Ration card: ರೇಷನ್ ಕಾರ್ಡ್’ದಾರರೇ ಎಚ್ಚರ..!! ತಪ್ಪಿಯೂ ಈ ಕೆಲಸ ಮಾಡಬೇಡಿ ; ಮಾಡಿದ್ರೆ ಅಪಾಯ ಕಟ್ಟಿಟ್ಟಬುತ್ತಿ !!
Karnataka news ration Card holders becarefull govt take action if anna bhagya scheme rice is sold
Ration card: ಸರ್ಕಾರವು ಬಿಪಿಎಲ್ ಕಾರ್ಡ್ ದಾರರಿಗೆ ಹಲವಾರು ಉಚಿತ ಸೌಲಭ್ಯಗಳನ್ನು ಘೋಷಿಸಿದೆ. ಅದರಂತೆ ಪ್ರಮುಖವಾಗಿ ‘ಅನ್ನ ಭಾಗ್ಯ’ ಯೋಜನೆಯೂ ಒಂದು. ಆದರೆ ಅನ್ನಭಾಗ್ಯ ಯೋಜನೆಯಲ್ಲಿ ಬರುವಂತಹ ಉಚಿತ ಅಕ್ಕಿಯನ್ನು ಅನೇಕರು ಬೇರೆಬೇರೆ ಕಡೆಗಳಲ್ಲಿ ಹೆಚ್ಚಿನ ಹಣಕ್ಕೆ ಮಾರಿಕೊಳ್ಳುತ್ತಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ. ಹೀಗಾಗಿ ಇಂತ ಒಂದು ಕೆಲಸವನ್ನು ತಡೆಗಟ್ಟಲು ಜಿಲ್ಲಾಡಳಿಗಳು ಮುಂದಾಗಿವೆ.
ಹೌದು, ಉಚಿತವಾಗಿ ನೀಡುವ ಅಕ್ಕಿಯನ್ನು ಅಕ್ರಮವಾಗಿ ಮಾರುತ್ತಿರುವ ರೇಷನ್ ಕಾರ್ಡ್(Ration card) ದಾರರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಲು ಹಾಗೂ ಇದನ್ನು ತಡೆಯಲು ಮೈಸೂರಿನ ಜಿಲ್ಲಾಧಿಕಾರಿಗಳು ಖಡಕ್ ಎಚ್ಚರಿಕೆಯೊಂದನ್ನು ನೀಡಿದ್ದಾರೆ. ಅಕ್ರಮವಾಗಿ ಅನ್ನಭಾಗ್ಯ ಅಕ್ಕಿ ಮಾರಾಟ ಮಾಡಿಕೊಂಡವರ ವಿರುದ್ಧ ಅಗತ್ಯ ವಸ್ತುಗಳ ಕಾಯ್ದೆ 1955ರ ಅಡಿ ಪ್ರಕರಣ ದಾಖಲು ಮಾಡಲಾಗುತ್ತಿದೆ. ಹೀಗಾಗಿ ದಯವಿಟ್ಟು ಯಾರೂ ಸರ್ಕಾರ ನೀಡೋ ಉಚಿತ ಅಕ್ಕಿಯನ್ನು ಮಾರದೆ ನಿಮ್ಮ ಸ್ವಂತಕ್ಕೆ ಬಳಸಿಕೊಳ್ಳಬೇಕೆಂದು ಜಿಲ್ಲಾಡಳಿತ ಮನವಿ ಮಾಡಿದೆ.
ಅಂದಹಾಗೆ ಕಾರ್ಡುದಾರರು ಸರ್ಕಾರದಿಂದ ನ್ಯಾಯಬೆಲೆ ಅಂಗಡಿಗಳ ಮೂಲಕ ಪಡೆಯುವ ಪಡಿತರ ಪದಾರ್ಥಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡುವುದು ಶಿಕ್ಷಾರ್ಹ ಅಪರಾಧ ಆಗಿದ್ದು ಈ ರೀತಿಯ ಪ್ರಕರಣಗಳು ಕಂಡುಬಂದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದೆ.
ಇದನ್ನೂ ಓದಿ: Yatindra Siddaramiha: ಸಿದ್ದು ಸರ್ಕಾರದಲ್ಲಿ ಮಗ ಯತೀಂದ್ರನ ಹಸ್ತಕ್ಷೇಪ – ವೈರಲ್ ಆಯ್ತು ಅಪ್ಪ-ಮಗನ ಆಡಿಯೋ !!