ಉಡುಪಿ ಮುಸ್ಲಿಂ ಕುಟುಂಬದ ಹತ್ಯೆ: ಏರ್ ಪೋರ್ಟ್ ಸಿಬ್ಬಂದಿ ಪ್ರವೀಣ್ ಚೌಗಲೆ ಅರೆಸ್ಟ್‌!

Share the Article

ಉಡುಪಿ ಜಿಲ್ಲೆ ನೇಜಾರಿನಲ್ಲಿ ಒಂದೇ ಕುಟುಂಬದ ನಾಲ್ವರ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಮಹತ್ವದ ಬೆಳವಣಿಗೆಯಲ್ಲಿ ಆರೋಪಿ ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಕುಡಿಚಿಯನ್ನು ಬಂಧನವಾಗಿದೆ ಎಂದು ವರದಿಯಾಗಿದೆ.

ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣದ ಆರೋಪಿ ಪ್ರವೀಣ್‌ ಅರುಣ್‌ ಚೌಗಲೆಯನ್ನು ಕುಡುಚಿಯಲ್ಲಿ ಅರೆಸ್ಟ್‌ ಮಾಡಲಾಗಿದೆ. ಉಡುಪಿ ಪೊಲೀಸರು ಕುಡುಚಿಗೆ ಬಂದು ಆರೋಪಿಯನ್ನು ಕರೆದುಕೊಂಡು ಹೋಗಿದ್ದಾರೆ ಎಂದು ವರದಿಯಾಗಿದೆ.

ಉಡುಪಿ ಪೊಲೀಸರು ಬೆಳಗಾವಿಯ ಕುಡುಚಿಯಲ್ಲಿ ಪ್ರವೀಣ್‌ ಅರುಣ್‌ ಚೌಗಲೆ ಎಂಬ ಆರೋಪಿಯನ್ನು ಬಂಧಿಸಿದ್ದು, ಈತ ಮಂಗಳೂರು ಏರ್‌ಪೋರ್ಟ್‌ ಸೆಕ್ಯೂರಿಟಿಯಲ್ಲಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಈತ ಸಿಆರ್‌ಪಿಎಫ್‌ ಸಿಬ್ಬಂದಿಯಾಗಿ ಕೆಲಸ ನಿರ್ವಹಿಸುತ್ತಿದ್ದ ಎನ್ನಲಾಗಿದೆ. ಈತ ಮಹಾರಾಷ್ಟ್ರ ಸಾಂಗ್ಲಿ ಮೂಲದವನು ಎಂದು ವರದಿಯಾಗಿದ್ದು ಕೊಲೆ ಮಾಡಿದ ನಂತರ ಈತ ಸಂಬಂಧಿಕರ ಮನೆಯಲ್ಲಿ ಅಡಗಿಕೊಂಡಿದ್ದ.

ಈತ ಕುಡುಚಿಯಲ್ಲಿರುವ ಸಂಬಂಧಿಯೊಬ್ಬರ ಮನೆಯಲ್ಲಿ ಅವಿತುಕೊಂಡಿದ್ದ. ಆತನ ಮೊಬೈಲ್‌ ಟವರ್‌ ಲೊಕೇಶನ್‌ ಆಧಾರದಲ್ಲಿ ತನಿಖೆ ನಡೆಸಿದ್ದ ಪೊಲೀಸರು ಈತನನ್ನು ಅರೆಸ್ಟ್ ಮಾಡಿದ್ದಾರೆ.

ಸದ್ಯ ಈತ ಬಂಧನ ಆಗಿದ್ದರೂ, ಯಾಕೆ ಇಷ್ಟು ಬರ್ಬರವಾಗಿ ಇಡೀ ಕುಟುಂಬದ ಕೊಲೆ ಮಾಡಿದ ಎನ್ನುವ ಬಗ್ಗೆ ಇನ್ನಷ್ಟೇ ಮಾಹಿತಿ ಹೊರಕ್ಕೆ ಬರಬೇಕಿದೆ.

ಹಂತಕ ಪ್ರವೀಣ್‌ ಅರುಣ್‌ ಚೌಗಲೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಸೆಕ್ಯುರಿಟಿಯಾಗಿ ಕೆಲಸ ಮಾಡುತ್ತಿದ್ದು, ಈ ಸಂದರ್ಭದಲ್ಲಿ ಕೊಲೆಯಾದ ಕುಟುಂಬದ ಅಯ್ನಾಜ್‌ ಪರಿಚಯವಾಗಿತ್ತು ಎನ್ನಲಾಗಿದೆ. ಅಯ್ನಾಜ್‌ ಗಗನಸಖಿಯಾಗಿ ಕೆಲಸ ಮಾಡುತ್ತಿದ್ದು, ಅಲ್ಲಿ ಕೆಲಸ ಮಾಡುತ್ತಿದ್ದ ಹಂತಕ ಪ್ರವೀಣ್‌ ಚೌಗಲೆ ಪರಿಚಯವಾಗಿತ್ತು. ಆದರೆ ಹಂತಕ ಚೌಗಲೆ ಆಕೆಯ ಮೇಲೆ ಅನುರಕ್ತನಾಗಿದ್ದ ಎಂದು ಹೇಳಲಾಗಿದೆ. ಅಯ್ನಾಜ್‌ ಗೆ ಆತನ ಬಗ್ಗೆ ಆಸಕ್ತಿ ಇತ್ತೋ ಇಲ್ಲವೋ ಗೊತ್ತಿಲ್ಲ, ಆದರೆ ಆಕೆ ಯಾವುದೋ ಕಾರಣಕ್ಕೆ ಆತನಿಂದ ದೂರವಾಗಿದ್ದಳು ಎಂದು ವರದಿಯಾಗಿದೆ. ಹಾಗಾಗಿ ಈ ದ್ವೇಷದಿಂದ ಆಕೆಯ ಕುಟುಂಬವನ್ನೇ ಸರ್ವನಾಶ ಮಾಡಲು ಮುಂದಾಗಿದ್ದ ಎಂದು ಪ್ರಾಥಮಿಕ ಮೂಲಗಳು ತಿಳಿಸಿದೆ.

ಆರೋಪಿ ಪ್ರವೀಣ್‌ ಚೌಗಲೆ.
Leave A Reply