School Holiday: ಭಾರೀ ಮಳೆಯ ಸಂಭವ; ಇಂದು ಈ ಶಾಲೆಗಳಿಗೆ ರಜೆ ಘೋಷಣೆ!

Education news due to heavy rains holiday announced for these school today

Share the Article

School Holiday: ಭಾರೀ ಮಳೆಯ ಕಾರಣದಿಂದ ಚೆನ್ನೈನ ಜಿಲ್ಲಾಡಳಿತವು ಜಿಲ್ಲೆಯ ಎಲ್ಲಾ ಶಾಲೆಗಳಿಗೆ ನವೆಂಬರ್‌ 15ರಂದು ರಜೆ( School Holiday) ಘೋಷಿಸಿದೆ. ಚೆನ್ನೈ ಜಿಲ್ಲೆಯ ಎಲ್ಲಾ ಶಾಲೆಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ರಶ್ಮಿ ಸಿದ್ದಾರ್ಥ್‌ ಝಾಗಡೆ ಆದೇಶ ನೀಡಿದ್ದಾರೆ.

ಈಶಾನ್ಯ ಮಾನ್ಸೂನ್‌ ಬಂಗಾಳಕೊಲ್ಲಿಯಲ್ಲಿ ಕಡಿಮೆ ಒತ್ತಡ ಉಂಟುಮಾಡುವುದರೊಂದಿಗೆ, ತಮಿಳುನಾಡಿನ ಹಲವಾರು ಭಾಗಗಳಲ್ಲಿ ಕಳೆದ ಕೆಲವು ದಿನಗಳಿದ ಭಾರೀ ಮಳೆಯಾಗಿದೆ. ಚೆನ್ನೈನ ಹಲವು ಭಾಗಗಳಲ್ಲಿ ಜಲಾವೃತವಾಗಿದೆ.

ತಿರುವಣ್ಣಾಮಲೈ, ನಾಗಪಟ್ಟಿಣಂ, ಕಡಲೂರು, ಅರಿಯಲೂರು, ತಂಜಾವೂರು, ವಿಲ್ಲುಪುರಂ ಜಿಲ್ಲೆಗಳಲ್ಲಿ ಭಾರೀ ಮಳೆ ಇರುವ ಕಾರಣ ಪರಿಸ್ಥಿತಿ ನೋಡಿಕೊಂಡು ಶಾಲೆಗಳಿಗೆ ರಜೆ ಘೋಷಿಸಲು ಅಧಿಕಾರಿಗಳು ತಿಳಿಸಿದ್ದಾರೆಂದು ವರದಿಯಾಗಿದೆ.

ಇದನ್ನೂ ಓದಿ: ಉಡುಪಿ: ನೇಜಾರು 15 ನಿಮಿಷದಲ್ಲಿ ನಾಲ್ವರ ಕೊಲೆ ಮಾಡಿದ ಆರೋಪಿ ಬಂಧನ : ಕೊಲೆಗೆ ಇದೇ ಕಾರಣವೇ ?

Leave A Reply