Uttar pradesh: ಶಾಲೆಯೊಳಗೇ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಕೊಟ್ಟ ಶಿಕ್ಷಕ- ಇಲ್ಲಿದೆ ಬೆಚ್ಚಿಬೀಳಿಸೋ ವಿಡಿಯೋ!!

UttarPradesh crime news Mathura teacher tries to assult school student in classroom case registered

Share the Article

UttarPradesh teacher assult student : ಶಿಕ್ಷಕರು ಮಕ್ಕಳ ಬಾಳ ಬೆಳಗುವ ದೀಪ ಹಚ್ಚುವರು. ಅಂಧಕಾರವನ್ನು ಹೋಗಲಾಡಿಸಿ ಜ್ಯೋತಿ ಬೆಳಗುವವರು. ಆದರೆ ಇಲ್ಲೊಂದೆಡೆ ಪಾಪಿ ಶಿಕ್ಷಕನೊಬ್ಬ ವಿದ್ಯಾರ್ಥಿನಿಯೊಬ್ಬಳ ಬಾಳನ್ನೇ ಕತ್ತಲೆಗೆ ದೂಡಲು ಮುಂದಾಗಿ ಸಿಕ್ಕಿಬಿದ್ದಿದ್ದಾನೆ.

ಹೌದು, ಉತ್ತರ ಪ್ರದೇಶದ(Uttar pradesh) ಮಥುರಾದಲ್ಲಿ ಶಾಲಾ ಶಿಕ್ಷಕನೊಬ್ಬ ವಿದ್ಯಾರ್ಥಿನಿಗೆ ಕಿರುಕುಳ (UttarPradesh teacher assult student) ನೀಡಿದ ಅಮಾನವೀಯ ಘಟನೆಯೊಂದು ನಡೆದಿದ್ದು ಈ ಭಯಾನಕ ದೃಶ್ಯ ಸಿಸಿ ಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು ಎಲ್ಲರೂ ಬೆಚ್ಚಿಬೀಳುವಂತೆ ಮಾಡಿದೆ.

ಶಾಲೆ ಮುಗಿದ ಬಳಿಕ ಮನೆಗೆ ಹೋಗಬೇಡ ಇಲ್ಲೇ ಇರು ಎಂದು ಶಿಕ್ಷಕ ಗೋವಿಂದ್​ ಹೇಳಿದ್ದು, ಬಳಿಕ ಲೈಂಗಿಕ ಕಿರುಕುಳ ನೀಡಿದ್ದಾನೆ. ಅಂದಹಾಗೆ ಆ ಶಿಕ್ಷಕನನ್ನು ಗೋವಿಂದ ಎಂದು ಗುರುತಿಸಲಾಗಿದ್ದು, ಆತನ ನೀಚ ಕೃತ್ಯ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗ್ತಿದೆ.

ವಿದ್ಯಾರ್ಥಿಯು ಶಿಕ್ಷಕನ ಉದ್ದೇಶ ಅರಿತು ಕೂಡಲೇ ಸ್ಥಳೀಯ ಪೊಲೀಸ್​ ಠಾಣೆಗೆ ತೆರಳಿ ಆರೋಪಿ ಶಿಕ್ಷಕನ ವಿರುದ್ಧ ದೂರು ನೀಡಿದ್ದಾರೆ. ಈತನ ಸೆರೆಗೆ ಪೊಲೀಸರು ಬಲೆ ಬೀಸಿದ್ದು, ಆರೋಪಿ ಗೋವಿಂದ್​ ತಲೆಮರೆಸಿಕೊಂಡಿದ್ದಾನೆ.

ಇದನ್ನೂ ಓದಿ: Gmail: ಇವರೆಲ್ಲರ ಜಿಮೇಲ್ ಅಕೌಂಟ್ ಕ್ಯಾನ್ಸಲ್ – ರದ್ದಾಗಬಾರದು ಅಂದ್ರೆ ತಕ್ಷಣ ಹೀಗೆ ಮಾಡಿ!!

Leave A Reply