Udupi Crime News: ಗಗನಸಖಿ ಮತ್ತು ಫ್ಯಾಮಿಲಿ ಮರ್ಡರ್‌ ಕೇಸ್‌; ಕೊಲೆಗಿದೆ ಮೂರು ಕಾರಣ!

Share the Article

ಉಡುಪಿ: ಚಾಕುವಿನಿಂದ ಇರಿದು ಒಂದೇ ಕುಟುಂಬದ ನಾಲ್ವರನ್ನು ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿ ಪ್ರವೀಣ್‌ ಚೌಗಲೆ ವಿಚಾರಣೆ ಸಂದರ್ಭ ತಪ್ಪೊಪ್ಪಿಕೊಂಡಿದ್ದಾನೆ ಎಂದು ಉಡುಪಿ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಅರುಣ್‌ ತಿಳಿಸಿದ್ದಾರೆ. ಆತ ತಾನೇ ಕೊಲೆ ಮಾಡಿದ್ದೇನೆಂದು ಹೇಳಿಕೊಂಡರೂ, ಅದನ್ನು ಪ್ರಾಮಾಣೀಕರಿಸಬೇಕಿದೆ ಎಂದು ಹೇಳಿದ್ದಾರೆ.

ವಿಚಾರಣೆ ವೇಳೆ ಕೊಲೆ ಮಾಡಿದ್ದು ತಾನೇ ಎಂದು ತಪ್ಪೊಪ್ಪಿಕೊಂಡಿದ್ದು, ಕೊಲೆಗೆ ಮೂರ್ನಾಲ್ಕು ಕಾರಣಗಳಿರುವ ಸಾಧ್ಯತೆ ಇದೆ, ಸಂಪೂರ್ಣ ತನಿಖೆ ನಡೆಸದೇ ಹತ್ಯೆಗೆ ಕಾರಣ ಹೇಳಲು ಸಾಧ್ಯವಿಲ್ಲ ಎಂದು ಪೊಲೀಸ್‌ ವರಿಷ್ಠಾಧಿಕಾರಿ ಹೇಳಿದ್ದಾರೆ. ಅವನು ಏನೋ ವೈಷಮ್ಯದಿಂದ ಮನೆಗೆ ನುಗ್ಗಿ ಅಯ್ನಾಜ್‌ ಕೊಲ್ಲಲು ಮನಗೆ ಬಂದಿದ್ದು, ಆಕೆಯನ್ನು ರಕ್ಷಿಸಲು ಬಂದಿದ್ದ ಮೂವರನ್ನೂ ಕೊಲೆ ಮಾಡಿದ್ದಾನೆ ಎಂದು ಹೇಳಿದರು.

ಕೊಲೆ ಆರೋಪಿ ಪ್ರವೀಣ್‌ ಮೂರು ತಿಂಗಳ ಕಾಲ ಪೊಲೀಸ್‌ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದು, ನಂತರ ಏರ್‌ಇಂಡಿಯಾದಲ್ಲಿ ಸುಮಾರು 10ವರ್ಷದಿಂದ ಕೆಲಸ ಮಾಡುತ್ತಿದ್ದ. ಅಲ್ಲಿ ಗಗನಸಖಿಯಾದ ಅಯ್ನಾಜ್‌ ಪರಿಚಯವಾಗಿತ್ತು. ಆರೋಪಿಗೆ ಈ ಹಿಂದೆನೇ ಮದುವೆಯಾಗಿರುವುದಾಗಿ ಹೇಳಿದ್ದಾರೆ.

ಕೊಲೆ ಬಳಿಕ ಆರೋಪಿ ಬೆಳಗಾವಿಯ ಕುಡುಚಿಯಲ್ಲಿ ಸಂಬಂಧಿಕರ ಮನೆಯಲ್ಲಿ ಅಡಗಿದ್ದ. ನ.14ರಂದು ಉಡುಪಿ ಪೊಲೀಸರು ಮೊಬೈಲ್‌ ಲೊಕೇಶನ್‌ ಆಧಾರದ ಮೇಲೆ ಕುಡುಚಿಯಲ್ಲಿ ಆರೋಪಿಯನ್ನು ಬಂಧಿಸಿದ್ದರು.

Leave A Reply