿಕಿರಿ ಹಾಗೂ ಕೂದಲು ಉದುರಲು ಕಾರಣವಾಗಬಹುದು. ಯಾವಾಗಲೂ ತಲೆಸ್ನಾನಕ್ಕೆ ಉಗುರು ಬೆಚ್ಚಗಿನ ನೀರು ಬಳಸಿ.
ಪ್ರತಿದಿನ ತಲೆಸ್ನಾನ ಮಾಡುವುದು ಸರಿಯಲ್ಲ:
ಪ್ರತಿದಿನ ತಲೆಸ್ನಾನ ಇದರಿಂದ ಸೇಬಂ ಉತ್ಪಾದನೆ ಹೆಚ್ಚಬಹುದು. ಇದು ನೆತ್ತಿಯ ತುರಿಕೆಗೂ ಕಾರಣವಾಗುತ್ತದೆ. ಕೂದಲಿನಲ್ಲಿ ಎಣ್ಣೆಯಂಶ ಹೆಚ್ಚಿದೆ ಅನ್ನಿಸಿದರೆ ಎರಡು ದಿನಗಳಿಗೊಮ್ಮೆ ತಲೆಸ್ನಾನ ಮಾಡಿ.
ಇದನ್ನು ಓದಿ: 8th Pay Commission: 7 ಮಾತ್ರವಲ್ಲ 8ನೇ ವೇತನ ಆಯೋಗವೂ ಕೂಡ ಸದ್ಯದಲ್ಲೇ ಜಾರಿ ?! ಸರ್ಕಾರಿ ನೌಕರರಿಗೆ ಬಂಪರ್ ಲಾಟ್ರಿ !!