7th Pay Commission: 2024ರ ಆರಂಭದಲ್ಲೇ ಸರ್ಕಾರಿ ನೌಕರರಿಗೆ 3 ಬಂಪರ್ ಗಿಫ್ಟ್- ಹೊಸ ವರ್ಷಕ್ಕೆ ವೇತನದಲ್ಲಿ ಭಾರೀ ಹೆಚ್ಚಳ
Business news 7th pay commission latest update deepavali bonus and da Arrears update
7th pay commision latest update : ಕೇಂದ್ರ (Central Government)ಸರ್ಕಾರಿ ನೌಕರರಿಗೆ ಈ ಬಾರಿಯ ದೀಪಾವಳಿ ಭರ್ಜರಿ ಗುಡ್ ನ್ಯೂಸ್(Good News)ಹೊರ ಬಿದ್ದಿದೆ. ದೀಪಾವಳಿ ಹಬ್ಬದ ಮೊದಲೇ ತುಟ್ಟಿಭತ್ಯೆಯನ್ನು ಏರಿಕೆ ಮಾಡಲಾಗಿತ್ತು. ಇದೀಗ, ದೀಪಾವಳಿ ಬೋನಸ್ (Deepavali Bonus)ಮತ್ತು ಡಿಎ(DA)ಅರಿಯರ್ (Arrears)ಕೂಡಾ ಖಾತೆಗೆ ಜಮೆ ಆಗಿದೆ. ಇದೀಗ ಹೊಸ ವರ್ಷದಲ್ಲಿ ಕೇಂದ್ರ ಸರ್ಕಾರಿ ನೌಕರರಿಗೆ(7th pay commision latest update) ಭರ್ಜರಿ ಗಿಫ್ಟ್ ಸಿಗಲಿದ್ದು, ಹೊಸ ವರ್ಷದ ಆರಂಭದಲ್ಲಿ ನೌಕರರ ವೇತನದಲ್ಲಿ ಗಣನೀಯ ಏರಿಕೆಯಾಗುವ ನಿರೀಕ್ಷೆಯಿದೆ.
ಕೇಂದ್ರ ಸರ್ಕಾರಿ ನೌಕರರಿಗೆ 2024 ರಿಂದಲೇ ವೇತನದಲ್ಲಿ ಏರಿಕೆಯಾಗಲಿದೆ. ಜುಲೈ, ಆಗಸ್ಟ್ ಮತ್ತು ಸೆಪ್ಟೆಂಬರ್ನ AICPI ಸೂಚ್ಯಂಕ ಸಂಖ್ಯೆಗಳು ಹೊರಬಿದ್ದಿದೆ. ಅಕ್ಟೋಬರ್, ನವೆಂಬರ್ ಮತ್ತು ಡಿಸೆಂಬರ್ ಅಂಕಿ ಅಂಶಗಳು ಇನ್ನೂ ಹೊರ ಬರಬೇಕಾಗಿದೆ. ಪ್ರಸ್ತುತ ಡಿಎ ಶೇಕಡಾ 46 ರಷ್ಟಿದ್ದು, ಆದರೆ, ಎಐಸಿಪಿಐ ಸೂಚ್ಯಂಕ ದತ್ತಾಂಶವನ್ನು ಗಮನಿಸಿದಾಗ ಡಿಎ ಹೆಚ್ಚಳವು ಶೇಕಡಾ 48.54 ಕ್ಕೆ ತಲುಪಿದೆ. ಸೂಚ್ಯಂಕವು ಪ್ರಸ್ತುತ 137.5 ಪಾಯಿಂಟ್ ಗಳಿದ್ದು, ಈ ಸಂದರ್ಭದಲ್ಲಿ ಮುಂದೆ 4-5 ಪ್ರತಿಶತದಷ್ಟು ಡಿಎ ಹೆಚ್ಚಳವಾಗುವ ಸಂಭವವಿದೆ. ಡಿಎ ಹೆಚ್ಚಳದ ಜೊತೆಗೆ ಟಿಎ ಕೂಡಾ ಹೆಚ್ಚಾಗುವ ಸಾಧ್ಯತೆಗಳಿವೆ. ಪ್ರಯಾಣ ಭತ್ಯೆಗಳನ್ನು ವಿವಿಧ ಪೇ ಬ್ಯಾಂಡ್ಗಳಿಗೆ ಲಗತ್ತಿಸಲಾಗುತ್ತದೆ. ಹೆಚ್ಚಿನ TPTA ನಗರಗಳಲ್ಲಿ, ಗ್ರೇಡ್ 1 ರಿಂದ 2ರ ದರಗಳು ಕ್ರಮವಾಗಿ 1800 ರೂ. ಮತ್ತು 1900 ರೂ., ಗ್ರೇಡ್ 3 ರಿಂದ 3600 ರೂ. + ತುಟ್ಟಿಭತ್ಯೆ ಸಿಗಲಿದೆ.
HRA ಪರಿಷ್ಕರಣೆ :
ಮೂರನೇ ಮತ್ತು ದೊಡ್ಡ ಬಹುಮಾನವು ಮನೆ ಬಾಡಿಗೆ ಭತ್ಯೆ (HRA) ರೂಪದಲ್ಲಿರಲ್ಲಿದ್ದು, ಮುಂದಿನ ವರ್ಷ HRA ಹೆಚ್ಚಳವಾಗಲಿದೆ. HRA ನಲ್ಲಿ ಮುಂದಿನ ಪರಿಷ್ಕರಣೆ ದರವು 3 ಪ್ರತಿಶತ ಇರಲಿದೆ. ನಿಯಮಗಳ ಅನುಸಾರ, ತುಟ್ಟಿಭತ್ಯೆ 50 ಮೀರಿದರೆ ಮನೆ ಬಾಡಿಗೆ ಭತ್ಯೆಯನ್ನು ಪರಿಷ್ಕರಣೆ ಆಗಲಿದೆ. ಪ್ರಸ್ತುತ HRA ಅನ್ನು 27, 24, 18 ಶೇಕಡಾದಲ್ಲಿ ನೀಡಲಾಗಿದೆ. ಇದನ್ನು ನಗರಗಳ X, Y, Z, ವರ್ಗಗಳಾಗಿ ವಿಂಗಡಿಸಲಾಗಿದ್ದು, ತುಟ್ಟಿಭತ್ಯೆ ಶೇಕಡಾ 50 ರಷ್ಟಿದ್ದರೆ, HRA ಶೇಕಡಾ 30, 27, 21 ಕ್ಕೆ ಹೆಚ್ಚಳವಾಗಲಿದೆ.
ಇದನ್ನೂ ಓದಿ: ರಾಜ್ಯದ ಖಾಸಗಿ ವಾಹನಗಳಿಗೆ ಬಂತು ಹೊಸ ರೂಲ್ಸ್ – ಡಿಸೆಂಬರ್ ನಿಂದಲೇ ಜಾರಿ, ಸರ್ಕಾರದ ಖಡಕ್ ಸೂಚನೆ